ರಾಜ್ಯ ಪೊಲೀಸ್ ಇಲಾಖೆ ಜಾರಿಗೆ ತಂದಿರುವ ಹಳ್ಳಿಗೊಬ್ಬ ಪೊಲೀಸ್ ಕಾರ್ಯಕ್ರಮದ ಬೀಟ್ ವ್ಯವಸ್ಥೆಗೆ ಬಂಟ್ವಾಳ ಕಸಬ ಗ್ರಾಮದಲ್ಲೂ ಶನಿವಾರ ಬಂಟ್ವಾಳ ಬಡ್ಡಕಟ್ಟೆಯಲ್ಲಿರುವ ಹೊಟೇಲ್ ಚಂದ್ರವಿಲಾಸದ ಸಭಾಂಭಣದಲ್ಲಿ ನಗರ ಠಾಣೆಯ ಎಸ್ಸೈ ಎ.ಕೆ.ರಕ್ಷಿತ್ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಈ ಬೀಟ್ ವ್ಯವಸ್ಥೆಗೆ ಗ್ರಾಮದ ಎಲ್ಲ ಧರ್ಮದ ಮುಖಂಡರನ್ನು, ಶೇಕಡ ೩೦ರಷ್ಟು ಮಹಿಳೆಯರನ್ನು ಸೇರಿಸಿಕೊಂಡು ೫೦ ಮಂದಿಯ ತಂಡವನ್ನು ರಚಿಸಲಾಗುತ್ತಿದ್ದು ಅದಕ್ಕೆ ಓರ್ವ ಪೊಲೀಸ್ ಕಾನ್‌ಸ್ಟೇಬಲ್‌ನನ್ನು ಮುಖ್ಯಸ್ಥರನ್ನಾಗಿ ನಿಯುಕ್ತಿಗೊಳಿಸಲಾಗುತ್ತಿದೆ. ಅವರು ತಿಂಗಳ ಮೊದಲ ಮತ್ತು ಮೂರನೆ ವಾರದಂದು ತಮ್ಮ ಹಳ್ಳಿಗೆ ಆಗಮಿಸಿ ಅಲ್ಲೇ ವಾಸ್ತವ್ಯ ಹೂಡಿ ಸಮಸ್ಯೆಗಳನ್ನು ಆಲಿಸಲಿದ್ದಾರೆ. ಬಳಿಕ ಪೊಲೀಸ್ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಮ್ಮ ಗಮನಕ್ಕೆ ತರಲಿದ್ದು ತಾವು ಅದನ್ನು ಪರಿಹರಿಸಲು ಕ್ರಮ ಕೈಗೊಳ್ಳುತ್ತೇವೆ. ಉಳಿದ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಆಯಾಯ ಇಲಾಖೆಗೆ ರವಾನಿಸಿ ಒತ್ತಡ ಹಾಕಲಾಗುವುದು ಎಂದರು.
ಶನಿವಾರದಿಂದಲೇ ಈ ವ್ಯವಸ್ಥೆ ಬಂಟ್ವಾಳ ಕಸ್ಬ ಗ್ರಾಮದಲ್ಲಿ ಆರಂಭವಾಗಲಿದೆ. ಈ ವ್ಯವಸ್ಥೆಗೆ ಸಾರ್ವಜನಿ ಕರು ಕೈ ಜೋಡಿಸಬೇಕೆಂದು ಕೋರಿದ ಅವರು, ಯಾವುದೇ ಅಪರಾಧ ಅಥವಾ ಇತರ ಪ್ರಕರಣಗಳು ನಡೆದಾಗ ಬೀಟ್ ಸಿಬ್ಬಂದಿಯ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬಹುದು. ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿಡಲಾಗುವುದು. ಪಾಸ್‌ಪೋರ್ಟ್, ಉದ್ಯೋಗಕ್ಕೆ ಸಂಬಂಧಿಸಿದ ಅರ್ಜಿಗಳ ಪರಿಶೀಲನೆಯ ಸಂದರ್ಭದಲ್ಲಿ ಅರ್ಜಿದಾರರಿಗೆ ಆಗುವ ತೊಂದರೆಗಳನ್ನು ಬೀಟ್ ಪೊಲೀಸ್ ಪರಿಹರಿಸಲಿದ್ದಾರೆ.
ಕಸ್ಬ ಗ್ರಾಮದ ಬೀಟ್ ಪೊಲೀಸರಾದ ಹೆಡ್ ಕಾನ್ಟೇಬಲ್ ಕೃಷ್ಣ, ಕಾನ್‌ಸ್ಟೇಬಲ್‌ಗಳಾದ ಶಿವಕುಮಾರ್, ವಿಶಾಲಾಕ್ಷಿ, ಎಸ್ಸೈ ಜಿನ್ನಪ್ಪ ಅವರು ವೇದಿಕೆಯಲ್ಲಿದ್ದರು.
ಪುರಸಭಾ ಸದಸ್ಯ ವಾಸು ಪೂಜಾರಿ, ಹೋರಾಟಗಾರ ಪ್ರಭಾಕರ ದೈವಗುಡ್ಡೆ, ಜಗನ್ನಾಥ ತುಂಬೆ, ಮೆಸ್ಕಾಂ ಸಲಹಾ ಸಮಿತಿ ಸದಸ್ಯ ವೆಂಕಪ್ಪ ಪೂಜಾರಿ, ವಿಶ್ವನಾಥ ಚೆಂಡ್ತಿಮಾರ್ ಮೊದಲಾದವರು ಉಪಸ್ಥಿತರಿದ್ದರು.
Be the first to comment on "ಬಂಟ್ವಾಳ ಕಸಬಾ ಗ್ರಾಮದಲ್ಲಿ ಹಳ್ಳಿಗೊಬ್ಬ ಪೊಲೀಸ್ ಯೋಜನೆ ಜಾರಿ"