ಬರದಿಂದ ತತ್ತರಿಸುತ್ತಿರುವ ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ಗೋವುಗಳಿಗಾಗಿ 24ರಂದು ವರನಟ ಡಾ. ರಾಜಕುಮಾರ್ ಅವರ 89ನೇ ಜನ್ಮದಿನದ ಅಂಗವಾಗಿ ಕಂಠೀರವ ಸ್ಟುಡಿಯೋ ಆವರಣದಲ್ಲಿ ಡಾ. ರಾಜ್ ಸ್ಮಾರಕದ ಬಳಿ ನಡೆದ ಸರಳ ಸಮಾರಂಭದಲ್ಲಿ ಲಗ್ಗೆರೆಯ ಶ್ರೀಶ್ರೀ ಶಂಕರ ಗುರೂಜಿ ನೇತೃತ್ವದಲ್ಲಿ ಗೋಸೇನೆಯ ವತಿಯಿಂದ 89 ಚೀಲ ಹಿಂಡಿಯನ್ನು ರಾಮಚಂದ್ರಾಪುರ ಮಠ ದ “ಗೋಪ್ರಾಣಭಿಕ್ಷಾ” ಯೋಜನೆಗೆ ಸಮರ್ಪಿಸಲಾಯಿತು.
ಈ ಸಂದರ್ಭದಲ್ಲಿ ಡಾ. ರಾಜ್ ಪುತ್ರ ಶಿವರಾಜಕುಮಾರ್ ಅವರು ಭಕ್ತಿಯಿಂದ ಗೋಪೂಜೆಯನ್ನು ನೆರವೇರಿಸಿ, ಮೇವು ವಿತರಣೆಗೆ ಚಾಲನೆಯನ್ನು ನೀಡಿದರು. ಶ್ರೀ ರಾಮಚಂದ್ರಾಪುರಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಗಳ ಗೋಪ್ರಾಣಭಿಕ್ಷಾ ಆಂದೋಲನಕ್ಕೆ ಪೂರಕವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಗೋಸೇವಕ ಲಕ್ಷ್ಮೀನಾರಾಯಣ ಅವರು ಶ್ರೀ ಶಂಕರ ಗುರೂಜಿಯವರ ನೇತೃತ್ವದಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮೇವನ್ನು ಪೂರೈಸುವ ಬಗ್ಗೆ ಆಶ್ವಾಸನೆ ನೀಡಿದರು. ಶ್ರೀರಾಮಾಚಂದ್ರಾಪುರಮಠದ ಪ್ರತಿನಿಧಿಗಳು ಹಾಗೂ ಗೋಸೇನೆಯ ಪದಾಧಿಕಾರಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಡಾ. ರಾಜಕುಮಾರ್ ಅವರ ಜನ್ಮಸ್ಥಳವೂ ಮಲೆಮಹದೇಶ್ವರ ಬೆಟ್ಟದ ಸಮೀಪದ ಗಾಜನೂರು ಎಂಬುದನ್ನು ಇಲ್ಲಿ ಸ್ಮರಿಸಬಹುದು.
Be the first to comment on "ಡಾ.ರಾಜ್ 89ನೇ ಜನ್ಮದಿನ – ಗೋಸೇನೆಯಿಂದ “ಗೋಪ್ರಾಣಭಿಕ್ಷಾ”ಕ್ಕೆ 89 ಚೀಲ ಮೇವು"