ಬಂಟ್ವಾಳ ಕ್ಷೇತ್ರದ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವರಾದ ರಮಾನಾಥ ರೈ ಅವರಿಂದ ಪೊಲೀಸರಿಗೆ ನೈತಿಕ ಸ್ಥೈರ್ಯ ಒದಗಿಸುವ ಕೆಲಸವಾಗುತ್ತಿದೆ ಎಂದು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ಬಾಸ್ ಆಲಿ ಹೇಳಿದ್ದಾರೆ.
ಮೂರು ದಶಕಗಳಿಂದ ಅತ್ಯಂತ ಪ್ರಾಮಾಣಿಕ, ಭ್ರಷ್ಟಾಚಾರರಹಿತ ಕಳಂಕರಹಿತವಾಗಿ ಜನರಿಗೆ ಸ್ಪಂದಿಸುತ್ತಿದ್ದು ಕ್ಷೇತ್ರದ ಮತದಾರರು ಅವರ ಮೇಲೆ ವಿಶ್ವಾಸವಿಟ್ಟು ಆರು ಬಾರಿ ವಿಧಾನಸಭೆಗೆ ಕಳಿಸಿದ್ದಾರೆ. ಜನರ ಈ ವಿಶ್ವಾಸಕ್ಕೆ ಅವರು ಎಂದೂ ಚ್ಯುತಿ ತರದೆ , ಅಭಿವೃದ್ಧಿ ಕೆಲಸಗಳು ಮತ್ತು ಸರ್ವಧರ್ಮಿಯರನ್ನು ಸಮಾನವಾಗಿ ಕಾಣುತ್ತಾ ಜನರ ಪ್ರೀತಿ ಗಳಿಸಿದ್ದಾರೆ. ಕೋಮು ಗಲಭೆ ಸೃಷ್ಟಿಸಿ ಅಭಿವೃದ್ಧಿ ಕೆಲಸಗಳನ್ನು ಮರೆಮಾಚಲು ಸಾಧ್ಯವಿಲ್ಲ. ಯಾವುದೇ ಪ್ರತಿಭಟನೆಗಳಿಂದ, ಹೇಳಿಕೆಗಳಿಂದ ಅವರ ಸಾಧನೆಗೆ ಧಕ್ಕೆಯಾಗುವುದಿಲ್ಲ. ಕೋಮು ಗಲಬೆ ಸಂದರ್ಭದಲ್ಲಿ ಅಮಾಯಕರನ್ನು ಬಂಧಿಸಬೇಡಿ ಸರ್ವರನ್ನು ಸಮಾನವಾಗಿ ಕಾಣುವ ಮುಖಾಂತರ ಸೌಹಾರ್ದತೆಯನ್ನು ಕಾಪಾಡಿ, ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದಂತೆ ಕೆಲಸ ನಿರ್ವಹಿಸಿ ಎಂದು ಪೋಲೀಸ್ ವರಿಷ್ಠಾಕಾಧಿರಿಗೆ ನಿರ್ದೇಶನ ಮಾಡುವ ಮೂಲಕ ಪೋಲೀಸರಿಗೆ ನೈತಿಕ ಸ್ಥೈರ್ಯ ತುಂಬಿದ್ದಾರೆ. ಮೂಲ ಹೇಳಿಕೆಯನ್ನು ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುವುದರಿಂದ ಯಾವ ಪ್ರಯೋಜನವಿಲ್ಲ. ಕ್ಷೇತ್ರದ ನಾಗರಿಕರಿಗೆ ಯಾವುದು ಸರಿ ಯಾವುದು ತಪ್ಪು ಎಂದು ಚಿಂತಿಸುವ ಸಾಮರ್ಥ್ಯವಿದೆ . ಸಮಸ್ತ ಕಾಂಗ್ರೆಸ್‌ನ ಕಾರ್ಯಕರ್ತರು ಅಭಿವೃದ್ಧಿ ಕೆಲಸ ಮತ್ತು ಸೌಹಾರ್ದತೆ ಶಾಂತಿ ಪರ ಇದ್ದು ಸಚಿವರ ಜನಪರ ಕೆಲಸಗಳಿಗೆ ಯಾವತ್ತೂ ಬೆಂಬಲಿಸುತ್ತದೆ ಎಂದು ಅಬ್ಬಾಸ್ ಆಲಿ ಹೇಳಿಕೆಯಲ್ಲಿ ತಿಳಿಸಿದ್ದಾರೆ
Be the first to comment on "ಸಚಿವರಿಂದ ಪೋಲಿಸರಿಗೆ ನೈತಿಕ ಸ್ಥೈರ್ಯ -ಅಬ್ಬಾಸ್ ಅಲಿ"