- ನರಿಕೊಂಬು ಗ್ರಾಮದ ಹಲವರು ಕಾಂಗ್ರೆಸ್ ಸೇರ್ಪಡೆ
ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ ಹಲವು ಕಾಮಗಾರಿಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ಹಲವು ಅಭಿವೃದ್ಧಿ ಕೆಲಸಗಳು ನಡೆದಿವೆ. ಬಹುಗ್ರಾಮ ಕುಡಿಯುವ ನೀರು, ರಸ್ತೆಗಳು, ಬಸ್ ನಿಲ್ದಾಣ, ಸಮುದಾಯ ಭವನ ಇವುಗಳಲ್ಲಿ ಸೇರಿವೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ನರಿಕೊಂಬು ಗ್ರಾಮದ ಬಿಜೆಪಿಯಲ್ಲಿದ್ದ ಕಾರ್ಯಕರ್ತರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳಿಸಿದ ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಸುದ್ದಿ, ವದಂತಿಗಳನ್ನು ಹರಡಿಸುವ ಕೆಲಸವನ್ನು ಯುವಜನಾಂಗ ಮಾಡುವುದು ಬೇಡ. ನಮ್ಮ ಪಕ್ಷ ಯಾವ ಕೋಮು, ಜಾತಿಯ ಪರವಾಗಿಯೂ ಅಲ್ಲ, ಎಲ್ಲ ರೀತಿಯ ಕೋಮುವಾದವನ್ನು ನಾನು ವಿರೋಧಿಸುತ್ತೇನೆ ಎಂದರು.
ಪಕ್ಷಕ್ಕೆ ಸೇರ್ಪಡೆ:
ಈ ಸಂದರ್ಭ ನರಿಕೊಂಬು ಗ್ರಾಮದ ಬಿಜೆಪಿಯಲ್ಲಿದ್ದ ಎರಡು ಬಾರಿ ಪಂಚಾಯತ್ ಸದಸ್ಯೆ ಹಾಗೂ ಈಗಿನ ಗ್ರಾಪಂ ಉಪಾಧ್ಯಕ್ಷೆ ರಾಜೀವಿ ಕೃಷ್ಣಪ್ಪ ಪೂಜಾರಿ, ಗ್ರಾಪಂ ಸದಸ್ಯ ಹಾಗೂ ಬಿಜೆಪಿಯ ಸ್ಥಳೀಯ ಸಮಿತಿ ಮಾಜಿ ಅಧ್ಯಕ್ಷ ಮಾಧವ ಪೂಜಾರಿ ಕರ್ಬೆಟ್ಟು, ಚೇತನ್ ಪೂಜಾರಿ ಬೋಳಂತೂರು, ಹೂವಪ್ಪ ಪೂಜಾರಿ, ರಾಜೇಶ್ ಪೂಜಾರಿ, ವಸಂತ ಸಪಲ್ಯ, ಪ್ರಮೀಳಾ ವಸಂತ, ಸತೀಶ್ ಪೂಜಾರಿ ಹೊಸಮನೆ, ಭರತ್ ರಾಜ್ ಸಪಲ್ಯ, ಹೇಮಾವತಿ ಯೋಗೀಶ್ ಕಲ್ಯಾರು, ಶ್ರೀನಾಥ್ ಪೂಜಾರಿಹೊಸಮನೆ, ಸಾವಿತ್ರಿ ತಿಮ್ಮಪ್ಪ ಪೂಜಾರಿ, ಅಜಯ್ ಪೂಜಾರಿ ಕರ್ಬೆಟ್ಟು, ವಿಲ್ರೆಡ್ ಬರ್ಬೊಜ, ದೇಜಪ್ಪ ಪೂಜಾರಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಪಿಯುಸ್ ಎಲ್. ರೋಡ್ರಿಗಸ್, ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿಗಳಾದ ಎಂ.ಎಸ್.ಮಹಮ್ಮದ್, ಮಮತ ಗಟ್ಟಿ, ಜಿಪಂ ಸದಸ್ಯರಾದ ಮಂಜುಳಾ ಮಾವೆ, ಚಂದ್ರಪ್ರಕಾಶ್ ಶೆಟ್ಟಿ, ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ಬಾಸ್ ಆಲಿ, ಬಂಟ್ವಾಳ ಬ್ಲಾಕ್ ಅಧ್ಯಕ್ಷ ಮಾಯಿಲಪ್ಪ ಸಾಲಿಯಾನ್, ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್, ಪಕ್ಷ ಪ್ರಮುಖರಾದ ಜನಾರ್ದನ ಚಂಡ್ತಿಮಾರ್, ಮಾಧವ ಮಾವೆ, ಆಲೋನ್ಸ್ ಮಿನೇಜಸ್, ನರಿಕೊಂಬು ವಲಯ ಅಧ್ಯಕ್ಷ ಉಮೇಶ್ ಬೋಳಂತೂರು ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.
Be the first to comment on "ಬಂಟ್ವಾಳ ಕ್ಷೇತ್ರದಲ್ಲಿ ಪ್ರಗತಿ ಹಲವು: ರಮಾನಾಥ ರೈ"