ಅಕ್ಕರಂಗಡಿಯಲ್ಲಿ ಉರೂಸ್, ಧಾರ್ಮಿಕ ಪ್ರವಚನ ಏ.26ರಿಂದ

ಪಾಣೆಮಂಗಳೂರು ಸಮೀಪದ ಅಕ್ಕರಂಗಡಿ ಕೇಂದ್ರ ಜುಮಾ ಮಸೀದಿ ವತಿಯಿಂದ ಉರೂಸ್ ಮುಬಾರಕ್ ಹಾಗೂ ನಾಲ್ಕು ದಿನಗಳ ಧಾರ್ಮಿಕ ಪ್ರವಚನ ಕಾರ್ಯಕ್ರಮವು ಎಪ್ರಿಲ್ 26 ರಿಂದ 29ರವರೆಗೆ ಇಲ್ಲಿನ ಹಿದಾಯತುಲ್ ಇಸ್ಲಾಂ ಮದ್ರಸ ವಠಾರದಲ್ಲಿ ನಡೆಯಲಿದೆ.

ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ ಉಪಾಧ್ಯಕ್ಷ ಶೈಖುನಾ ಕೆ.ಪಿ. ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಮಿತ್ತಬೈಲು ದುವಾಶಿರ್ವಚನಗೈಯಲಿದ್ದು, ಮಸೀದಿ ಮುದರ್ರಿಸ್ ಇಸ್ಮಾಯಿಲ್ ದಾರಿಮಿ ಉದ್ಘಾಟಿಸುವರು. ಮಸೀದಿ ಅಧ್ಯಕ್ಷ ಅಬ್ದುಲ್ ಹಮೀದ್ ಬಾವುಂಞಿ ಅಧ್ಯಕ್ಷತೆ ವಹಿಸುವರು. ಅಬೂ ಝಿಹಾನ್ ಝುಬೈರ್ ಅಝ್‌ಹರಿ ಪಳ್ಳಗೋಡು-ಕೇರಳ, ಸಫೀರಲಿ ಚಾಲಿಯಂ ಕ್ಯಾಲಿಕಟ್, ಅಬ್ದುಲ್ ಅಝೀಝ್ ಅಶ್ರಫಿ ಪಾಣತ್ತೂರು, ಅಶ್ಫಕ್ ಫೈಝಿ ಸಜಿಪನಡು ಧಾರ್ಮಿಕ ಪ್ರವಚನಗೈಯುವರು.

29 ರಂದು ಉರೂಸ್ ಸಮಾರೋಪ ಸಮಾರಂಭ ನಡೆಯಲಿದ್ದು, ಮೂಡಿಗೆರೆ ಖಾಝಿ ಶೈಖುನಾ ಎಂ.ಎ. ಖಾಸಿಂ ಮುಸ್ಲಿಯಾರ್ ದುವಾಶಿರ್ವಚನಗೈಯುವರು. ಸಯ್ಯಿದ್ ಕೆ.ಎಸ್. ಮುಹಮ್ಮದ್ ಶಮೀಮ್ ತಂಙಳ್ ಕುಂಬೋಳ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ರಾಜ್ಯ ಅಲ್ಪಸಂಖ್ಯಾತ ಅಭಿವೃದ್ದಿ ನಿಗಮದ ಅಧ್ಯಕ್ಷ ಎಂ.ಎ. ಗಫೂರ್, ರಾಜ್ಯ ಗೇರು ಅಭಿವೃದ್ದಿ ನಿಗಮದ ಅಧ್ಯಕ್ಷ ಹಾಜಿ ಬಿ.ಎಚ್. ಖಾದರ್, ಉದ್ಯಮಿಗಳಾದ ನೌಶಾದ್ ಹಾಜಿ ಸೂರಲ್ಪಾಡಿ, ಹಾಜಿ ಜಿ. ಸುಲೈಮಾನ್, ಹಾಜಿ ಹಫೀಝ್, ಪಿ.ಎಂ. ಅಹ್ಮದ್ ಹಾಜಿ ನೆಹರುನಗರ, ಮಸೀದಿ ಉಪಾಧ್ಯಕ್ಷ ಎಂ.ಎ. ಬಶೀರುದ್ದೀನ್ ಅನ್ವರ್, ಮಾಜಿ ಅಧ್ಯಕ್ಷ ಪಿ.ಜೆ. ಯೂಸುಫ್ ಹಾಜಿ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಮಸೀದಿ ಪ್ರಧಾನ ಕಾರ್ಯದರ್ಶಿ ಪಿ.ಜೆ. ಅಬ್ದುಲ್ ರಹಿಮಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ