ಅಣ್ಣನನ್ನೇ ಕೊಲ್ಲಿಸಿದ ತಂಗಿ, ಕಾರ್ತಿಕ್ ರಾಜ್ ಹತ್ಯೆ ಆರೋಪಿಗಳ ಬಂಧನ

ಪಜೀರ್ ಸುದರ್ಶನ ನಗರದ ನಿವಾಸಿ ಕಾರ್ತಿಕ್ ರಾಜ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕಾರ್ತಿಕ್ ಸಹೋದರಿ ಕಾವ್ಯಶ್ರೀ, ಆಕೆಯ ಸ್ನೇಹಿತ ಮತ್ತು ಆತನ ಸಹೋದರನನ್ನು ಬಂಧಿಸಲಾಗಿದೆ. ಶನಿವಾರ ಮಂಗಳೂರು ಸಿಟಿ ಪೊಲೀಸ್ ಕಮೀಷನರ್ ಚಂದ್ರಸೇಖರ್ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಜಾಹೀರಾತು

ಕೊಣಾಜೆ ಠಾಣಾ ವ್ಯಾಪ್ತಿಯ ಕೊಣಾಜೆ ಗಣೇಶ್ ಮಹಲ್ ಎಂಬಲ್ಲಿ  ದಿನಾಂಕ 2016ರ ಅಕ್ಟೋಬರ್ 22 ರಂದು ಬಂಟ್ವಾಳ ತಾಲೂಕು ಪಜೀರು ಗ್ರಾಮದ ಸುದರ್ಶನ ನಗರ ವಾಸಿ ಉಮೇಶ್ ಪಿ ಎಂಬವರ ಮಗ ಕಾರ್ತಿಕ ರಾಜ್ ಎಂಬಾತನನ್ನು ಬೆಳಿಗ್ಗೆ ಸುಮಾರು 5:30 ಗಂಟೆ ವೇಳೆಗೆ ಜಾಗಿಂಗ್ ಹೋಗುತ್ತಿರುವ ಸಮಯದಲ್ಲಿ ಯಾರೋ ದುಷ್ಕರ್ಮಿಗಳು ತಲೆಗೆ ಮಾರಕ ಆಯುಧದಿಂದ ಬಲವಾಗಿ ಹೊಡೆದು ಗಂಭೀರ ಗಾಯಗೊಳಿಸಿದ್ದರು. ಇದನ್ನು ಗಮನಿಸಿದ ಸಾರ್ವಜನಿಕರು, ಕೊಣಾಜೆ ಪೊಲೀಸರ ಸಹಾಯದಿಂದ ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆಗೆ ದಾಖಲಿಸಿದ್ದು, ಈ ಬಗ್ಗೆಕಾರ್ತಿಕ ರಾಜ್ ನ ತಂದೆ ಉಮೇಶ್ ರವರು ನೀಡಿದ ದೂರಿನಂತೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದೂರು ದಾಖಲಾಗಿತ್ತು. ಆದರೆ ಕಾರ್ತಿಕ ರಾಜ್ ಚಿಕಿತ್ಸೆ ಫಲಕಾರಿಯಾಗದೆ 23 ರಂದು ಸಾವನ್ನಪ್ಪಿದ್ದರು.

ಪ್ರಕರಣ ತೀವ್ರ ಕುತೂಹಲ ಕೆರಳಿಸಿದ್ದು, ಸಾಕಷ್ಟು ಅನುಮಾನಗಳಿಗೂ ಕಾರಣವವಾಗಿತ್ತು. ಆರೋಪಿಗಳ ಬಂಧನ ಆಗ್ರಹಿಸಿ ಪ್ರತಿಭಟನೆಯೂ ನಡೆಯಿತು.

ಗಂಭೀರತೆಯನ್ನು ಅರಿತ ಆಯುಕ್ತರು ಪ್ರಕರಣದ ತನಿಖೆಯನ್ನು ಸಿ.ಸಿ.ಆರ್.ಬಿ ಘಟಕದ ಎ.ಸಿ.ಪಿ ವೆಲೆಂಟೈನ್ ಡಿ’ಸೋಜ ಮತ್ತು ತಂಡಕ್ಕೆ ನಡೆಸಲು ಸೂಚಿಸಿದರು. ಮೃತ ಕಾರ್ತಿಕ ರಾಜ್ ನ ತಂಗಿ ಕಾವ್ಯಶ್ರೀ ಹಾಗೂ ಆಕೆಯ ಪರಿಚಿತ ಕುತ್ತಾರ್ನನ  ಸಂತೋಷ್ ನಗರ ವಾಸಿ ಗೌತಮ್ ಮತ್ತು ಆತನ ತಮ್ಮ ಗೌರವ್ ಈ ಕೃತ್ಯದಲ್ಲಿ ಭಾಗಿಯಾಗಿರುವುದು ತನಿಖೆಯಿಂದ ಗೊತ್ತಾಯಿತು. ಇಬ್ಬರನ್ನು ವಶಕ್ಕೆ ಪಡೆದುಕೊಂಡು ಅವರನ್ನು ಕೂಲಂಕುಷವಾಗಿ ವಿಚಾರಿಸಿದಾಗ, ಕಾವ್ಯಶ್ರೀಯು ಗೌತಮ್ ಬಳಿ ಈತನಲ್ಲಿ ಪದೇ ಪದೇ ತನ್ನ ಅಣ್ಣನಾದ ಕಾರ್ತಿಕ ರಾಜ್ ನ  ಕೊಲೆ ಮಾಡಬೇಕೆಂದು ಒತ್ತಾಯಿಸಿ, 5 ಲಕ್ಷ ರೂಪಾಯಿ ಕೊಡುವುದಾಗಿ ಆಮಿಷವೊಡ್ಡಿದ್ದು, ಆತನ ತಮ್ಮ ಗೌರವ್ ಜೊತೆ ಸೇರಿ ಕಾರ್ತಿಕ ರಾಜ್ ನು ಜಾಗಿಂಗ್ ಹೋಗುವಾಗ, ಇಬ್ಬರೂ ಸೇರಿಕೊಂಡು ತಲೆಗೆ ರಾಡ್ ನಿಂದ ಹೊಡೆದು ಕೊಲೆ ಮಾಡಿದ್ದಾಗಿ ತಿಳಿದುಬಂದಿದೆ ಎಂದು ಚಂದ್ರಸೇಖರ್ ಹೇಳಿದರು.

ಜಾಹೀರಾತು

ಪತ್ತೆ ಕಾರ್ಯದಲ್ಲಿ  ವೆಲೆಂಟೈನ್ ಡಿ’ಸೋಜಾ ಜೊತೆ ದಕ್ಷಿಣ ಉಪ-ವಿಭಾಗದ ಎ.ಸಿ.ಪಿ ಶೃತಿ, ಕೊಣಾಜೆ ಪೊಲೀಸ್ ನಿರೀಕ್ಷಕರಾದ ಅಶೋಕ್, ಸಿಬ್ಬಂದಿಗಳಾದ ಸುನಿಲ್ ಕುಮಾರ್, ದಾಮೋದರ , ರಿಜಿ ವಿ.ಎಂ, ಸುಧೀರ್ ಶೆಟ್ಟಿ , ಮನೋಜ್ ಕುಮಾರ್ ಮತ್ತು ಮಹಮ್ಮದ್ ಇಕ್ಬಾಲ್ ಪಾಲ್ಗೊಂಡಿದ್ದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು

About the Author

Bantwal News
2016 ನವೆಂಬರ್ 10ರಂದು ಆರಂಭಗೊಂಡ ಬಂಟ್ವಾಳದ ಮೊದಲ ವೆಬ್ ಪತ್ರಿಕೆ ಇದು. 25 ಲಕ್ಷಕ್ಕಿಂತಲೂ ಅಧಿಕ ಮಂದಿ ಕೇವಲ 45 ತಿಂಗಳಲ್ಲೇ ಓದಿದ ಜಾಲತಾಣವಿದು. ಸಂಪಾದಕ: ಹರೀಶ ಮಾಂಬಾಡಿ. ಬ್ರೇಕಿಂಗ್ ನ್ಯೂಸ್ ಧಾವಂತದಲ್ಲಿ ಅವಸರದ ಸುದ್ದಿ ಕೊಡದೆ, ಮಾಹಿತಿ ಖಚಿತಗೊಂಡ ಬಳಿಕವಷ್ಟೇ ಪ್ರಕಟಿಸಲಾಗುತ್ತದೆ. ಅತಿರಂಜಿತ ಸುದ್ದಿ ಇಲ್ಲಿಲ್ಲ. ಇದು www.bantwalnews.com ಧ್ಯೇಯ.

Be the first to comment on "ಅಣ್ಣನನ್ನೇ ಕೊಲ್ಲಿಸಿದ ತಂಗಿ, ಕಾರ್ತಿಕ್ ರಾಜ್ ಹತ್ಯೆ ಆರೋಪಿಗಳ ಬಂಧನ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*