ಪ್ರಧಾನ ಮಂತ್ರಿ ನರೇಂದ್ರ ಮೋಧಿಯ ಉಜ್ವಲ ಯೋಜನೆ ಪ್ರತಿ ಗ್ರಾಮೀಣ ಮಹಿಳೆಯ ಕಣ್ಣೀರೊರೆಸುವ ಅದ್ಬುತವಾತ ಕಾರ್‍ಯಕ್ರಮ , ಕಡುಬಡತನದಲ್ಲಿರುವ ಮಹಿಳೆಯರು ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಸಂಪರ್ಕವನ್ನು ಪಡೆಯಬೇಕು, ಆ ಮೂಲಕ ದೇಶದ ಪ್ರತಿಯೊಂದು ಮನೆಯು ಹೊಗೆ ಮುಕ್ತವಾಗಬೇಕು ಎನ್ನುವ ಕನಸು ನಿಜಕ್ಕೂ ಶ್ಲಾಘನೀಯ ಎಂದು ಬಿಜೆಪಿ ನಾಯಕ ಉಳಿಪ್ಪಾಡಿಗುತ್ತು ರಾಜೇಶ್ ನಾಯಕ್ ಹೇಳಿದರು. ಅವರು ಬಂಟ್ವಾಳ ತಾಲೂಕಿನ ವಾಮದಪದವು ಗಣೇಶ್ ಮಂದಿರದಲ್ಲಿ ನಡೆದ ಚೆನ್ನೈತ್ತೋಡಿ ಗ್ರಾ.ಪಂ.ವ್ಯಾಪ್ತಿಯ ಫಲಾನುಭವಿಗಳಿಗೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ವಿತರಣೆ ಕಾರ್‍ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೇಂದ್ರ ಸರಕಾರದ ಯೋಜನೆಯನ್ನು ಪ್ರತಿ ಗ್ರಾಮದ ಮೂಲೆ ಮೂಲೆಗೆ ಮುಟ್ಟಿಸುವುದು ನನ್ನ ಧರ್ಮ ಮತ್ತು ಕರ್ತವ್ಯ , ಇನ್ನು ಮುಂದೆಯೂ ಸರಕಾರದ ಉತ್ತಮ ಯೋಜನೆಗಳನ್ನು ಬಂಟ್ವಾಳ ಕ್ಷೇತ್ರದ ಮನೆ ಮನೆಗೆ ಮುಟ್ಟಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತೇನೆ ಎನ್ನುವ ಭರವಸೆಯನ್ನು ನೀಡುತ್ತೇನೆ ಎಂದರು.
ಕೇಂದ್ರ ಸರಕಾರದ ಮೋದಿಯವರ ಜನಪರ ಯೋಜನೆಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವ ಜವಬ್ದಾರಿ ನಮ್ಮ ಎಲ್ಲಾ ಕಾರ್‍ಯಕರ್ತರಿಗಿದೆ ಎಂದರು. ರಾಜ್ಯ ಸಹ ವಕ್ತಾರೆ ಸುಲೋಚನಾ ಜಿಕೆ ಭಟ್ , ವಾಮದಪದವು ಹಾಲು ಉದ್ಪಾದಕರ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ಚೌಟ, ವಾಮದಪದವು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಯಶೋದರ ಶೆಟ್ಟಿ, ಗ್ರಾ.ಪಂ.ಸದಸ್ಯ ಮೋಹನದಾಸ ಗಟ್ಟಿ, ಮಂಗಳೂರು ಎಪಿಎಂಸಿ ಸದಸ್ಯ ಪುರುಷೋತ್ತಮ ಶೆಟ್ಟಿ, ಹಾಪ್ ಕಾಮ್ಸ್ ನಿರ್ದೇಶಕ ವಿಜಯ ರೈ, ಮತ್ತು ವೆಂಕಟೇಶ್ ಭಟ್ ಉಪಸಿತರಿಸದ್ದರು. ಗ್ಯಾಸ್ ಏಜೆನ್ಸಿ ಮಾಲಕ ಪ್ರಬಾಕರ ಶೆಟ್ಟಿ ಸ್ವಾಗತಿಸಿ ಸಂತೋಷ್ ಜೈನ್ ವಂದಿಸಿದರು.
Be the first to comment on "ವಾಮದಪದವಿನಲ್ಲಿ ಉಜ್ವಲ ಯೋಜನೆ ಅಡುಗೆ ಅನಿಲ ವಿತರಣೆ"