ಪಂ. ದೀನದಯಾಳ್ ಉಪಾಧ್ಯಾಯರ ಜನ್ಮ ಶತಾಬ್ಧಿ ಕಾರ್ಯ ವಿಸ್ತಾರ ಯೋಜನೆಯ ಕಾರ್ಯಕ್ರಮದ ಭಾಗವಾಗಿ ವಿಸ್ತಾರಕರಾಗಿ ಕೇಂದ್ರ ಸರಕಾರದ ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಟಾನ ಸಚಿವರಾದ ಡಿ.ವಿ. ಸದಾನಂದ ಗೌಡ ರವರು ಶುಕ್ರವಾರ ಮತ್ತು ಶನಿವಾರ 2 ದಿನ ಪೂರ್ತಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ 4 ಶಕ್ತಿಕೇಂದ್ರದಲ್ಲಿ ತನ್ನ ಪ್ರವಾಸ ನಡೆಸಿದರು. ಶುಕ್ರವಾರ ಬೆಳಿಗ್ಗೆ ಸಂಗಬೆಟ್ಟು ಶಕ್ತಿಕೇಂದ್ರದ 8 ಗ್ರಾಮ ಪಂಚಾಯತ್ ನ 17 ಗ್ರಾಮದ 39 ಮತಗಟ್ಟೆ , ಮಧ್ಯಾಹ್ನ ಗೋಳ್ತಮಜಲು ವ್ಯಾಪ್ತಿಯ 5 ಗ್ರಾಮಪಂಚಾಯತ್ ನ 7 ಗ್ರಾಮಗಳ 31 ಮತಗಟ್ಟೆಗಳ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದರು.
ಶನಿವಾರ ಬೆಳಿಗ್ಗೆ ಮಾಣಿ ವ್ಯಾಪ್ತಿಯ7 ಗಾಮ ಪಂಚಾಯತ್ ನ 7 ಗ್ರಾಮದ 28 ಮತಗಟ್ಟೆ, ಮಧ್ಯಾಹ್ನ ಕೊಲ್ನಾಡು ವ್ಯಾಪ್ತಿಯ 5 ಗ್ರಾಮ ಪಂಚಾಯತ್, 5 ಗ್ರಾಮದ 35 ಮತಗಟ್ಟೆಯ ಕಾರ್ಯಕರ್ತರ ಸಭೆ ನಡೆಸಲಾಯಿತು. ಪಕ್ಷದ ಜವಾಬ್ದಾರಿ ಹೊಂದಿರುವ ಪ್ರತಿಯೊಬ್ಬ ಕಾರ್ಯಕರ್ತ ಮತ್ತು ಎಲ್ಲಾ ಸ್ತರದ ಜನಪ್ರತಿನಿಧಿಗಳು ಕನಿಷ್ಟ 15 ದಿನ ವಿಸ್ತಾರಕರಾಗಿ ಮನೆ ಮನೆಗೆ ತೆರಳಿ ಕೇಂದ್ರ ಸರಕಾರದ 3 ವರ್ಷದ ಸಾಧನೆ, ರಾಜ್ಯ ಸರಕಾರದ 4 ವರ್ಷಗಳ ಆಡಳಿತ ವೈಫಲ್ಯ, ಪಕ್ಷದ ಸಂಘಟನಾತ್ಮಕ ಕಾರ್ಯ ಯೋಜನೆಯನ್ನು ಜನತೆಗೆ ತಿಳಿಸುವಂತೆ ಕರೆ ನೀಡಿದರು.
ಈ ಸಂಧರ್ಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ವಿಭಾಗ ಪ್ರಭಾರಿ ಉದಯ ಕುಮಾರ್ ಶೆಟ್ಟಿ, ರಾಜ್ಯ ಬಿಜೆಪಿ ಸಹವಕ್ತಾರೆ ಸುಲೋಚನಾ .ಜಿ.ಕೆ ಭಟ್, ಜಿಲ್ಲಾ ಪ್ರ. ಕಾರ್ಯದರ್ಶಿ ಕ್ಯಾ.ಬೃಜೇಶ್ ಚೌಟ, ಮಾಜಿ ಶಾಸಕರಾದ ಎ.ರುಕ್ಮಯ್ಯ ಪೂಜಾರಿ, ಕೆ. ಪದ್ಮನಾಭ ಕೊಟ್ಟಾರಿ, ಯು.ರಾಜೇಶ್ ನಾಯ್ಕ್, ಬಿ.ದೇವದಾಸ್ ಶೆಟ್ಟಿ, ಜಿ ಆನಂದ, ಜಿತೇಂದ್ರ.ಎಸ್.ಕೊಟ್ಟಾರಿ, ರಾಮ್ ದಾಸ್ ಬಂಟ್ವಾಳ್, ಮೋನಪ್ಪ ದೇವಸ್ಯ, ರಮಾನಾಥ ರಾಯಿ, ಸೀತಾರಾಮ ಪೂಜಾರಿ, ಗಣೇಶ್ ರೈ ಮಾಣಿ, ದಿನೇಶ್ ಅಮ್ಟೂರ್, ಕೃಷ್ಣಪ್ಪ ಪೂಜಾರಿ, ತುಂಗಪ್ಪ ಬಂಗೇರ, ಕಮಲಾಕ್ಷಿ .ಕೆ.ಪೂಜಾರಿ, ರಮೇಶ್ ಕುಡ್ಮೇರ್, ಲಕ್ಷ್ಮಿ ಗೋಪಾಲ, ಗೀತಾ ಚಂದ್ರಶೇಖರ, ಕುಲ್ಯಾರ್ ನಾರಾಯಣ ಶೆಟ್ಟಿ, ರತ್ನಕುಮಾರ್ ಚೌಟ, ಸಂಜೀವ ಪೂಜಾರಿ, ಆನಂದ ಶಂಭೂರು, ಆನಂದಶೆಟ್ಟಿ, ನಾರಾಯಣ ಶೆಟ್ಟಿ, ಬಾಲಕೃಷ್ಣ ಸೇರ್ಕಳ, ಸಂಜಯ ಪ್ರಭು, ಸದಾನಂದ ನಾವರ, ನಳಿನಿ ಶೆಟ್ಟಿ, ಸಾಂತಪ್ಪ ಪೂಜಾರಿ, ತನಿಯಪ್ಪ ಗೌಡ, ಮಹಮ್ಮದ್ ಮುಸ್ತಾಫ, ರಾಜಾರಾಮ ನಾಯಕ್, ನೇಮಿರಾಜ ರೈ, ಅಬ್ದುಲ್ ರಜಾಕ್, ವಿಜಯ ರೈ, ವಸಂತ ಅಣ್ಣಳಿಕೆ, ಪುರುಷೋತ್ತಮ ಶೆಟ್ಟಿ, ಸಂತೋಷ್ ಕುಮಾರ್ ರಾಯಿ, ಜಯಂತಿ ವೀರಕಂಭ, ಜಯರಾಮ ನಾಯ್ಕ್ ಇನ್ನಿತರ ಪ್ರಮುಖರು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
ಶನಿವಾರ ಮಧ್ಯಾಹ್ನ ಅನಂತಾಡಿ ಗ್ರಾಮದ ದೇವಿನಗರ ಪರಿಶಿಷ್ಠ ಜಾತಿ ಕಾಲೋನಿ ನಿವಾಸಿ ಸಂಜೀವ ಅವರ ನಿವಾಸದಲ್ಲಿ ಭೋಜನ ಸ್ವೀಕರಿಸಿದರು.
ಕೆಲ ದಿನಗಳ ಹಿಂದೆ ಮೆಲ್ಕಾರ್ ನಲ್ಲಿ ದುಷ್ಕರ್ಮಿಗಳ ತಲವಾರು ದಾಳಿಯಿಂದ ಮಾರಣಾಂತಿಕವಾಗಿ ಹಲ್ಲೆಗೊಳಾಗದ ಮೆಲ್ಕಾರ್ ನಿವಾಸಿ ಪವನ್ ಅವರ ಮನೆಗೆ ಕೇಂದ್ರ ಸಚಿವ ಡಿ. ವಿ .ಸದಾನಂದ ಗೌಡ ಅವರು ಶನಿವಾರ ಭೇಟಿ ನೀಡಿ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದರು.
Be the first to comment on "ಬಂಟ್ವಾಳ ಕ್ಷೇತ್ರದ ವಿವಿಧೆಡೆ ಡಿ.ವಿ.ಸದಾನಂದ ಗೌಡ ಭೇಟಿ"