ಬಿ.ಸಿ.ರೋಡ್ ನಲ್ಲಿ ನಡೆದ ಅಹಿತಕರ ಘಟನೆಗಳಿಗೆ ಸಂಬಂಧಿಸಿ, ಪೊಲೀಸರು ಇದೀಗ ಸೆಕ್ಷನ್ 144 ಉಲ್ಲಂಘನೆ, ಕಲ್ಲೆಸೆತ ಸಹಿತ ಹಲವು ಪ್ರಕರಣಗಳು ಇವೆ ಎಂದು ಆರೋಪಿಸಿ ಮನೆಗಳಿಗೆ ನುಗ್ಗಿ ವಶಕ್ಕೆ ಪಡೆಯುವ ಕಾರ್ಯವನ್ನು ತೀವ್ರಗೊಳಿಸಿದ್ದಾರೆ.
ಶುಕ್ರವಾರ ನಡೆದ ಬಿಜೆಪಿ ಪ್ರತಿಭಟನೆ ಮತ್ತು ಶನಿವಾರ ನಡೆದ ಶರತ್ ಶವಯಾತ್ರೆ ಮೆರವಣಿಗೆ ಹಿನ್ನೆಲೆಯಲ್ಲಿ ಹಲವರ ವಿರುದ್ಧ ಸ್ವಯಂಪ್ರೇರಿತ ಪ್ರಕರಣಗಳು ದಾಖಲಾಗಿವೆ ಎಂಬ ಮಾಹಿತಿಗಳು ದೊರಕಿವೆ. ಆದರೆ ಬಂಟ್ವಾಳ ನಗರ ಠಾಣೆ ಪೊಲೀಸರು ಈ ಬಗ್ಗೆ ಮಾಹಿತಿಯನ್ನು ಮಾಧ್ಯಮ ಪ್ರತಿನಿಧಿಗಳಿಗೆ ಅಧಿಕೃತವಾಗಿ ನೀಡಿಲ್ಲ.
ವಿಡಿಯೋ ಸಾಕ್ಷಿ ಆಧರಿಸಿ ನಾವು ಬಂಧನ ಕಾರ್ಯವನ್ನು ಮಾಡುತ್ತಿದ್ದೇವೆ, ಕಾನೂನು ಪ್ರಕಾರ ಸೆ.144ರನ್ವಯ ನಿಷೇಧಾಜ್ಞೆ ಇದ್ದ ಸಂದರ್ಭ ಗುಂಪು ಸೇರುವುದೂ ಅಪರಾಧ ಎಂಬ ನೆಲೆಯಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ ಎಂದು ಹೇಳುತ್ತಿರುವ ಪೊಲೀಸರು ಬಂಧನ ಪ್ರಕ್ರಿಯೆ, ವಿಚಾರಣೆ ಕಾರ್ಯ ನಡೆಸುತ್ತಿದ್ದಾರೆ.
ಶನಿವಾರ ನಡೆದ ಅಹಿತಕರ ಘಟನೆಯಲ್ಲಿ ಭಾಗಿಯಾಗಿ 13 ಮಂದಿ ನ್ಯಾಯಾಂಗ ಬಂಧನಕ್ಕೆ ಒಳಪಟ್ಟ ಬೆನ್ನಲ್ಲೇ ಪೊಲೀಸರು ಮತ್ತೆ ಹಲವರನ್ನು ವಶಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಮುಂದುವರಿಸಿದ್ದಾರೆ. ಭಾನುವಾರ ರಾತ್ರಿ ಹಾಗೂ ಸೋಮವಾರ ಸಂಜೆ ಹಲವರನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ಈ ಕುರಿತು ಅಧಿಕೃತ ಮಾಹಿತಿ ನೀಡಲು ನಿರಾಕರಿಸಿದ್ದಾರೆ.
Be the first to comment on "ಸೆಕ್ಷನ್ ಉಲ್ಲಂಘನೆ, ಕಲ್ಲೆಸೆತ: ತೀವ್ರಗೊಂಡ ಕಾರ್ಯಾಚರಣೆ"