ಪಂಡಿತ್ ದೀನದಯಾಳ್ ಉಪಾಧ್ಯಾಯರ ಜನ್ಮದಿನಾಚರಣೆ ಪ್ರಯುಕ್ತ ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರದ ಜಪ್ಪಿನಮೊಗರು ವಾರ್ಡಿನ ವತಿಯಿಂದ ನಿವೃತ್ತ ಯೋಧರಿಗೆ ಸನ್ಮಾನ ಮತ್ತು ವಿಸ್ತಾರಕರಿಗೆ ಗೌರಾವರ್ಪಣೆ ಕಾರ್ಯಕ್ರಮ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಮಂಗಳೂರು ದಕ್ಷಿಣ ಕ್ಷೇತ್ರ ಅಧ್ಯಕ್ಷ ವೇದವ್ಯಾಸ್ ಕಾಮತ್ ಮಾತನಾಡಿ ಪಂಡಿತ್ ದೀನ್‌ದಯಾಳ್ ಉಪಾಧ್ಯಾಯರು ತನ್ನ ಜೀವನವನ್ನೇ ಸಂಘಟನೆಗಾಗಿ ಮುಡಿಪಾಗಿಟ್ಟವರು. ಇವರ ಜೀವನ ಶೈಲಿಯನ್ನು ಕಾರ್ಯಕರ್ತರು ಪ್ರತಿಯೊಬರೂ ಅಳವಡಿಸಿಕೊಂಡು ಹೋಗಬೇಕು ಎಂದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ವಿಸ್ತಾರಕ, ಬಿಜೆಪಿ ಮುಖಂಡ ದಿನೇಶ್ ಅಮ್ಟೂರು ಮಾತನಾಡಿ ದೀನ್‌ದಯಾಳ್ ಉಪಾಧ್ಯಾಯರ ಆದರ್ಶವನ್ನು ನಾವೆಲ್ಲರೂ ತಿಳಿದುಕೊಂಡಾಗ ಮಾತ್ರ ಬಿಜೆಪಿಯನ್ನು ಬೂತ್‌ಮಟ್ಟದಿಂದ ಬೆಳೆಸಲು ಸಾಧ್ಯವಿದೆ ಎಂದರು. ಕೇಂದ್ರ ಸರಕಾರದ ವಿವಿಧ ಯೋಜನೆಗಳ ಬಗ್ಗೆ ಅವರು ಮಾಹಿತಿ ನೀಡಿದರು.
ನಿವೃತ್ತ ಯೋಧರಾದ ಭಾಸ್ಕರ ಶೆಟ್ಟಿ, ಸೋಮಪ್ಪ ಪೂಜಾರಿ, ಗುಣಪಾಲ ಎಚ್., ಗುಮ್ನಾಮ್ ದೇವು ಚಾಕೋ, ಕೆ.ಟಿ. ಜೋಮ್ಸು, ಉಪೇಂದ್ರ ಸಾಲಿಯಾನ್ ಅವರನ್ನು ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ಗುಣಪಾಲ್ ಅವರು ಮಾತನಾಡಿ ದೇಶದಲ್ಲಿ ಕಳ್ಳನೋಟು ಹೆಚ್ಚಾಗಿ ಸೈನಿಕರು ತೊಂದರೆ ಅನುಭವಿಸಬೇಕಾಗಿತ್ತು. ಆದರೆ ನೋಟು ಅಮಾನ್ಯ ಕೇಂದ್ರ ಸರಕಾರದ ದಿಟ್ಟ ಹೆಜ್ಜೆಯಾಗಿದೆ ಎಂದರು.
ಶಿವಪ್ರಸಾದ್ ಶೆಟ್ಟಿ, ಬಾಸ್ಕರಚಂದ್ರ ಶೆಟ್ಟಿ, ಕಿರಣ್ ರೈ, ಜಿ.ಎಸ್.ಸುರೇಂದ್ರ, ಸುಮತಿ, ಸುಜಾತ, ಸವಿತ, ಶ್ವೇತಾ, ಸ್ನೇಹ, ಪೂಜಾ, ನವೀನ್, ದಿನೇಶ್, ರಾಜೇಶ್, ಹಾಗೂ ಪಕ್ಷದ ಪ್ರಮುಖರಾದ ಲಕ್ಷ್ಮೀಶ್ ಸುವರ್ಣ, , ನವೀನ್ ಸುವರ್ಣ, ಜಿಲ್ಲಾ ಮಹಿಳಾ ಮೋರ್ಚ ಪ್ರಮುಖರಾದ ವೀಣಾ ಮಂಗಳ, ಶಿವರಾಜ್, ಸ್ಲಂ ಮೋರ್ಚದ ಕಾರ್ಯದರ್ಶಿ ಪ್ರಸಾದ್ ಶೆಟ್ಟಿ, ಸೂರ್‍ಯನಾರಾಯಣ ದೇವಸ್ಥಾನದ ಪ್ರಮುಖರಾದ ಗಣೇಶ್ ಶೆಟ್ಟಿ ಗುಡ್ಡೆಗುತ್ತು, ರಿತೇಶ್, ಸುದೇಶ್ ಕೀರ್ತಿ, ಸಂತೋಷ್, ಸತೀಶ್, ದಿವಾಕರ ಮತ್ತಿತರರು ಹಾಜರಿದ್ದರು.
Be the first to comment on "ನಿವೃತ್ತ ಯೋಧರಿಗೆ ಸನ್ಮಾನ, ವಿಸ್ತಾರಕರಿಗೆ ಗೌರವಾರ್ಪಣೆ"