ಆಟಿ ಅಮವಾಸ್ಯೆಯ ವಿಶೇಷ ದಿನವಾದ ಭಾನುವಾರ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಪಾಣೆಮಂಗಳೂರು- ಅಮ್ಟೂರು-ಗೋಳ್ತಮಜಲು ಗ್ರಾಮಗಳ ತ್ರಿವೇಣಿ ಸಂಗಮದ ಗಡಿ ಪ್ರದೇಶವಾದ ನರಹರಿ ಪರ್ವತದಲ್ಲಿರುವ ಶ್ರೀ ನರಹರಿ ಸದಾಶಿವ ದೇವಾಲಯ ಸನ್ನಿಧಿಯಲ್ಲಿ ತೀರ್ಥಸ್ನಾನಕ್ಕೆ ಸಾವಿರಾರು ಭಕ್ತರು ಆಗಮಿಸಿ ಪುಣ್ಯಸ್ನಾನಗೈದು ದೇವರ ಆಶೀರ್ವಾದ ಪಡೆದರು.
ಬೆಳಗ್ಗಿನಿಂದಲೇ ಸರತಿ ಸಾಲಿನಲ್ಲಿ ಮಹಿಳೆಯರು, ಮಕ್ಕಳ ಸಹಿತ ನಿಂತ ಭಕ್ತರು, ಸದಾಶಿವನ ಸಾನಿಧ್ಯದಲ್ಲಿರುವ ಶಂಖ, ಚಕ್ರ, ಗದಾ ಮತ್ತು ಪದ್ಮದ ಆಕಾರದ ತೀರ್ಥಕೂಪದಲ್ಲಿ ತೀರ್ಥಸ್ನಾನ ನೆರವೇರಿಸಿದರು. ಹೀಗೆ ಮಾಡಿದರೆ, ಇಷ್ಟಾರ್ಥ ಸಿದ್ಧಿಸುವುದು ಎಂಬ ನಂಬಿಕೆ ಇದೆ.
ನವವಧುವರರು, ಶಿವಭಕ್ತರು ಸಾಲು ಸಾಲಾಗಿ ಪರ್ವತವೇರಿ ಪವಿತ್ರವಾದ ನಾಲ್ಕು ಕೆರೆಗಳಲ್ಲಿ ಮಿಂದು, ಎಲೆ, ಅಡಿಕೆ ಅರ್ಪಣೆ ಗೈದು ವಿನಾಯಕ, ನರಹರಿ ಸದಾಶಿವ ಹಾಗೂ ನಾಗರಾಜನಿಗೆ ವಂದಿಸಿ ನಾನಾ ಸೇವೆಗಳನ್ನು ಕೈಗೊಂಡರು.
Be the first to comment on "ನರಹರಿ ಸದಾಶಿವ ಪರ್ವತದಲ್ಲಿ ಆಟಿ ಅಮಾವಾಸ್ಯೆ ತೀರ್ಥಸ್ನಾನ"