ಒಂದು ಮೊಟ್ಟೆಯ ಕಥೆಯ ಇ ಮೇಡಂ ಅಮೃತಾ ನಾಯಕ್ ಹೇಳೋದು ಹೀಗೆ
- ಅನಿತಾ ಬನಾರಿ
ಮುದ್ದು ಮುಖದ ಈ ಕರಾವಳಿಯ ಚೆಲುವೆಯ ಹೆಸರು ಅಮೃತಾ ನಾಯಕ್. ಜನರ ಮನ ಸೆಳೆದಿರುವ ಒಂದು ಮೊಟ್ಟೆಯ ಕಥೆ ಚಿತ್ರದಲ್ಲಿ ಎಕನಾಮಿಕ್ಸ್ ಲೆಕ್ಚರರ್ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡವರು ಅಮೃತಾ..
ಒಂದು ಮೊಟ್ಟೆಯ ಕಥೆಯಲ್ಲಿ ಇ- ಮೇಡಂ ಎಂದೇ ಕರೆಸಿಕೊಳ್ಳುವ ಅಮೃತಾ ಮೊದಲ ಚಿತ್ರದಲ್ಲಿಯೇ ನನಗೆ ಒಂದು ಒಳ್ಳೆಯ ಉತ್ತಮ ತಂಡ ಸಿಕ್ಕಿದೆ. ಆದುದರಿಂದ ಯಾವುದೇ ಭಯವಿಲ್ಲದೇ ನಟಿಸಲು ಸಾಧ್ಯವಾಯಿತು’’ ಎನ್ನುತ್ತಾರೆ. ಅಮೃತಾಗೆ ಇದು ಬೋಳು ತಲೆಯ ಕಥೆ ಎಂದು ಗೊತ್ತಾದದ್ದು ಶೂಟಿಂಗ್ ಗೆ ಹೋದಾಗಲೇ ಅಂತೆ.
ಬಾಲ್ಯದಿಂದಲೂ ನಟನೆಯತ್ತ ವಿಶೇಷ ಒಲವು . ಯಶೋಧೆ ಧಾರಾವಾಹಿಯಲ್ಲಿ ಮೊದಲ ಬಾರಿ ಬಣ್ಣ ಹಚ್ಚಿದ್ದರು. ಆದರೂ ಸಿನಿಮಾದಲ್ಲಿ ನಟಿಸಬೇಕೆಂಬುದೇ ಅವರ ಬಾಲ್ಯದ ಕನಸು. ತನ್ನ ಕನಸು ಇಷ್ಟು ಬೇಗ ನನಸಾಗುತ್ತದೆ ಎಂದು ಅಂದುಕೊಂಡಿರಲಿಲ್ಲ ಎನ್ನುವ ಅಮೃತಾ ಸ್ನೇಹಿತರ ಒತ್ತಾಯದ ಮೇರೆಗೆ ಸಿನಿಮಾದ ಆಡಿಶನ್ ನಲ್ಲಿ ಭಾಗವಹಿಸಿದ್ದರು. ಅದೃಷ್ಟ ಎಂಬಂತೆ ಸೆಲೆಕ್ಟ್ ಆದರು. ನೀವು ಎಕನಾಮಿಕ್ಸ್ ಲೆಕ್ಚರರ್ ಪಾತ್ರದಲ್ಲಿ ನಟಿಸಬೇಕು ಎಂದಾಗ ಅಮೃತಾರಿಗೆ ಒಂದು ಕ್ಷಣ ಭಯವಾಗಿತ್ತು. ತಾನು ಈ ಪಾತ್ರವನ್ನು ನಿರ್ವಹಿಸಬಲ್ಲೆನಾ ಎಂಬ ಆತಂಕ ಅಮೃತಾರಿಗಿತ್ತು. ಆದರೆ ಆಮೇಲೆ ಎಲ್ಲಾ ಸರಿ ಆಯಿತು ಎಂದು ನಗುತ್ತಾ ಹೇಳುತ್ತಾರೆ ಕುಡ್ಲದ ಕುವರಿ.
ಇದೀಗ ಒಂದೆರಡು ಸಿನಿಮಾ ಅವಕಾಶಗಳು ಅಮೃತಾರನ್ನು ಅರಸಿ ಬಂದಿದ್ದು ಮುಂದೆ ತನ್ನಿಚ್ಛೆಯ ನಟನಾ ಕ್ಷೇತ್ರದಲ್ಲಿ ಮುಂದುವರಿಯುವ ಬಯಕೆ. ಅಮೃತಾ ಬಣ್ಣದ ಲೋಕದ ಜರ್ನಿಗೆ ಆಲ್ ದಿ ಬೆಸ್ಟ್.
Be the first to comment on "ಶೂಟಿಂಗ್ ಗೆ ಹೋದಾಗಲೇ ಗೊತ್ತಾಯ್ತು ಇದು ಬೋಳು ತಲೆಯ ಕತೆ!!"