- ಡಾ. ಎ.ಜಿ.ರವಿಶಂಕರ್
- ಅಂಕಣ: ಪಾಕಶಾಲೆಯೇ ವೈದ್ಯಶಾಲೆ
ಪಚ್ಚೆ ಹೆಸರನ್ನು ಬೇಯಿಸಿ ತಿನ್ನುವುದು ಅಥವಾ ಹೆಸರು ಬೇಳೆಯ ಪಾಯಸ ಎಂದರೆ ಕೆಲವರಿಗೆ ಬಹು ಇಷ್ಟವಾದ ವಿಷಯ.ಇದು ಆಬಾಲ ವೃದ್ಧರಿಗೆ ಪುಷ್ಟಿದಾಯಕವೂ ಸತ್ವಪೂರಕವೂ ಆಗಿದೆ.
- ಹೆಸರಿನ ಪುಡಿಯನ್ನು ನೀರಿನಲ್ಲಿ ಕಲಸಿ ತಲೆಗೆ ಹಚ್ಚುವುದರಿಂದ ತಲೆಯ ಹೊಟ್ಟು ಕಡಿಮೆಯಾಗುತ್ತದೆ.
- ಹೆಸರಿನ ಹುಡಿಗೆ ಸ್ವಲ್ಪ ಅರಸಿನ ಪುಡಿ ಸೇರಿಸಿ ಜೇನುತುಪ್ಪದಲ್ಲಿ ಕಲಸಿ ಮುಖಕ್ಕೆ ಹಚ್ಚುವುದರಿಂದ ಮೊಡವೆ ಕಡಿಮೆಯಾಗುತ್ತದೆ ಮತ್ತು ಮುಖದ ಕಾಂತಿ ಅಧಿಕವಾಗುತ್ತದೆ.
- ಚಿಕ್ಕ ಮಕ್ಕಳಿಗೆ ಹೆಸರಿನ ಗಂಜಿ ಕೊಡುವುದರಿಂದ ಶರೀರದಲ್ಲಿ ಮಾಂಸ ತುಂಬಿಕೊಳ್ಳುತ್ತದೆ ಮತ್ತು ಸತ್ವಗಳ ಕೊರತೆಯಿಂದ ಕಂಡುಬರುವ ಗುದ ಭ್ರಂಶವು (rectal prolapse ) ವಾಸಿಯಾಗುತ್ತದೆ.
- ಹೆಸರಿನ ಪುಡಿಯನ್ನು ನೀರಿನಲ್ಲಿ ಕಲಸಿ ತೆಳ್ಳಗಿನ ಬಟ್ಟೆಗೆ ಸವರಿ ಗುದದ್ವಾರಕ್ಕೆ ಬಿಗಿಯಾಗಿ ಕಟ್ಟುವುದರಿಂದ ಗುದ ಭ್ರಂಶವು ಕಡಿಮೆಯಾಗುತ್ತದೆ.
- ಹೆಸರನ್ನು ಬೇಯಿಸಿ ಬಟ್ಟೆಯಲ್ಲಿ ಕಟ್ಟಿ ಶೇಕ ಕೊಡುವುದರಿಂದ ಉರಿ ಹಾಗು ನೋವಿನಿಂದ ಕೂಡಿದ ಹುಣ್ಣುಗಳು ಬೇಗನೆ ವಾಸಿಯಾಗಲು ಸಹಕರಿಸುತ್ತದೆ.
- ಹೆಸರಿನ ಪುಡಿಯನ್ನು ನೀರಿನಲ್ಲಿ ಕಲಸಿ ಕಣ್ಣಿನ ರೆಪ್ಪೆಯ ಮೇಲೆ ಹಚ್ಚುವುದರಿಂದ ಕಣ್ಣಿನ ದೃಷ್ಟಿ ಸಾಮರ್ಥ್ಯ ಅಧಿಕವಾಗುತ್ತದೆ.
- ಹೆಸರನ್ನು ಬೇಯಿಸಿ ತೆಗೆದ ನೀರನ್ನು ಸರ್ಪಸುತ್ತಿನ ಮೇಲೆ (herpis ) ಸುರಿಯುವುದರಿಂದ ಉರಿ ಹಾಗು ನೋವು ಕಡಿಮೆಯಾಗುತ್ತದೆ.
- ಹೆಸರನ್ನು ತುಪ್ಪದಲ್ಲಿ ಬೇಯಿಸಿ ನಂತರ ಆ ತುಪ್ಪವನ್ನು ಹಲ್ಲು ಹಾಗು ವಸಡುಗಳಿಗೆ ಹಚ್ಚಿದರೆ ಹಲ್ಲುಗಳು ದೃಢವಾಗುತ್ತವೆ ಮತ್ತು ದಂತ ರೋಗಗಳು ಕಡಿಮೆಯಾಗುತ್ತವೆ.
- ಹೆಸರನ್ನು ನೀರಿನಲ್ಲಿ ಹಿಂದಿನ ರಾತ್ರಿ ನೆನೆಹಾಕಿ ಮರುದಿವಸ ಆ ನೀರನ್ನು ಕುಡಿಯುವುದರಿಂದ ಅತಿಯಾದ ಬಾಯಾರಿಕೆ ,ವಾಂತಿ ಮತ್ತು ಮೂಗು, ವಸಡು ಇತ್ಯಾದಿಗಳಿಂದ ರಕ್ತ ಬರುವುದು ಕಡಿಮೆಯಾಗುತ್ತದೆ.
- ಹೆಸರನ್ನು ಮೊಳಕೆಬರಿಸಿ ತಿನ್ನುವುದರಿಂದ ಮಧುಮೇಹದ ಹಾಗು ಕುಷ್ಟ ರೋಗಿಗಳ ತೂಕ ಕಾಪಾಡಲು ಸಹಕಾರಿಯಾಗುತ್ತದೆ ಮತ್ತು ನಿತ್ರಾಣ ಕಡಿಮೆಯಾಗುತ್ತದೆ.
Be the first to comment on "ಹೆಸರಲ್ಲೇನಿದೆ?"