ಪರಮ ಪೂಜ್ಯ 108 ಮುನಿ ಶ್ರೀ ವೀರ ಸಾಗರ ಮಹಾರಾಜರು ಪಾಣೆಮಂಗಳೂರು ಶ್ರೀಅನಂತ ನಾಥ ಸ್ವಾಮೀ ಜಿನ ಚೈತ್ಯಾಲಯದಲ್ಲಿ ಭವ್ಯ ಮಂಗಲ ವರ್ಷಾಯೋಗ – ಚಾತುರ್ಮಾಸವನ್ನು ಆಚರಿಸುತ್ತಿದ್ದಾರೆ. ಆ ಪ್ರಯುಕ್ತ ದಿನಾಂಕ 16.07.2017 ಆದಿತ್ಯವಾರ ಮುನಿಶ್ರೀಗಳ ಪಾವನ ಸಾನ್ನಿಧ್ಯದಲ್ಲಿ, ಮಂಗಳೂರಿನ ಶ್ರೀಮತಿ ಇಂದಿರಾ ದೇವಿಯಮ್ಮ ಮತ್ತು ಮಕ್ಕಳು, ರಾಜಗೃಹ ಇವರ ವತಿಯಿಂದ ಶ್ರೀ ಭಕ್ತಾಮರ ಆರಾಧನೆಯು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಶ್ರಾವಕ ಬಂಧುಗಳ ಭಾಗವಹಿಸುವಿಕೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮುನಿಶ್ರೀಗಳ ಮಂಗಲ ಪ್ರವಚನ ಕಾರ್ಯಕ್ರಮ ನಡೆಯಿತು.
ರತ್ನತ್ರಯಗಳಾದ ಸಮ್ಯಕ್ ದರ್ಶನ, ಸಮ್ಯಕ್ ಜ್ಞಾನ ಮತ್ತು ಸಮ್ಯಕ್ ಚಾರಿತ್ರ್ಯಗಳನ್ನು ನಿಷ್ಠೆಯಿಂದ ಪಾಲನೆ ಮಾಡಿದಲ್ಲಿ, ಪ್ರತಿಯೊಬ್ಬ ಶ್ರಾವಕನೂ ಮಿತ್ಯಾತ್ವ ಹಾದಿ ತೊರೆದು, ಧರ್ಮ ಸಂಸ್ಕಾರ ಪಡೆದು ಮೋಕ್ಷ ಮಾರ್ಗದಲ್ಲಿ ಸಾಗಬಹುದು ಎಂದು ಮುನಿ ಶ್ರೀ ವೀರ ಸಾಗರ ಮಹಾರಾಜರು ತಮ್ಮ ಮಂಗಲ ಪ್ರವಚನದಲ್ಲಿ ತಿಳಿಸಿದರು.
ಮಂಗಲ ಪ್ರವಚನದ ನಂತರ ಧರ್ಮ ಸಭೆಯಲ್ಲಿ ಶ್ರಾವಕ ಬಂಧುಗಳ ಧಾರ್ಮಿಕ ಪ್ರಶ್ನೆಗಳಿಗೆ ಪೂಜ್ಯ ಮುನಿ ಮಹಾರಾಜರು ಉತ್ತರಿಸಿದರು.
ಆರಾಧನೆ ಕಾರ್ಯಕ್ರಮದಲ್ಲಿ ಮಂಗಳೂರು, ಮೂಡುಬಿದಿರೆ,ವೇಣೂರು, ಪುತ್ತೂರು, ಕಾರ್ಕಳ, ಕಳಸ, ಸಂಸೆ ಮುಂತಾದ ಕಡೆಗಳಿಂದ ಅನೇಕ ಶ್ರಾವಕ ಬಂಧುಗಳು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಡಿ. ರಾಜೇಂದ್ರ ಕುಮಾರ್ ಮತ್ತು ಡಾ|ನೀತಾ ರಾಜೇಂದ್ರ ಕುಮಾರ್,ಮಂಜುಳಾ ಅಭಯಚಂದ್ರ ಜೈನ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಚಾತುರ್ಮಾಸ ಸಮಿತಿಯ ರತ್ನಾಕರ್ ಜೈನ್ ಮಂಗಳೂರು, ಸುದರ್ಶನ್ ಜೈನ್, ಸಂಪತ್ ಕುಮಾರ್ ಶೆಟ್ಟಿ, ಧರಣೇಂದ್ರ ಇಂದ್ರ, ಸುಭಾಶ್ಚಂದ್ರ ಜೈನ್, ಭುವನೇಂದ್ರ ಇಂದ್ರ, ಹರ್ಷರಾಜ್ ಬಲ್ಲಾಳ್, ದೀಪಕ್ ಇಂದ್ರ, ಆದಿರಾಜ್ ಜೈನ್, ಭರತ್ ರಾಜ್ ಜೈನ್ ಮುಂತಾದವರು ಉಪಸ್ಥಿತರಿದ್ದರು.
Be the first to comment on "ಪಾಣೆಮಂಗಳೂರು ಚಾತುರ್ಮಾಸ- ಭಕ್ತಾಮರ ಆರಾಧನೆ, ಮಂಗಲ ಪ್ರವಚನ"