ಅಂತಾರಾಷ್ಟ್ರೀಯ ಛಾಯಾಗ್ರಹಣ ವಸ್ತುಗಳ ಪ್ರದರ್ಶನ
ಕರ್ನಾಟಕ ಛಾಯಾಚಿತ್ರಗ್ರಾಹಕರ ಉನ್ನತಿ ಸಾಧನೆಗಾಗಿ, ವೃತ್ತಿಯಲ್ಲಿ ನೈಪುಣ್ಯತೆಯ ಸಾಧನೆಗಾಗಿ ಹಾಗೂ ನವನವೀನ ತಂತ್ರಜ್ಞಾನ, ಅತ್ಯಾಧುನಿಕ ಆವವಿಷ್ಕಾರಗಳು ಏಕತ್ರ ರಕ್ಷಿಸಲು ಅವಕಾಶ ನೀಡುವ ಉದ್ದೇಶದಿಂದ 6 ದಶಕಗಳ ಅನುಭವ ಹೊಂದಿರುವ ಕೆಪಿಎ, ಇದೇ ಜೂನ್ ತಿಂಗಳ 23ರಿಂದ 25ರವರೆಗೆ 5ನೆಯ ಅಂತಾರಾಷ್ಟ್ರೀಯ ಮಟ್ಟದ ವಸ್ತು ಪ್ರದರ್ಶನ ’ಡಿಜಿ ಇಮೇಜ್-2017’ಅನ್ನು, ಬೆಂಗಳೂರಿನ ’ನೀಲಕಂಠ ಕನ್ವೆನ್ಷನ್ ಸೆಂಟರ್’ ತುಮಕೂರು ರಸ್ತೆ, ಮಾದಾವರ, ಇಲ್ಲಿ ಆಯೋಜಿಸಿದೆ ಎಂದು ಕೆಪಿಎ ಉಪಾಧ್ಯಕ್ಷ ನಾಗೇಶ್ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ದೇಶದ ಸರ್ವಶ್ರೇಷ್ಠ ಛಾಯಾಗ್ರಾಹಕರಿಂದ ತರಬೇತಿ, ಆಧುನಿಕ ಕೆಮರಾ ಸಲಕರಣೆಗಳ ಬಗ್ಗೆ ಸಮಗ್ರ ಮಾತಿ ಇಲ್ಲಿ ಲಭ್ಯವಾಗಲಿದೆ. ವಿಶ್ವದರ್ಜೆಯ ಕೆಮರಾ ಸಲಕರಣೆಗಳ ಮಾರಾಟಗಾರರು ಈ ಪ್ರದರ್ಶನದಲ್ಲಿ ಭಾಗವಸಿಸುತ್ತಿರುವುದು ಅತ್ಯಂತ ವಿಶೇಷವಾಗಿದೆ. ದೇಶದ ವಿವಿಧ ರಾಜ್ಯಗಳಿಂದ 110ಕ್ಕೂ ಹೆಚ್ಚು ಪ್ರದರ್ಶನಕಾರರು ಭಾಗವಸುತ್ತಿರುವ ಈ ಪ್ರದರ್ಶನದ ವಿಸ್ತೀರ್ಣ 50400 ಚದರ ಅಡಿಗಿಂತಲೂ ಮೇಲ್ಪಟ್ಟಿದೆ. ಸುಮಾರು 2000ಕ್ಕೂ ಹೆಚ್ಚಿನ ಛಾಯಾಗ್ರಹಣ ಕ್ಶೇತ್ರಕ್ಕೆ ಸಂಭಂಧಪಟ್ಟ ಸಲಕರಣೆಗಳ ಪ್ರದರ್ಶನರುತ್ತದೆ. ಇಡೀ ದಕ್ಷಿಣಭಾರತದ ವೃತ್ತಿಪರ ಛಾಯಾಗ್ರಾಹಕರಿಂದ ಏರ್ಪಡಿಸಿರುವ ಅತಿ ದೊಡ್ಡ ಪ್ರದರ್ಶನವಾಗಿರುತ್ತದೆ. ’ಡಿಜಿ ಇಮೇಜ್-2017’ ಕಾರ್ಯಕ್ರಮಕ್ಕೆ ಆಲ್ ಇಂಡಿಯಾ ಫೊಟೋಗ್ರಾಫಿಕ್ ಟ್ರೇಡ್ ಅಂಡ್ ಇಂಡಸ್ಟ್ರೀ ಅಸೋಸಿಯೇಶನ್ ಅವರು ಮತ್ತು ದಕ್ಷಿಣ ಬಾರತದ ಛಾಯಾಗ್ರಾಹಕರ ಫ಼ೆಡರೇಶನ್ ವಿಶೇಷವಾಗಿ ನೆರವು ನೀಡುತ್ತಿದೆ ಎಂದು ಅವರು ಹೇಳಿದರು.
ಕಲ್ಯಾಣ ನಿಧಿಗೆ ಸಮರ್ಪಣೆ
ಈ ಪ್ರದರ್ಶನದಿಂದ ಬರುವ ಬಹುಪಾಲು ಆದಾಯವನ್ನು ರಾಜ್ಯ ಛಾಯಾಗ್ರಾಹಕರ ಕಲ್ಯಾಣನಿಧಿ ಟ್ರಸ್ಟ್‌ಗೆ ಸಂದಾಯಗೊಂಡು, ಅದರ ಮೂಲಕ ತೊಂದರೆಯಲ್ಲಿರುವ ರಾಜ್ಯದ ಛಾಯಾಗ್ರಾಹಕರ ನೆರವಿಗೆ ಸಹಾಯ ನೀಡುವುದು ಮತ್ತು ರಾಜ್ಯದ ಛಾಯಾಗ್ರಾಹಕರಿಗೆ ಉಚಿತ ತಾಂತ್ರಿಕ ಕಾರ್ಯಾಗಾರಗಳನ್ನು ನಡೆಸುವ ಮಹೋದ್ದೇಶ ಹೊಂದಿದೆ ಎಂದು ಅವರು ಹೇಳಿದರು. ಇದುವರೆಗೆ ಕಲ್ಯಾಣ ನಿಧಿಯಿಂದ ದೊರೆತ ಬಡ್ಡಿ ಹಣ ರೂ.500000 ರೂಪಾಯಿಗಳನ್ನು ರಾಜ್ಯದ ವಿವಿಧ ಭಾಗಗಳಿಂದ ತೊಂದರೆಯಲ್ಲಿರುವ 18 ಮಂದಿ ಛಾಯಾಗ್ರಾಹಕರಿಗೆ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಡಿಜಿ ಇಮೇಜ್ ವಸ್ತು ಪ್ರದರ್ಶನಕ್ಕೆ ಬರುವಂತಹ ಎ ಛಾಯಾಚಿತ್ರಗ್ರಾಹಕರಿಗೆ ಮೂರು ದಿನಗಳು ನಡೆಯುವಂತ ವಸ್ತು ಪ್ರದರ್ಶನಕ್ಕೆ ಆಗಮಿಸುವ ಛಾಯಾಗ್ರಾಹಕರಿಗೆ ನಾಗಸಂದ್ರ ಮೆಟ್ರೋ ಸ್ಟೇಷನ್‌ನಿಂದ ಉಚಿತ ವಾಹನ ಸೌಲಭ್ಯ ಮಾಡಲಾಗಿದೆ. ಪ್ರದರ್ಶನಕ್ಕೆ ಬರುವ ವಾಹನಗಳಿಗೆ ಉಚಿತ ಪಾರ್ಕಿಂಗ್, ಪರ ಊರುಗಳಿಂದ ಬರುವ ಛಾಯಾಗ್ರಾಹಕರಿಗೆ ಲಗೇಜ್ ಕೌಂಟರ್‌ಗಳ ವ್ಯವಸ್ಥೆ ಮಾಡಲಾಗಿದೆ. ನಿಕಾನ್, ಸೋನಿ, ಪ್ಯಾನಸೋನಿಕ್ ಕಂಪನಿಯವರಿಂದ ಉಚಿತ ಕ್ಯಾಮೆರಾ ಸರ್ವಿಸ್ ವ್ಯವಸ್ಥೆ ಮಾಡಲಾಗಿದೆ.
ಕೆಪಿಎ – ರಾಜ್ಯ ಸಂಘದ ವಜ್ರ ಮಹೋತ್ಸವದ ಕಾರ್ಯಕ್ರಮ
ಕನ್ನಡಿಗರ ಸ್ವಾಭಿಮಾನಿ ಸಂಕೇತವಾಗಿ ಜರಗುವ ಕೆಪಿಎಯ ಐದನೆಯ ಅಂತರ್‍ಟ್ರಾಯ ವಸ್ತು ಪ್ರದರ್ಶನ ’ಡಿಜಿ ಇಮೇಜ್ – 2017’ ರ ಸಂಧರ್ಭದಲ್ಲಿ ರಾಜ್ಯ ಸಂಘವು ತನ್ನ ವಜ್ರ ಮಹೋತ್ಸವವನ್ನು ಆಚರಿಸುತ್ತಿದೆ. ರಾಜ್ಯದಲ್ಲಿ ಪ್ರತಿ ಜಿಗೊಬ್ಬರಂತೆ ಈ ವೃತ್ತಿಯಲ್ಲಿ ಸೇವೆ ಸಲ್ಲಿಸಿ ಒಳ್ಳೆಯ ಸಾಧನೆ ಮಾಡಿ ಹೆಸರು ಮಾಡಿರುವ ಛಾಯಾಗ್ರಾಹಕರನ್ನು ಗುರುತಿಸಿ ಅಂತಹವರನ್ನು ’ಛಾಯಾ ಸಾಧಕ’ ಎಂಬ ಬಿರುದಿನೊಂದಿಗೆ ಸನ್ಮಾನಿಸುವುದು.
ಈ ವರ್ಷದ ’ಡಿಜಿ ಇಮೇಜ್’ಪ್ರದರ್ಶನದ ವೇಳೆಯಲ್ಲಿ ವಿಶೇಷ ಪರಿಣತರಿಂದ ಛಾಯಾಗ್ರಹಣ, ವೀಡಿಯೋಗ್ರಹಣದ ಬಗ್ಗೆ ಉಚಿತ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗಿದೆ.
ನಾಲ್ಕನೇ ರಾಷ್ಟ್ರ ಮಟ್ಟದ ಹಾಗೂ ಐದನೇ ರಾಜ್ಯ ಮಟ್ಟದ ಛಾಯಾಗ್ರಹಣ ಸ್ಪರ್ಧೆಗಳನ್ನು ಈ ವರ್ಷದ ಜುಲೈ / ಆಗಸ್ಟ್ ತಿಂಗಳಲ್ಲಿ ಏರ್ಪಡಿಸಿ ಛಾಯಾಗ್ರಾಹಕರಿಗೆ ತಮ್ಮ ಛಾಯಾಗ್ರಹಣದ ಮಟ್ಟವನ್ನು ಗುರುತಿಸಿಕೊಳ್ಳುವ ಅವಕಾಶವನ್ನು ಕಲ್ಪಿಸಿದೆ. ಈ ಸ್ಪರ್ದೆಗಳಲ್ಲಿ ಭಾಗವಹಿಸಲು ರಾಜ್ಯದ ಎ ವೃತ್ತಿಪರ ಹಾಗೂ ಹವ್ಯಾಸಿ ಛಾಯಾಗ್ರಾಹಕರುಗಳನ್ನು ಆಹ್ವಾನಿಸಲಾಗುವುದು ಎಂದು ಅವರು ಹೇಳಿದರು.
ಸೌತ್‌ಕೆನರಾ ಫೊಟೋಗ್ರಾಫರ್ಸ್ ಆಸೋಸಿಯೇಶನ್ ಅಧ್ಯಕ್ಷ ಜಗನ್ನಾಥ ಶೆಟ್ಟಿ, ಉಪಾಧ್ಯಕ್ಷ ವಿಲ್ಸನ್, ಕೋಶಾಧಿಕಾರಿ ದಯಾನಂದ ಬಂಟ್ವಾಳ, ರಾಜ್ಯ ವಲಯಾಧ್ಯಕ್ಷ ವಾಸುದೇವ್ ರಾವ್ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.
ಪ್ರಚಾರ ಅಭಿಯಾನ ಉದ್ಘಾಟನೆ
ಕರ್ನಾಟಕ ಫೊಟೋಗ್ರಾಫರ್ಸ್ ಅಸೋಸಿಯೇಶನ್ ಬೆಂಗಳೂನಲ್ಲಿ ಆಯೋಜಿಸಲಿರುವ 5ನೆಯ ಅಂತಾರಾಷ್ಟ್ರೀಯ ಮಟ್ಟದ ವಸ್ತು ಪ್ರದರ್ಶನ ’ಡಿಜಿ ಇಮೇಜ್-2017’ ಮಂಗಳೂರು-ಉಡುಪಿ ಜಿಲ್ಲಾ ಪ್ರಚಾರಾಭಿಯಾನವನ್ನು ಜೂ. 9ರಂದು ಉಡುಪಿ ಕಿದಿಯೂರು ಹೊಟೇಲಿನಲ್ಲಿ ನಡೆಸಲಾಯಿತು. ಕೆಪಿಎ ಉಪಾಧ್ಯಕ್ಷ ನಾಗೇಶ್, ನಿರ್ದೇಶಕರಾದ ಸಂಪತ್‌ಕುಮಾರ್, ಉಮಾಶಂಕರ್, ಸುರೇಶ್ ಹೊನ್ನಾವರ, ಆಸ್ಟ್ರೋ ಮೋಹನ್, ಸೌತ್‌ಕೆನರಾ ಫೊಟೋಗ್ರಾಫರ್ಸ್ ಆಸೋಸಿಯೇಶನ್ ಅಧ್ಯಕ್ಷ ಜಗನ್ನಾಥ ಶೆಟ್ಟಿ, ಉಪಾಧ್ಯಕ್ಷ ವಿಲ್ಸನ್, ಕೋಶಾಧಿಕಾರಿ ದಯಾನಂದ ಬಂಟ್ವಾಳ, ರಾಜ್ಯ ವಲಯಾಧ್ಯಕ್ಷ ವಾಸುದೇವ್ ರಾವ್ ಉಡುಪಿ ವಲಯಾಧ್ಯಕ್ಷ ವಾಮನ್ ಪಡುಕರೆ ಮತ್ತಿತರರು ಉಪಸ್ಥಿತರಿದ್ದರು.
Be the first to comment on "ಜೂ.23-25 ಬೆಂಗಳೂರಿನನಲ್ಲಿ ಕೆಪಿಎ ಡಿಜಿಇಮೇಜ್ 2017"