ಕಲ್ಲಡ್ಕ ಶ್ರೀರಾಮ ಪದವಿಪೂರ್ವ ವಿದ್ಯಾಲಯಕ್ಕೆ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಒಟ್ಟು ಶೇ.93 ಫಲಿತಾಂಶ ದಾಖಲಾಗಿದೆ.
ಉತ್ತೀರ್ಣಗೊಂಡ 328 ವಿದ್ಯಾರ್ಥಿಗಳಲ್ಲಿ ಉನ್ನತ ಶ್ರೇಣಿಯಲ್ಲಿ 40, ಪ್ರಥಮ ಶ್ರೇಣಿಯಲ್ಲಿ 225, ದ್ವಿತೀಯ ಶ್ರೇಣಿಯಲ್ಲಿ 44, ತೃತೀಯ ಶ್ರೇಣಿಯಲ್ಲಿ 20 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ಬರೆದ 227 ವಿದ್ಯಾರ್ಥಿಗಳಲ್ಲಿ ಒಟ್ಟು 218 ವಿದ್ಯಾರ್ಥಿಗಳು ಉತ್ತೀರ್ಣರಾಗುವುದರೊಂದಿಗೆ ಶೇ.96 ಫಲಿತಾಂಶ ದಾಖಲಾಗಿದೆ. ವಿಜ್ಞಾನದಲ್ಲಿ ಶೇ. 91 ಹಾಗೂ ಕಲಾ ವಿಭಾಗದಲ್ಲಿ ಶೇ.80 ಫಲಿತಾಂಶ ಬಂದಿದೆ. ಒಟ್ಟು ಶೇ.93 ಫಲಿತಾಂಶ ದಾಖಲಾಗಿದೆ ಎಂದು ಸಂಸ್ಥೆ ಪ್ರಕಟಣೆ ತಿಳಿಸಿದೆ. ವಿಜ್ಞಾನ ವಿಭಾಗದಲ್ಲಿ ಅಮೃತಾ ವಾಗ್ಲೆ (571), ವಾಣಿಜ್ಯ ವಿಭಾಗದಲ್ಲಿ ಮಮತಾ 576 ಮತ್ತು ಕಲಾ ವಿಭಾಗದಲ್ಲಿ ವರ್ಷಿಣಿ 466 ಅಂಕ ಗಳಿಸಿದ್ದಾರೆ.
for details about institution
Be the first to comment on "ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ ಪಿಯುಸಿಯಲ್ಲಿ ಶೇ.93 ಫಲಿತಾಂಶ"