ಮಜಿ ವೀರಕಂಭ ಶಾಲೆಯಲ್ಲಿ ಪ್ರತಿಭಾಸಂಭ್ರಮ, ಹೆಜ್ಜೆ ಗೆಜ್ಜೆ ನಿನಾದ ಕಾರ್ಯಕ್ರಮ

 

ಗ್ರಾಮವೊಂದು ಸುಭಿಕ್ಷವಾಗಿ ಇರಬೇಕಾದರೆ ಶಾಲೆಗಳು ಬೆಳವಣಿಗೆ ಹೊಂದಬೇಕು. ಕೇವಲ ಸರಕಾರ ಮತ್ತು ಜನಪ್ರತಿನಿಧಿಗಳಿಂದಷ್ಟೇ ಶಾಲೆ ನಡೆಯುವುದಲ್ಲ, ಪಾಲಕರ ಮತ್ತು ವಿದ್ಯಾಭಿಮಾನಿಗಳ ಸಹಕಾರವೂ ಅಗತ್ಯ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜುಳಾ ಮಾಧವ ಮಾವೆ ಹೇಳಿದರು.

ಮಜಿ ವೀರಕಂಭ ಶಾಲೆಯಲ್ಲಿ 96ರ ಪ್ರತಿಭಾಸಂಭ್ರಮ ಹೆಜ್ಜೆ ಗೆಜ್ಜೆ ನಿನಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ತಾ.ಪಂ. ಸದಸ್ಯೆ ಗೀತಾ ಚಂದ್ರಶೇಖರ್, ಮೌಲ್ಯಯುತವಾದ ಶಿಕ್ಷಣ ಪಡೆದಾಗ ಉತ್ತಮ ಭವಿಷ್ಯ ಕಾಣಲು ಸಾಧ್ಯವಿದೆ. ಎಂದು ತಿಳಿಸಿದರು.

ಎಸ್.ಕೆ.ಪಿ.ಎ ಬಂಟ್ವಾಳ ವಲಯದ ಅಧ್ಯಕ್ಷ ಸುಕುಮಾರ್ ಬಂಟ್ವಾಳ ಮಾತನಾಡಿ, ಎಸ್.ಕೆ.ಪಿ.ಎ ಬಂಟ್ವಾಳ ವಲಯವು ಉಚಿತ ಬರವಣಿಗೆ ಹಾಗೂ ಲೇಖನ ಸಾಮಾಗ್ರಿಗಳನ್ನು  ಒದಗಿಸುವುದು, ವಿದ್ಯಾರ್ಥಿಗಳ ಪ್ರತಿಭೆಗಳನ್ನು ಗುರುತಿಸಲು ಪಠ್ಯೇತರ ಚಟುವಟಿಕೆಗಳನ್ನು ನೆರವೇರಿಸುವುದು, ಯುವ ಜನತೆಗೆ ಕಾನೂನು ಮಾಹಿತಿ ಶಿಬಿರದಂತಹ ಹಲವಾರು ಕಾರ್‍ಯಕ್ರಮಗಳನ್ನು ನೆರವೇರಿಸುತ್ತಿದೆ. ಇದೇ ರೀತಿ ಆದರ್ಶ ಜೀವನಕ್ಕಾಗಿ ಇಂದು ಶಿಕ್ಷಣ ದೊರಕಬೇಕಾಗಿದೆ ಅದಕ್ಕಾಗಿ ನಾವೆಲ್ಲರೂ ಒಂದಾಗಿ ಕೈಜೋಡಿಸೋಣ ಎಂದರು.