ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್‌ಲ್ ಬಂಟ್ವಾಳ ತಾಲೂಕು ಸಮಿತಿ ರಚನೆ

 

ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್‌ಲ್ ದೇಯಿ ಬೈದ್ಯೆತಿ-ಕೋಟಿ ಚೆನ್ನಯ ಮೂಲಸ್ಥಾನ, ಆದಿದೈವ ಧೂಮಾವತಿ ಕ್ಷೇತ್ರ, ಸಾಯನ ಬೈದ್ಯರ ಗುರುಪೀಠ ಪುನರುತ್ಹಾನದ ಬಗ್ಗೆ ಬಂಟ್ವಾಳ ತಾಲೂಕು ಮಟ್ಟದ ಸಮಾಲೋಚನಾ ಸಭೆ, ವಿಜ್ಞಾಪನಾ ಪತ್ರ ಬಿಡುಗಡೆ ಹಾಗೂ ತಾಲೂಕು ಸಮಿತಿ ರಚನೆ ಭಾನುವಾರ ಮೆಲ್ಕಾರ್ ಬಿರ್ವ ಸೆಂಟರ್‌ನ ಸಭಾಂಗಣದಲ್ಲಿ ನಡೆಯಿತು.

ಗೆಜ್ಜೆಗಿರಿ ಕ್ಷೇತ್ರದ ಅಧ್ಯಕ್ಷ ಚಿತ್ತರಂಜನ್ ಕಂಕನಾಡಿ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕ್ಷೇತ್ರದ ನಿರ್ಮಾಣ ಕಾರ್‍ಯಕ್ಕೆ ಈಗಾಗಲೇ ಚಾಲನೆ ದೊರೆತಿದ್ದು ರಾಜ್ಯ, ದೇಶ, ವಿದೇಶಗಳಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ತುಳುನಾಡಿನ ಅನೇಕ ಕಡೆಗಳಲ್ಲಿ ಈಗಾಗಲೇ ಕ್ಷೇತ್ರದ ಸಮಿತಿಗಳು ರಚನೆಗೊಂಡು ಪ್ರಚಾರ ಕಾರ್‍ಯದಲ್ಲಿ ನಿರತವಾಗಿದೆ. ಮುಂದಿನ ಫೆಬ್ರವರಿ ತಿಂಗಳಿಗೆ ಕ್ಷೇತ್ರವು ಬ್ರಹ್ಮಕಲಶೋತ್ಸವಕ್ಕೆ ಸಜ್ಜಾಗಲಿದ್ದು ಈ ನಿಟ್ಟಿನಲ್ಲಿ ಸಮಸ್ತ ಭಾಂದವರು ಕೈಜೋಡಿಸಬೇಕಾಗಿದೆ ಎಂದು ಅವರು ಹೇಳಿದರು.

ಕ್ಷೇತ್ರದ ಕಾರ್ಯಾದ್ಯಕ್ಷ ಪೀತಾಂಬರ ಹೇರಾಜೆ ಮಾತನಾಡಿ ದೇಯಿ ಬೈದ್ಯೆತಿ ಮತ್ತು ಕೋಟಿ ಚೆನ್ನಯರ ಮೂಲಸ್ಥಾನದ ಪುನರ್‌ನಿರ್ಮಾಣದ ಕಾರ್‍ಯದಲ್ಲಿ ಕೈಜೋಡಿಸುವುದು ನಮ್ಮೆಲ್ಲರ ಸುಯೋಗವಾಗಿದೆ. ನಾಡಿನಾದ್ಯಂತ ಗರಡಿಗಳಲ್ಲಿ ಆರಾಧನೆ ಪಡೆಯುತ್ತಿರುವ ಕೋಟಿ ಚೆನ್ನಯರಿಗೆ ಇದೇ ಮೊದಲ ಬಾರಿಗೆ ತಮ್ಮ ಜನ್ಮಸ್ಥಳದಲ್ಲೇ ಉಪಾಸಣೆ ಪಡೆಯುವ ಸುವರ್ಣ ಕಾಲ ಕೂಡಿಬಂದಿರುವುದು ಸಮಸ್ತ ಭಕ್ತರ ಪಾಲಿಗೆ ಆಶಾಕಿರಣವಾಗಿದೆ ಎಂದರು.