ಸೇರಿದ ಸಹಸ್ರಾರು ಭಕ್ತರ ಸಮ್ಮುಖ ಪಾಣೆಮಂಗಳೂರಿನಲ್ಲಿರುವ ಶ್ರೀ ಭಯಂಕೇಶ್ವರ ಸದಾಶಿವ ದೇವರ ಪುನ: ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಗುರುವಾರ ಬೆಳಗ್ಗೆ ಶ್ರಿ ಕ್ಷೇತ್ರದಲ್ಲಿ ಸಕಲ ವೈದಿಕ, ಧಾರ್ಮಿಕ ವಿ ವಿಧಾನಗಳೊಂದಿಗೆ ಸಂಪನ್ನಗೊಂಡಿತು.
ಮೇ.೨೪ರಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಿತ್ಯ ಅನ್ನಸಂತರ್ಪಣೆ ಜೊತೆ ಇಲ್ಲಿಗೆ ಆಗಮಿಸುವ ಸಹಸ್ರಾರು ಭಕ್ತರ ಸಮ್ಮುಖ ಪ್ರತಿದಿನ ನಾನಾ ಕಾರ್ಯಕ್ರಮಗಳು ನಡೆಯುತ್ತಿದ್ದು, ಪ್ರಸಾದ ಮುನಿಯಂಗಳ ಮಾರ್ಗದರ್ಶನದಲ್ಲಿ ನೂತನವಾಗಿ ನಿರ್ಮಾಣಗೊಂಡ ದೇವಳದ ಪ್ರಾಸಾದದಲ್ಲಿ ಗುರುವಾರ ಬ್ರಹ್ಮಶ್ರೀ ನೀಲೇಶ್ವರ ಕೆ.ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಶ್ರೀ ಭಯಂಕೇಶ್ವರ ಸದಾಶಿವ ದೇವರ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಿತು. ಈ ಸಂದರ್ಭ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಗಣಪತಿ ಸೋಮಯಾಜಿ, ಸಮಿತಿಗಳ ಪ್ರಮುಖರಾದ ಬಿ.ನಾರಾಯಣ ಸೋಮಯಾಜಿ, ರಘುನಾಥ ಸೋಮಯಾಜಿ, ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷ ಯಶೋಧರ ಕರ್ಬೆಟ್ಟು, ಏಲಬೆ ಪದ್ಮನಾಭ ಮಯ್ಯ, ಲೋಕೇಶ್, ರಘು ಸಫಲ್ಯ, ಕೃಷ್ಣಪ್ಪ ಗಾಣಿಗ, ಕಿಶೋರ್ ಶೆಟ್ಟಿ, ಪುರುಷೋತ್ತಮ ಬಂಗೇರ ನಾಟಿ, ರಂಜಿತ್ ಕೆದ್ದೇಲು, ಕೇಶವ ಪಿ.ಎಚ್, ಕೃಷ್ಣರಾಜ ಭಟ್ ಕರ್ಬೆಟ್ಟು, ಪುರುಷೋತ್ತಮ ಸಾಲಿಯಾನ್ ಸಹಿತ ಹಲವು ಭಕ್ತರು, ಅಭಿಮಾನಿಗಳು ಉಪಸ್ಥಿತರಿದ್ದರು.
Be the first to comment on "ಶ್ರೀ ಭಯಂಕೇಶ್ವರ ಸದಾಶಿವ ದೇವಸ್ಥಾನ ಬ್ರಹ್ಮಕಲಶೋತ್ಸವ"