ಸ್ವಾಮಿ ವಿವೇಕಾನಂದರ 154ನೇ ಜನ್ಮದಿನಾಚರಣೆ ಅಂಗವಾಗಿ ರಾಷ್ಟ್ರೀಯ ಯುವ ಸಪ್ತಾಹದ ಸಂದರ್ಭದಲ್ಲಿ ಜನವರಿ ತಿಂಗಳಿನಲ್ಲಿ ನಡೆಸಲಾದ ತಾಲೂಕು ಮಟ್ಟದ ಸ್ಪರ್ಧೆಗಳಲ್ಲಿ ವಿಜೇತರಾದವರನ್ನು ಪುರಸ್ಕರಿಸುವ ಕಾರ್ಯಕ್ರಮ ಬಂಟ್ವಾಳ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ನಡೆಯಿತು.
ಬಂಟ್ವಾಳ ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮೋಹನ್ ರಾವ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ನಗದು ಹಾಗೂ ಪುಸ್ತಕ ಬಹುಮಾನಗಳೊಂದಿಗೆ ವಿಜೇತರನ್ನು ಪುರಸ್ಕರಿಸಿದರು. ಬಳಿಕ ಮಾತನಾಡಿದ ಅವರು ವಿವೇಕಾನಂದರ ಆದರ್ಶಗಳನ್ನು ಅಧ್ಯಯನ ಮಾಡಿ ಯುವಜನತೆ ಅವುಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಕರೆಯಿತ್ತರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲ ಡಾ.ಗಿರೀಶ ಭಟ್ ಮಾತನಾಡಿ, ಅಧ್ಯಾತ್ಮ ಸಾಧನೆಯೊಂದಿಗೆ ದೇಶದ ಬಗ್ಗೆ ಚಿಂತಿಸಿ ರಾಷ್ಟ್ರಪ್ರಜ್ಞೆಯನ್ನು ಜಾಗೃತಗೊಳಿಸಿದ ವಿವೇಕಾನಂದರು ಯುವಸಮೂಹಕ್ಕೆ ಸದಾ ಸ್ಫೂರ್ತಿ ಎಂದರು.
Be the first to comment on "ರಾಷ್ಟ್ರೀಯ ಯುವ ಸಪ್ತಾಹ- ಬಹುಮಾನ ವಿತರಣೆ ಕಾರ್ಯಕ್ರಮ"