ಕ್ರಿಮಿನಲ್ ಗಳಿಗೆ ಖಡಕ್ ಸಂದೇಶ ನೀಡಿದ ಐಜಿಪಿ ಹರಿಶೇಖರನ್

ಬ್ರಹ್ಮರಕೂಟ್ಲುವಿನಲ್ಲಿರುವ ಬಂಟವಾಳ ಬಂಟರ ಭವನದಲ್ಲಿ ಶನಿವಾರ ನಡೆದ ಬಂಟ್ವಾಳ ತಾಲೂಕು ಮಟ್ಟದ ಶಾಂತಿಸಭೆಯಲ್ಲಿ ಕ್ರಿಮಿನಲ್ ಚಟುವಟಿಕೆ ನಡೆಸುವವರಿಗೆ ಖಡಕ್ ಸಂದೇಶವನ್ನು ಐಜಿಪಿ ಹರಿಶೇಖರನ್ ನೀಡಿದ್ದಾರೆ.

ಜಿಲ್ಲಾಧಿಕಾರಿ ಡಾ. ಕೆ.ಜಿ.ಜಗದೀಶ್, ಎಸ್ಪಿ ಸುಧೀರ್ ಕುಮಾರ್ ರೆಡ್ಡಿ, ಪ್ರಭಾರ ಎಡಿಶನಲ್ ಎಸ್ಪಿ ವಿಷ್ಣುವರ್ಧನ ಸಮ್ಮುಖ ಐಜಿಪಿ ಹಲವು ಕಠಿಣ ಕ್ರಮಗಳ ಕುರಿತು ವಿವರಿಸಿದರು.

ಶಾಂತಿ ಸಭೆಯಲ್ಲೇನಾಗಿತ್ತು, ಬಂಟ್ವಾಳನ್ಯೂಸ್ ನಿಮಗೆ ಒದಗಿಸುತ್ತಿದೆ ವರದಿಯ ಹೈಲೈಟ್ಸ್.

ಹರಿಶೇಖರನ್, ಐಜಿಪಿ, ಪಶ್ಚಿಮ ವಲಯ

ನಾನೇನು ಪುಕ್ಕಲ, ಕೇವಲ ಮಾತನಾಡುವ ಅಧಿಕಾರಿಯಲ್ಲ.. ಕೆಲಸ ಮಾಡಿ ತೋರಿಸುವ ಅಧಿಕಾರಿ.. ನನ್ನ ಸೇವಾವಧಿಯಲ್ಲಿ  ನೂರಾರು ಕ್ರಿಮಿನಲ್ ಗಳನ್ನು ನೋಡಿದ್ದೇನೆ.ಇಂತಹವರನ್ನು ಕಾನೂನಿನಡಿಯಲ್ಲೇ ಹೇಗೆ ಮಟ್ಟ ಹಾಕಬೇಕೆಂದು ನನಗೆ ಚೆನ್ನಾಗಿ ಗೊತ್ತಿದೆ. ಅಪರಾಧ ಕೃತ್ಯದ ಬಳಿಕ ಆರೋಪಿಗಳು ಎಲ್ಲೆ ಅಡಗಿರಲಿ ಅಂಥವರ ಅಥವಾ ಮನೆಮಂದಿಯ ಹೆಸರಿನಲ್ಲಿರುವ ಆಸ್ತಿ ಮುಟ್ಟುಗೋಲು ಹಾಕಲಾಗುವುದು. ಮುಟ್ಟಗೋಲು ಹಾಕಲಾಗುವುದು ಇದೆಲ್ಲವನ್ನು ಕಾನೂನಿನ ಚೌಕಟ್ಟಿನಲ್ಲಿಯೇ ಕಾರ್ಯರೂಪಕ್ಕೆ ತರಲಾಗುವುದು.ಸಮಾಜದಲ್ಲಿ ಶಾಂತಿ ಕದಡುವ ಶೇ. 01 ಮಂದಿ ಮಾತ್ರ. ಇವರು ಕ್ಯಾನ್ಸರ್ ಹರಡುವವರು. ಇಂಥವರಿಗೆ ಸರಿಯಾದ ಟ್ರೀಟ್ಮೆಂಟ್ ಕೊಡಲು ಇಲಾಖೆ ಸಜ್ಜಾಗಿದೆ. ಏನೇ ಅನುಮಾನಗಳಿದ್ದರೆ ಯಾವುದೇ ಸಂಘಟನೆಯ ಮುಖಂಡರು, ಸಾರ್ವಜನಿಕರು ಖುದ್ದು ತನ್ನನ್ನು ಬೇಟಿಯಾಗಿ ಚರ್ಚಿಸಬಹುದು

ಡಾ.ಕೆ.ಜಿ.ಜಗದೀಶ್, ಜಿಲ್ಲಾಧಿಕಾರಿ, ದಕ್ಷಿಣ ಕನ್ನಡ ಜಿಲ್ಲೆ

ಸಮಾಜದಲ್ಲಿ ಶೇ. 01ರಷ್ಟು ಮಂದಿಯಿಂದ ಅಶಾಂತಿ ಉಂಟಾಗುತ್ತಿದೆ. ಇಂತವರಿಗೆ ಯಾರೂ ಕೂಡ ನೈತಿಕವಾದ ಬೆಂಬಲವನ್ನು ನೀಡಬಾರದು. ಜಿಲ್ಲಾಡಳಿತ, ಪೊಲೀಸ್ ಇಲಾಖೆಯಿಂದ ಯಾವುದೇ ಲೋಪವಾಗಿದ್ದರೆ ಮುಂದಿನ ದಿನಗಳಲ್ಲಿ ಅದನ್ನು ಸರಿಪಡಿಸಿಕೊಳ್ಳಲಾಗುವುದು, ಸಮಾಜದ ಮುಖಂಡರು ಯುವಜನಾಂಗಕ್ಕೆ ಮಾರ್ಗದರ್ಶನ ನೀಡಿ. ಜಾತಿ, ಧರ್ಮಾಚರಣೆ ಏನಿದ್ದರೂ ನಿಮ್ಮ ಮನೆ, ಪ್ರಾರ್ಥನಾ ಮಂದಿರದೊಳಗೆ ಮಾಡಿಕೊಳ್ಳಿ. ಹೊರಗೆ ಅಲ್ಲ.

ಸುಧೀರ್ ಕುಮಾರ್ ರೆಡ್ಡಿ, ಎಸ್ಪಿ ದಕ್ಷಿಣ ಕನ್ನಡ ಜಿಲ್ಲೆ

ಕಾನೂನನ್ನು ಯಾರಿಗೂ ಕೈಗೆತ್ತಿಕೊಳ್ಳಲು ಅವಕಾಶವಿಲ್ಲ, ಕೇವಲ ಸೆಕೆಂಡ್‌ಗಳಲ್ಲಿ ನಡೆಯುವ ಘಟನೆಯಲ್ಲಿ ತೊಡಗಿಸಿಕೊಂಡರೆ ಮುಂದೆ ಆತ ತನ್ನ ಭವಿಷ್ಯವನ್ನೇ ಕಳೆದುಕೊಳ್ಳಬೇಕಾಗುತ್ತದೆ. ಸಮಾಜದಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಇಲಾಖೆಯೊಂದಿಗೆ ಸಾರ್ವಜನಿಕರು ಸಹಕರಿಸಿ.

ಸಭೆಯಲ್ಲಿ ಕೇಳಿದ್ದು

ಸಭೆಯಲ್ಲಿ ಜಿ.ಪಂ. ಸದಸ್ಯ ಎಂ. ಎಸ್. ಮಹಮ್ಮದ್, ತಾ.ಪಂ. ಉಪಾಧ್ಯಕ್ಷ ಅಬ್ಬಾಸ್ ಆಲಿ, ಪುರಸಭಾ ಸದಸ್ಯರಾದ ದೇವದಾಸ ಶೆಟ್ಟಿ, ಮೊನೀಶ್ ಆಲಿ, ತುಂಬೆ ಗ್ರಾಮಪಂಚಾಯತ್ ಉಪಾಧ್ಯಕ್ಷ ಪ್ರವೀಣ್ ತುಂಬೆ, ಪತ್ರಕರ್ತ ರಾಜಾ ಬಂಟ್ವಾಳ, ಸಾಮಾಜಿಕ ಕಾರ್ಯಕರ್ತರಾದ ಪಿ. ಎ. ರಹೀಂ, ಸಾಹುಲ್ ಹಮೀದ್, ಎ.ಪಿ.ಎಂ.ಸಿ. ಅಧ್ಯಕ್ಷ ಪದ್ಮನಾಭ ರೈ ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು. ಡಿವೈಎಸ್ಪಿ ಬಾಸ್ಕರ ರೈ ಉಪಸ್ಥಿತರಿದ್ದರು. ಡಿವೈಎಸ್ಪಿ ರವೀಶ್ ಸಿ.ಆರ್. ಸ್ವಾಗತಿಸಿದರು. ವೃತ್ತನಿರೀಕ್ಷಕ ಬಿ. ಕೆ. ಮಂಜಯ್ಯ ವಂದಿಸಿದರು. ಮಂಜು ವಿಟ್ಲ ಕಾರ್ಯಕ್ರಮ ನಿರೂಪಿಸಿದರು.

ತಪ್ಪು ಮಾಡಿದವರಿಗೆ ಶಿಕ್ಷೆಯಾಗುವಂತೆ ಮಾಡಿ. ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಮೆಸೇಜ್ ಕಳುಹಿಸುವವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರಗಿಸಿ. – ಅಬ್ಬಾಸ್ ಅಲಿ, ಬಂಟ್ವಾಳ ತಾಪಂ ಉಪಾಧ್ಯಕ್ಷ

 ಪ್ರತೀ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸರ್ವ ಧರ್ಮದ ಧಾರ್ಮಿಕ, ಸಾಮಾಜಿಕ, ರಾಜಕೀಯ ಮುಂದಾಳುಗಳ ನೇತೃತ್ವದಲ್ಲಿ ಶಾಂತಿ ಸಮಿತಿ ರಚಿಸಬೇಕು. ತಿಂಗಳಿಗೊಮ್ಮೆ ಸಭೆ ನಡೆಸಬೇಕು. – ಎಂ.ಎಸ್.ಮುಹಮ್ಮದ್, ಜಿಪಂ ಸದಸ್ಯ

 ಪೊಲೀಸ್ ಇಲಾಖೆ ಜನಸ್ನೇಹಿ ಆಗಬೇಕು. ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕೆಮರಾ ಅಳವಡಿಸಿ. – ದೇವದಾಸ ಶೆಟ್ಟಿ, ಬಂಟ್ವಾಳ ಪುರಸಭಾ ಸದಸ್ಯ

ಗಾಂಜಾ ನಿರ್ಮೂಲನೆಗೆ ಜಿಲ್ಲಾ ಮಟ್ಟದಲ್ಲಿ ವಿಶೇಷ ದಳವನ್ನು ರಚಿಸಬೇಕು. – ಪ್ರವೀಣ್ ಬಿ., ತುಂಬೆ ಗ್ರಾಪಂ ಉಪಾಧ್ಯಕ್ಷ

 ಪರಿಸ್ಥಿತಿಯನ್ನು ನಿಭಾಯಿಸಲು ಅಧಿಕಾರ ಇರುವ ಪೊಲೀಸರನ್ನು ಕಲ್ಲಡ್ಕದಲ್ಲಿ ನಿಯೋಜಿಸಬೇಕು.  – ಸಾಹುಲ್ ಹಮೀದ್, ಎಸ್‌ಡಿಪಿಐ ಮುಖಂಡ.

VIDEO REPORT:

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಕ್ರಿಮಿನಲ್ ಗಳಿಗೆ ಖಡಕ್ ಸಂದೇಶ ನೀಡಿದ ಐಜಿಪಿ ಹರಿಶೇಖರನ್"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*