ಇರಾ ಗ್ರಾಮ ಪಂಚಾಯತ್ ವ್ಯಾಪ್ತಿಯ 19 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕುಟುಂಬಗಳಿಗೆ ರಾಜ್ಯ ಸರ್ಕಾರದ ಅರಣ್ಯ ಇಲಾಖೆ ವತಿಯಿಂದ ಅಡುಗೆ ಅನಿಲ ವಿತರಣಾ ಕಾರ್ಯಕ್ರಮವನ್ನು ಇರಾ ಕಂಚಿನಡ್ಕಪದವು ಪ.ಜಾತಿ ಕಾಲನಿ ಅಂಗನವಾಡಿ ವಠಾರದಲ್ಲಿ ನಡೆಸಲಾಯಿತು.
ಈ ಸಂದರ್ಭ ಮಾತನಾಡಿದ ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷರಾದ ಕೆ ಚಂದ್ರಹಾಸ ಕರ್ಕೇರ ಪರಿಸರದ ಸಮತೋಲನ ದೃಷ್ಠಿಯಿಂದ ಹಾಗೂ ಜನರ ಆರೋಗ್ಯದ ಚಿಂತನೆಯೊಂದಿಗೆ ರಾಜ್ಯ ಸರಕಾರವು ಅರಣ್ಯ ಇಲಾಖೆಯ ಮುಖಾಂತರ ಜಾರಿಗೆ ತಂದ ಮಹತ್ತgವಾದ ಅಡುಗೆ ಅನಿಲ ಯೋಜನೆಯನ್ನು ಗ್ರಾಮೀಣ ಮಟ್ಟದ ಜನರು ಸದ್ಬಳಕೆ ಮಾಡುವಂತೆ ತಿಳಿಸಿದರು.
ಇರಾ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕುಕ್ಕಾಜೆ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿ ಗಳಾಗಿ ಗ್ರಾಮ ಪಂಚಾಯತ್ ಸದಸ್ಯರಾದ ಸುಧಾಕರ್ ಕೆ ಟಿ, ಶೇಖರ್ ಪೂಜಾರಿ,ಮೊಯಿದಿನ್ ಕುಂಞ, ಸವಿತಾ, ಪಂಚಾಯತ್ ಅಭಿವೃದ್ಧಿ ಅಕಾರಿ ನಳಿನಿ ಎ.ಕೆ ಪಾಲ್ಗೊಂಡಿದ್ದರು. ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ತುಳಸಿ ಪಿ ಪೂಜಾರಿ ಕಾರ್ಯಕ್ರಮ ನಿರೂಪಿಸಿ, ಅಂಗನವಾಡಿ ಕಾರ್ಯಕರ್ತೆ ಲತಾ ಕುಮಾರಿ ಧನ್ಯವಾದ ಸಲ್ಲಿಸಿದರು.
Be the first to comment on "ಅಡುಗೆ ಅನಿಲ ಯೋಜನೆ ಸದ್ಬಳಕೆ ಅಗತ್ಯ: ಕರ್ಕೇರ"