ವಾರದೊಳಗೆ ರಸ್ತೆ ದುರಸ್ಥಿ ಕೈಗೊಳ್ಳದಿದ್ದರೆ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.
ಕಾರು ಮತ್ತು ವ್ಯಾನು ಚಾಲಕ – ಮಾಲಕರ ಸಂಘದ ಮುಖಂಡ ಬಿ.ಎಂ.ಪ್ರಭಾಕರ್ ದೈವಗುಡ್ಡೆ , ಬಿರ್ವ ಕುಡ್ಲ ಮುಖಂಡ ನಿತಿನ್ ಮಾತನಾಡಿದರು. ಸಂಸದರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಟೀಕಾಪ್ರಕಾರಗೈದರಲ್ಲದೆ ಧಿಕ್ಕಾರವನ್ನು ಕೂಗಿದರು.
ವಿವಿಧ ಸಂಘ ಸಂಸ್ಥೆಗಳ ಮುಖಂಡರಾದ ಬಿ.ಹಸೈನ್ ಪರ್ಲ್ಯ, ಕೃಷ್ಣ ಅಲ್ಲಿಪಾದೆ, ಅಬ್ದುಲ್ ರಝಾಕ್ ಗುಂಪಕಲ್ಲು, ಸದಾನಂದ ನಾವೂರ, ವಕೀಲ ರಾಜೇಶ್ ಬೊಲ್ಲುಕಲ್ಲು ಮಾತನಾಡಿದರು. ರಾಮಚಂದ್ರ ಸುವರ್ಣ, ಪ್ರಮೋದ್ ಅಜ್ಜಿಬೆಟ್ಟು, ವಿನ್ಸೆಂಟ್ ರೋಡ್ರಿಗಸ್, ರಾಮ ಕುಲಾಲ್ ಗಾಂದೋಡಿ, ಮೊದಲಾದವರು ಉಪಸ್ಥಿತರಿದ್ದರು. ವಸಂತ್ ಸ್ವಾಗತಿಸಿ ವಂದಿಸಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಪುರಂದರ ಹೆಗ್ಡೆ ಅವರಿಗೆ ಮನವಿ ಸಲ್ಲಿಸಲಾಯತು.
ರಸ್ತೆಗಳು ಹದಗೆಟ್ಟಿರುವ ಕುರಿತು ಬಂಟ್ವಾಳನ್ಯೂಸ್ ಸಹಿತ ಮಾಧ್ಯಮಗಳು ವರದಿಗಳ ಮೂಲಕ ಗಮನ ಸೆಳೆದಿದ್ದವು.
ಪ್ರತಿಭಟನೆಯ ವಿಡಿಯೋ ಲಿಂಕ್ ಇಲ್ಲಿದೆ:
ರಸ್ತೆ ಹದಗೆಟ್ಟಿರುವ ಕುರಿತು ಬಂಟ್ವಾಳನ್ಯೂಸ್ ಮಾಡಿರುವ ವಿಶೇಷ ವರದಿ ಇಲ್ಲಿದೆ:
Be the first to comment on "ಹದಗೆಟ್ಟಿರುವ ಬಿ.ಸಿ.ರೋಡ್ ಸರ್ವೀಸ್ ರೋಡ್: ವಾಹನ ಚಾಲಕ ಮಾಲೀಕರಿಂದ ರಸ್ತೆ ತಡೆ"