ಬಿ.ಸಿ.ರೋಡಿನಲ್ಲಿ ವಿಕಲಚೇತನ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರ
ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಮತ್ತು ಸರ್ವ ಶಿಕ್ಷಣ ಅಭಿಯಾನ ಕ್ಷೇತ್ರ ಶಿಕ್ಷಣಾಕಾರಿಯವರ ಕಚೇರಿ , ಕ್ಷೇತ್ರ ಸಂಪನ್ಮೂಲ ಕೇಂದ್ರ ಬಂಟ್ವಾಳ ಮತ್ತು ರೋಟರಿ ಕ್ಲಬ್ ಬಿಸಿರೋಡ್ ಇವರ ಸಹಯೋಗದೊಂದಿಗೆ ವಿಕಲಚೇತನ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರದ ಸಭಾ ಕಾರ್‍ಯಕ್ರಮದ ಉದ್ಘಾಟನೆಯನ್ನು ರೋಟರಿ ಭವನದಲ್ಲಿ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮಾಡಿದರು.
ಬಳಿಕ ಮಾತನಾಡಿದ ಅವರು ಸರಕಾರಿ ಯೋಜನೆಗಳಿಗೆ ಚೈತನ್ಯ ತುಂಬುವ ಕೆಲಸವನ್ನು ಇಲಾಖೆಗಳು ಮಾಡಿದಾಗ ನಿಜವಾದ ಫಲಾನುಭವಿಗಳಿಗೆ ಅದರ ಪ್ರಯೋಜನೆ ಸುಲಭವಾಗಿ ಸಿಗುತ್ತದೆ ಎಂದರು. ವಿಕಲಚೇತನರಿಗೆ ನಾವು ಅನುಕಂಪ ತೋರಿಸುವ ಬದಲು ಆತ್ಮಸ್ಥೆರ್ಯದ ಜೊತೆಗೆ ಸಹಕಾರವನ್ನು ನೀಡುವ ಎಂದು ತಿಳಿಸಿದರು. ಸರಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಿ, ಎಷ್ಟೇ ಕಷ್ಟಗಳು ಬಂದರೂ ಅಂತಹ ಮಕ್ಕಳನ್ನು ಶಿಕ್ಷಣದಿಂದ ದೂರವಿಡಬೇಡಿ ಎಂದು ಹೇಳಿದರು. ಅಧ್ಯಕ್ಷತೆಯನ್ನು ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ ವಹಿಸಿದ್ದರು.
ಬೂಡಾ ಅಧ್ಯಕ್ಷ ಸದಾಶಿವ ಬಂಗೇರ, ರೋಟರಿಕ್ಲಬ್ ಅಧ್ಯಕ್ಷ ಸಂಜೀವ ಪೂಜಾರಿ, ಕಾರ್‍ಯದರ್ಶಿ ನಾರಾಯಣ ಹೆಗ್ಡೆ, ಕ್ಷೇತ್ರ ಶಿಕ್ಷಣಾಕಾರಿ ಲೋಕೇಶ್, ಶಿಕ್ಷಕ ಸಂಘದ ಪದಾಕಾರಿಗಳಾದ ರಮೇಶ್ ನಾಯಕ್ ರಾಯಿ, ಶಿವಪ್ರಸಾದ್, ಏಮ್ಸ್ ಕ್ಲಬ್‌ನ ಅಧ್ಯಕ್ಷೆ ಗೌರಿಮಾದವ ಶೆಣೈ, ರೋಟರಿ ಸದಸ್ಯೆ ಪ್ರತಿಭಾ ರೈ ಉಪಸ್ಥಿತರಿದ್ದರು. ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಕಾರಿ ರಾಜೇಶ್ ಸ್ವಾಗತಿಸಿ ಬಿ.ಆರ್.ಪಿ ನಾರಯಣ ಗೌಡ ವಂದಿಸಿದರು.
Be the first to comment on "ವಿಕಲಚೇತನ ಮಕ್ಕಳಿಗೆ ಆತ್ಮಸ್ಥೈರ್ಯ ಮೂಡಿಸುವ ಕೆಲಸವಾಗಲಿ: ರೈ"