ಮಂಗಳೂರು ಆಂತರಿಕ ಭದ್ರತಾ ವಿಭಾಗದಲ್ಲಿದ್ದ ಸರ್ಕಲ್ ಇನ್ಸ್‌ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದೇಶ್ ಪಿ.ಜಿ. ಅವರನ್ನು ಬಂಟ್ವಾಳ ವೃತ್ತನಿರೀಕ್ಷಕರನ್ನಾಗಿ ವರ್ಗಾಯಿಸಲಾಗಿದೆ. 2005ರ ಬ್ಯಾಚ್ ಅಧಿಕಾರಿಯಾದ ಅವರು, ಎಸ್.ಐ. ಆಗಿ ಕೊಪ್ಪ, ಕಾರ್ಕಳ ಗ್ರಾಮಾಂತರ, ಉಳ್ಳಾಲ, ಕದ್ರಿ, ಚಿಕ್ಕಮಗಳೂರು, ಬೆಳ್ತಂಗಡಿ ಠಾಣೆಗಳಲ್ಲಿ ಕರ್ತವ್ಯ ಸಲ್ಲಿಸಿದ್ದರು. ಪದೋನ್ನತಿ ಹೊಂದಿ ಮಂಗಳೂರು ಆಂತರಿಕ ಭದ್ರತಾ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿದ್ದ ಅವರು ಇದೀಗ ಇಡೀ ರಾಜ್ಯದ ಗಮನ ಸೆಳೆದಿರುವ ಬಂಟ್ವಾಳ ವೃತ್ತಕ್ಕೆ ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್ ಆಗಿ ನಿಯುಕ್ತಿ ಹೊಂದಿದ್ದಾರೆ. ಬಿ.ಕೆ. ಮಂಜಯ್ಯ ಅವರು ಈ ಹಿಂದೆ ವೃತ್ತನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಗಲಭೆ ಬಳಿಕ ಅವರ ವರ್ಗಾವಣೆ ನಡೆದಿತ್ತು. ಅದಾದ ಬಳಿಕ ಸಿ.ಯು.ಬೆಳ್ಳಿಯಪ್ಪ ಅವರು ನಿಯೋಜನೆ ಮೇರೆಗೆ ಬಂಟ್ವಾಳಕ್ಕೆ ಆಗಮಿಸಿದ್ದರು.
ಶನಿವಾರ ಶಾಂತಿಸಭೆ
ಶನಿವಾರ ಬ್ರಹ್ಮರಕೂಟ್ಲುವಿನಲ್ಲಿರುವ ಬಂಟರ ಭವನದಲ್ಲಿ ಬೆಳಗ್ಗೆ 11 ಗಂಟೆಗೆ ಸಾರ್ವಜನಿಕ ಶಾಂತಿಸಭೆ ನಡೆಯಲಿದೆ. ಐಜಿ ಹರಿಶೇಖರನ್, ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ್ ಸಹಿತ ಉನ್ನತ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ತಾಲೂಕಿನಲ್ಲಿ ಮುಂಜಾಗ್ರತಾಕ್ರಮವಾಗಿ ತಿಂಗಳ ಹಿಂದೆ ಜಾರಿಗೊಳಿಸಲಾಗಿದ್ದ ಸೆ.144 ನಿಷೇದಾಜ್ಙೆಯನ್ನು ಜು.2 ರವರೆಗೆ ಮತ್ತೆ ವಿಸ್ತರಿಸಿ ಜಿಲ್ಲಾಧಿಕಾರಿಯವರು ಶುಕ್ರವಾರ ಆದೇಶಿಸಿದ್ದಾರೆ.ಹಾಗೆಯೇ ಪಕ್ಕದ ಪುತ್ತೂರು,ಬೆಳ್ತಂಗಡಿ,ಸುಳ್ಯ ತಾಲೂಕಿನಲ್ಲೂ ಕೂಡ ನಿಷೇದಾಜ್ಜೆಯನ್ನು ಮುಂದುವರಿಸಲಾಗಿದೆ. ಬಂಟ್ವಾಳ ತಾಲೂಕಿನಲ್ಲಿ ನಿಷೇದಾಜ್ಙೆಯನ್ನು ಇದೇ ಮಾದಲ ಬಾರಿಗೆ ಒಂದು ತಿಂ ಗಳಿಗಿಂತಲೂ ಅಧಿಕವಾಗಿ ಜಾರಿಗೊಳಿಸಿದ ಹೊಸ ದಾಖಲೆ ಬರೆದಂತಾಗಿದೆ. ಜೊತೆಗೆಪೊಲೀಸ್ ಸರ್ಪಗಾವಲನ್ನು ಕೂಡ ಮುಂದುವರಿಸಲಾಗಿದೆ. ಈಗ ತಾಲೂಕಿನಲ್ಲಿ ಪರಿಸ್ಥಿತಿ ಸಂಪೂರ್ಣ ಸಹಜಸ್ಥಿತಿಯಲ್ಲಿದೆ.
Be the first to comment on "ಬಂಟ್ವಾಳಕ್ಕೆ ಹೊಸ ಸರ್ಕಲ್ ಇನ್ಸ್‌ಪೆಕ್ಟರ್"