ಪಾಣೆಮಂಗಳೂರಿನಲ್ಲಿರುವ ನರಿಕೊಂಬು ಗ್ರಾಮದ ಶ್ರೀ ಭಯಂಕೇಶ್ವರ ಸದಾಶಿವ ದೇವಸ್ಥಾನದ ಬ್ರಹ್ಮಕಲಶದ ಪೂರ್ವಭಾವಿ ಸಭೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗಣೇಶ ಸೋಮಯಾಜಿ ಅಧ್ಯಕ್ಷತೆಯಲ್ಲಿ ನಡೆಯಿತು.
ಪ್ರಮುಖರಾದ ಪದ್ಮನಾಭ ಮಯ್ಯ, ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷ ಯಶೋಧರ ಕರ್ಬೆಟ್ಟು, ಸದಸ್ಯರಾದ ಮೋಹಿನಿ, ದಿವಾಕರ ಶಂಭೂರು, ತಾಪಂ ಮಾಜಿ ಸದಸ್ಯ ಆನಂದ ಶಂಭೂರು, ಕೃಷ್ಣಪ್ಪ ಗಾಣಿಗ, ಕೇಶವ ಪಿ.ಎಚ್, ಜಯಶಂಕರ ಬಾಸ್ರಿತ್ತಾಯ, ಎಂ.ಸುಬ್ರಹ್ಮಣ್ಯ ಭಟ್, ಮುಳ್ಳುಂಜ ವೆಂಕಟೇಶ್ವರ ಭಟ್, ಮುಂಡಾಜೆ ನವೀನ್ ಶೆಟ್ಟಿ, ಕರ್ಬೆಟ್ಟು ಕೃಷ್ಣರಾಜ ಭಟ್, ಪುರುಷೋತ್ತಮ ಬಂಗೇರ ನಾಟಿ, ಪ್ರೇಮನಾಥ ಶೆಟ್ಟಿ, ಪುರುಷೋತ್ತಮ ಸಾಲಿಯಾನ್, ಕೃಷ್ಣಪ್ಪ ನಾಯ್ಕ, ಪ್ರಭಾಕರ ಸೋಮಯಾಜಿ, ಪ್ರಕಾಶ ಐತಾಳ ಕಂದೂರು, ರಾಜಾರಾಮ ಐತಾಳ ಕಂದೂರು, ಸುಬ್ರಾಯ ಕಾರಂತ ಕಾನಸಾಲೆ, ರಾಮಕೃಷ್ಣ ರಾವ್ ಪುತ್ರೋಟಿಬೈಲು, ವೆಂಕಟರಮಣ ಬಲ್ಲಾಳ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಕೆ.ಶಂಕರನಾರಾಯಣ ರಾವ್, ರಘು ಸಫಲ್ಯ, ಬೇಬಿ ಕೃಷ್ಣಪ್ಪ ಗಾಣಿಗ, ಮೋಹನ ಆಚಾರ್ಯ, ಚಂದ್ರಾವತಿ ರತ್ನಾಕರ, ಗ್ರಾಮ ಪಂಚಾಯತ್ ಸದಸ್ಯ ಕಿಶೋರ್ ಶೆಟ್ಟಿ, ಕೇದಿಗೆ ಸಂಜೀವ ಸಫಲ್ಯ, ಪುರೋಹಿತ ನಾರಾಯಣ ಮಯ್ಯ ಪಾಲ್ಗೊಂಡಿದ್ದರು.
ಮೇ.24ರಿಂದ ಜೂನ್ 2ವರೆಗೆ ಬ್ರಹ್ಮಕಲಶೋತ್ಸವ ನಡೆಯುವ ಕಾರಣ ವಿವಿಧ ಕಾರ್ಯಕ್ರಮಗಳನ್ನು ನಡೆಸುವ ಕುರಿತು ವಿಚಾರಮಂಥನ ನಡೆಯಿತು. ಮೇ 29ರಿಂದ ದೇವರ ಪ್ರತಿಷ್ಠೆ, ಜೂನ್ 1ರಂದು ಬ್ರಹ್ಮಕಲಶ ಕಾರ್ಯಕ್ರಮ ನಡೆಯುವ ಹಿನ್ನೆಲೆಯಲ್ಲಿ ವಿವಿಧ ಸಮಿತಿ ರಚಿಸುವ ಕುರಿತು ತೀರ್ಮಾನಿಸಲಾಯಿತು.
Be the first to comment on "ಶ್ರೀ ಭಯಂಕೇಶ್ವರ ಸದಾಶಿವ ದೇವಸ್ಥಾನ ಬ್ರಹ್ಮಕಲಶಕ್ಕೆ ಸಿದ್ಧತೆ"