ದಾರಿಮೀಸ್ ಅಸೋಸಿಯೇಶನ್‌ನಿಂದ ಅಧ್ಯಯನ ಶಿಬಿರ

 ದಾರಿಮೀಸ್ ಎಸೋಸಿಯೇಶನ್ ದಕ್ಷಿಣ ಕನ್ನಡ ಜಿಲ್ಲಾ ವತಿಯಿಂದ ಬೃಹತ್ ಅಧ್ಯಯನ ಶಿಬಿರ ಹಾಗೂ ಆಧ್ಯಾತ್ಮಿಕ ಮಜ್ಲಿಸ್ ಕಾರ್ಯಕ್ರಮ ಪಾಣೆಮಂಗಳೂರು ನೆಹರೂ ನಗರದ ಬದ್ರಿಯಾ ಜುಮಾ ಮಸೀದಿಯ ಶಂಸುಲ್ ಉಲಮಾ ವೇದಿಕೆಯಲ್ಲಿ ಬುಧವಾರ ನಡೆಯಿತು.

ಜಾಹೀರಾತು

ಕಾರ್ಯಕ್ರಮಕ್ಕೂ ಮೊದಲು ನೆಹರೂ ನಗರ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಪಿ.ಎಸ್.ಅಬ್ದುಲ್ ಹಮೀದ್ ಧ್ವಜಾರೋಹಣ ನೆರವೇರಿಸಿದರು. ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ವಯಿಸಿದ್ದರು. ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಉಪಾಧ್ಯಕ್ಷ ಕೆ.ಪಿ.ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಮಿತ್ತಬೈಲ್ ದುಅ ನೆರವೇರಿಸಿದರು. ಸುನ್ನೀ ಸಂದೇಶ ಮಾಸ ಪತ್ರಿಕೆಯ ಪ್ರಧಾನ ಸಂಪಾದಕ ಕೆ.ಎಸ್.ಹೈದರ್ ದಾರಿಮಿ ಕಾರ್ಯಕ್ರವನ್ನು ಉದ್ಘಾಟಿಸಿದರು. ಇಸ್ತಿಖಾಮ ಟೀಮ್ ನಿರ್ದೇಶಕ ಮೌಲಾನ ಮುಹಮ್ಮದ್ ಸಲೀಂ ದಾರಿಮಿ ಚೆರ್ಲ ಮಲಪ್ಪುರಂ ತಝ್‌ಕಿಯತ್ಹಾಗೂ ತ್ವರೀಖತ್ಎಂಬ ವಿಷಯದ ಬಗ್ಗೆ ಮುಖ್ಯ ಭಾಷಣಗೈದರು. ಕೋಟೆಕಾರ್ ಮುದರ್ರಿಸ್ ಹಾರೂನ್ ಅಹ್ಸನಿ, ಸಹ ಮುದರ್ರಿಸ್ ಝೈನ್ ಸಖಾಫಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಧ್ಯಾಹ್ನದ ಬಳಿಕ ದಾರಿಮೀಸ್ ಎಸೋಸಿಯೇಶನ್ ಇದರ ಗೌರವಾಧ್ಯಕ್ಷ ಪಿ.ಮಾಹಿನ್ ದಾರಿಮಿ ಪಾತೂರು ನೇತೃತ್ವದಲ್ಲಿ ಅಜ್ಮೀರ್ ಮೌಲೀದ್ ಪಾರಾಯಣ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ದಾರಿಮೀ ಉಲಮಾ ಒಕ್ಕೂಟದ ಅಧ್ಯಕ್ಷ ಎಸ್.ಬಿ.ಮುಹಮ್ಮದ್ ದಾರಿಮಿ, ಪ್ರಧಾನ ಕಾರ್ಯದರ್ಶಿ ಯು.ಕೆ.ಅಬ್ದುಲ್ ಅಝೀಝ್ ದಾರಿಮಿ, ಕೋಶಾಧಿಕಾರಿ ಕೆ.ಆರ್.ಹುಸೈನ್ ದಾರಿಮಿ ರೆಂಜಲಾಡಿ, ಸಂಘಟನಾ ಕಾರ್ಯದರ್ಶಿ ಅಬ್ದುಲ್ ಖಾದಿರ್ ದಾರಿಮಿ ಕುಕ್ಕಿಲ, ನೆಹರೂ ನಗರ ಖತೀಬ್ ಅಬ್ದುಶುಕೂರ್ ದಾರಿಮಿ ಕರಾಯ, ಮಿತ್ತಬೈ ಮುದರ್ರಿಸ್ ಅಬ್ದುಲ್ ಹಮೀದ್ ದಾರಿಮಿ, ಅಕ್ಕರಂಗಡಿ ಖತೀಬ್ ಇಸ್ಮಾಯೀಲ್ ದಾರಿಮಿ ನಾಳ, ಗೂಡಿನಬಳಿ ಖತೀಬ್ ರಿಯಾಝ್ ರಹ್ಮಾನ್, ನಂದಾವರ ಖತೀಬ್ ಅಬ್ದುಲ್ ಮಜೀದ್ ದಾರಿಮಿ ಕೊಳಂಬೆ, ಮಾರಿಪಲ್ಲ ಖತೀಬ್ ಖಲೀಲುರ್ರಹ್ಮಾನ್ ದಾರಿಮಿ ತಳಂಗೆರೆ, ಅಮ್ಮೆಮಾರ್ ಖತೀಬ್ ಅಬೂ ಸ್ವಾಲಿಹ್ ಫೈಝಿ ಅಕ್ಕರಂಗಡಿ, ಬೋಳಿಯಾರ್ ಖತೀಬ್ ಅಬ್ದುಲ್ ರಹ್ಮಾನ್ ಫೈಝಿ, ಕೋಟೆಕಣಿ ಖತೀಬ್ ಅನ್ಸಾರ್ ಫೈಝಿ, ಗಡಿಯಾರ ಖತೀಬ್ ಜಮಾಲುದ್ದೀನ್ ದಾರಿಮಿ, ಮಿತ್ತೂರು ಖತೀಬ್ ಆಸಿಫ್ ಅಝ್‌ಹರಿ, ಕಲಾಯಿ ಖತೀಬ್ ಕೆ.ಎಸ್.ಅಹ್ಮದ್ ದಾರಿಮಿ, ನೆಹರೂ ನಗರ ಸದರ್ ಮುಅಲ್ಲಿಮ್ ಫಖ್ರುದ್ದೀನ್ ದಾರಿಮಿ, ದಾರಿಮೀಸ್ ಎಸೋಸಿಯೇಶನ್ ದ.ಕ. ಕೋಶಾಧಿಕಾರಿ ಅಬ್ದುಲ್ ಕರೀಂ ದಾರಿಮಿ ಅಮ್ಮುಂಜೆ, ಸಾಲೇತ್ತೂರು ಖತೀಬ್ ಅಬೂಬಕ್ಕರ್ ಮದನಿ, ಜಂಇಯತ್ತುಲ್ ಮುಅಲ್ಲಿಮೀನ್ ಸಾಲೆತ್ತೂರು ರೇಂಜ್ ಕಾರ್ಯದರ್ಶಿ ಸಿ.ಎಚ್.ಇಬ್ರಾಹೀಂ ಮುಸ್ಲಿಯಾರ್, ಜಂಇಯತ್ತುಲ್ ಮುಅಲ್ಲಿಮೀನ್ ಕಲ್ಲಡ್ಕ ರೇಂಜ್ ಕಾರ್ಯದರ್ಶಿ ಇಕ್ಬಾಲ್ ದಾರಿಮಿ ಕಲ್ಲಡ್ಕ, ಜಂಇಯತ್ತುಲ್ ಮುಅಲ್ಲಿಮೀನ್ ಸಜಿಪ ರೇಂಜ್ ಕಾರ್ಯದರ್ಶಿ ಅಬ್ದುಲ್ ಮಜೀದ್ ಫೈಝಿ, ಬದ್ರಿಯಾ ಜುಮಾ ಮಸೀದಿ ನೆಹರೂ ನಗರ ಉಪಾಧ್ಯಕ್ಷ ಇಬ್ರಾಹೀಂ ಮಿಲ್ಕ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸಲೀಂ, ಕೋಶಾಧಿಕಾರಿ ಹಸನ್ ಹಾಜಿ ಚಿಕನ್, ಉಸ್ಮಾನ್ ಹಾಜಿ ಆಲಡ್ಕ, ಬಿಲ್ಡರ್ ಸಿ.ಪಿ.ಇಬ್ರಾಹೀಂ, ಅಬೂಬಕ್ಕರ್ ಅಕ್ಕರಂಗಡಿ, ವಕೀಲ ಹಾತಿಂ ಅಹ್ಮದ್ ನೆಹರೂ ನಗರ, ನರಿಕೊಂಬು ಗ್ರಾಪಂ ಸದಸ್ಯ  ಸುಲೈಮಾನ್ ಕಾರಾಜೆ, ಎಸ್ಕೆಸ್ಸೆಸ್ಸೆಫ್ ನೆಹರೂ ನಗರ ಶಾಖೆ ಅಧ್ಯಕ್ಷ ಪಿ.ಎಸ್.ಅಬ್ದುಲ್ ರಝಾಕ್, ಪ್ರಧಾನ ಕಾರ್ಯದರ್ಶಿ ಅಬ್ಬಾಸ್ ಕಾರಾಜೆ, ಕೋಶಾಧಿಕಾರಿ ಪಿ.ಜೆ.ಮಹ್ಮೂದ್, ಮದರಸ ಮೇನೇಜ್‌ಮೆಂಟ್ ಎಸೋಸಿಯೇಶನ್ ದ.ಕ. ಅಧ್ಯಕ್ಷ ಐ.ಮೊಯ್ದಿನಬ್ಬ ಹಾಜಿ, ಸುಲೈಮಾನ್ ಹಾಜಿ ಕಲ್ಲಡ್ಕ, ನಂಡೆ ಪೆಂಙಳ್ ಅಭಿಯಾನ ಸ್ವಾಗತ ಸಮಿತಿ ಅಧ್ಯಕ್ಷ ನೌಶಾದ್ ಹಾಜಿ ಸುರಲ್ಪಾಡಿ, ಸಾಲೆತ್ತೂರು ರೇಂಜ್ ಮದರಸ ಮೆನೇಜ್‌ಮೆಂಟ್ ಎಸೋಸಿಯೇಶನ್ ಅಧ್ಯಕ್ಷ ಹಕೀಂ ಪರ್ತಿಪ್ಪಾಡಿ, ಸಜಿಪ ರೇಂಜ್ ಮದರಸ ಮೆನೇಜ್‌ಮೆಂಟ್ ಎಸೋಸಿಯೇಶನ್ ಅಧ್ಯಕ್ಷ ಅಬ್ಬಾಸ್ ಹಾಜಿ ಸಜಿಪ, ಬಂಟ್ವಾಳ ಜುಮಾ ಮಸೀದಿ ಅಧ್ಯಕ್ಷ ಇಸ್ಮಾಯೀಲ್ ಅರಬಿ, ಎಸ್ಕೆಎಸ್ಸೆಸ್ಸೆಫ್ ಗೂಡಿನಬಳಿ ಶಾಖೆ ಅಶಧ್ಯಕ್ಷ ಉಬೈದುಲ್ಲಾ ಹಾಜಿ ಮೊದಲಾದವರು ಉಪಸ್ಥಿತರಿದ್ದರು.

ದಾರಿಮೀಸ್ ಎಸೋಸಿಯೇಶನ್ ದ.ಕ. ಜಿಲ್ಲಾಧ್ಯಕ್ಷ ಕೆ.ಬಿ.ಅಬ್ದುಲ್ ಖಾದಿರ್ ದಾರಿಮಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಕೆ.ವಿ.ಅಬ್ದುಲ್ ಮಜೀದ್ ದಾರಿಮಿ ಕುಂಬ್ರ ಧನ್ಯವಾದಗೈದರು.

 

 

 

ಜಾಹೀರಾತು

About the Author

Harish Mambady
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ದಾರಿಮೀಸ್ ಅಸೋಸಿಯೇಶನ್‌ನಿಂದ ಅಧ್ಯಯನ ಶಿಬಿರ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*