ನೆಲ್ಯಾಡಿ ಸಮೀಪದ ಎಂಜಿರ ಎಂಬಲ್ಲಿ ಸಿಮೆಂಟ್ ಮೂಟೆಗಳನ್ನು ಹೇರಿಕೊಂಡು ಬರುತ್ತಿದ್ದ ಲಾರಿಯೊಂದನ್ನು ಅಡ್ಡಗಟ್ಟಿ ಲಾರಿಯಲ್ಲಿದ್ದ ಚಾಲಕನಿಗೆ ಚೂರಿಯಿಂದ ಇರಿದು ಹಲ್ಲೆ ನಡೆಸಿ ಆತನ ಬಳಿಯಿದ್ದ 17 ಸಾವಿರ ರೂ. ಮತ್ತು ಮೊಬೈಲನ್ನು ಕದ್ದೊಯ್ಯಲಾಗಿದೆ.
ನೆಲ್ಯಾಡಿ ಸಮೀಪದ ಎಂಜಿರ ಎಂಬಲ್ಲಿ ಸಿಮೆಂಟ್ ಮೂಟೆಗಳನ್ನು ಹೇರಿಕೊಂಡು ಬರುತ್ತಿದ್ದ ಲಾರಿಯೊಂದನ್ನು ಅಡ್ಡಗಟ್ಟಿ ಲಾರಿಯಲ್ಲಿದ್ದ ಚಾಲಕನಿಗೆ ಚೂರಿಯಿಂದ ಇರಿದು ಹಲ್ಲೆ ನಡೆಸಿ ಆತನ ಬಳಿಯಿದ್ದ 17 ಸಾವಿರ ರೂ. ಮತ್ತು ಮೊಬೈಲನ್ನು ಕದ್ದೊಯ್ಯಲಾಗಿದೆ.
ಶನಿವಾರ ರಾತ್ರಿ ಈ ಪ್ರಕರಣ ನಡೆದಿದೆ. ಚಿಕ್ಕಮಗಳೂರಿನ ಅಂಬ್ಲೆ ಗ್ರಾಮದ ಪಾಂಡುರಂಗ ಎಂಬವರ ಮಗ ರಾಘವೇಂದ್ರ (32) ಹಲ್ಲೆಗೊಳಗಾದ ಸಿಮೆಂಟ್ ಲಾರಿಯ ಚಾಲಕ.
ಮಂಗಳೂರಿಗೆ ಲೋಡನ್ನು ಕೊಂಡೊಯ್ಯುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಕೆಂಪು ಬಣ್ಣದ ಕಾರೊಂದರಲ್ಲಿ ಅಂದಾಜು 5 ಮಂದಿಯಿದ್ದ ದರೋಡೆಕೋರರ ತಂಡ ಕೃತ್ಯ ಎಸಗಿದೆ. ಬಂಟ್ವಾಳ ಡಿವೈಎಸ್ಪಿ ರವೀಶ್ ಸಿ.ಆರ್. ನೇತೃತ್ವದಲ್ಲಿ ಬೆಳ್ತಂಗಡಿ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ, ಧರ್ಮಸ್ಥಳ ಠಾಣಾ ಉಪನಿರೀಕ್ಷಕ ರಾಮ ನಾಯ್ಕ್ , ಮತ್ತು ಪೋಲೀಸರು ಸ್ಥಳಕ್ಕಾಗಮಿಸಿ ತನಿಖೆ ನಡೆಸುತ್ತಿದ್ದಾರೆ.
Be the first to comment on "ಚಾಲಕನಿಗೆ ಇರಿದು ನಗದು ದೋಚಿದ ಕಳ್ಳರು"