ಮಂಚಿಯ ಲಯನ್ಸ್ ಸೇವಾ ಮಂದಿರದಲ್ಲಿ ಏ.16ರಿಂದ 22ವರೆಗೆ ಬೆಳಗ್ಗೆ 9ರಿಂದ ಸಂಜೆ 4.30ವರೆಗೆ ಮಕ್ಕಳ ಬೇಸಗೆ ಶಿಬಿರ ನಡೆಯಲಿದೆ.
16ರಂದು ಬೆಳಗ್ಗೆ ಡಾ. ಗೋಪಾಲ ಆಚಾರ್ ಅಧ್ಯಕ್ಷತೆಯಲ್ಲಿ ಅಧ್ಯಾಪಕ ರಮೇಶ್ ನಾಯಕ್ ರಾಯಿ ಶಿಬಿರ ಉದ್ಘಾಟಿಸುವರು. ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೌನೇಶ ವಿಶ್ವಕರ್ಮ, ಪತ್ರಕರ್ತ ಎ.ಗೋಪಾಲ ಅಂಚನ್, ನೂಜಿಬೈಲು ಅನುದಾನಿತ ಹಿ.ಪ್ರಾ.ಶಾಲೆ ಸಂಚಾಲಕಿ ಶಾಂತಲಾ ಭಟ್, ಪ್ರಗತಿ ಶಾಲೆ ಕುಕ್ಕಾಜೆ ಸಂಚಾಲಕ ಸುಭೋದ್ ಭಂಡಾರಿ ಉಪಸ್ಥಿತರಿರುವರು.
ಸಮಾರೋಪ ಸಮಾರಂಭ 22ರಂದು ಮಧ್ಯಾಹ್ನ 2.30ರಿಂದ ನಡೆಯಲಿದ್ದು, ಅಧ್ಯಕ್ಷತೆಯನ್ನು ಬಿ.ವಿ.ಕಾರಂತ ರಂಗಭೂಮಿಕಾ ಟ್ರಸ್ಟ್ ಅಧ್ಯಕ್ಷ ಕಜೆ ರಾಮಚಂದ್ರ ಭಟ್ ವಹಿಸುವರು. ಮುಖ್ಯ ಅತಿಥಿಗಳಾಗಿ ಸಾಹಿತಿ ಅರವಿಂದ ಚೊಕ್ಕಾಡಿ, ಬಂಟ್ವಾಳ ಎಸ್.ವಿ.ಎಸ್.ಕಾಲೇಜಿನ ಪ್ರೊಫೆಸರ್ ಡಾ. ನಾಗವೇಣಿ ಮಂಚಿ, ವಿಠಲ ರೈ ಬಾಲಾಜಿಬೈಲು, ಶ್ರೀಕೃಷ್ಣ ಮಿತ್ರ ಮಂಡಳಿ ಅಧ್ಯಕ್ಷ ದಿನೇಶ್ ಕೈಯೂರು ಉಪಸ್ಥಿತರಿರುವರು.
ಶಿಬಿರದ ಸಂಚಾಲಕರಾಗಿ ಚಿತ್ರಕಲಾ ಶಿಕ್ಷಕ ಬಾಲಕೃಷ್ಣ ಶೆಟ್ಟಿ ಖಂಡಿಗ, ಶಾರದಾ ಎಸ್. ರಾವ್, ಸದಸ್ಯರಾಗಿ ಕಜೆ ನರಸಿಂಹ ಭಟ್, ಎನ್.ಶ್ರೀನಿವಾಸ ಭಟ್, ರಮಾನಂದ ನೂಜಿಪ್ಪಾಡಿ, ಉಮಾನಾಥ ರೈ ಮೇರಾವು ಇದ್ದಾರೆ.
ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪರಿಸರವಾದಿ ದಿನೇಶ ಹೊಳ್ಳ, ಅರಿವು ಸಂಸ್ಥೆಯ ಮಾರ್ಗದರ್ಶಕ ನಾ.ದಾ. ಮಣಿನಾಲ್ಕೂರು, ಪತ್ರಕರ್ತ ಗೋಪಾಲ ಅಂಚನ್, ಸಮಸಾಂಪ್ರತಿ ವಿಟ್ಲದ ಮೂರ್ತಿ ದೇರಾಜೆ, ಶಂಕರ ಪ್ರಸಾದ್, ಎನ್.ಎಂ.ಪಿ.ಟಿ. ಮಂಗಳೂರಿನ ರಂಜನಾ ಕುಮಾರಿ ಸುರತ್ಕಲ್, ಚಿತ್ರಕಲಾ ಶಿಕ್ಷಕ ಸುಧೀರ್ ಕಾವೂರು, ತಾರಾನಾಥ ಕೈರಂಗಳ ಮತ್ತು ಮುರಳೀಕೃಷ್ಣ ರಾವ್ ಭಾಗವಹಿಸಲಿದ್ದಾರೆ.
Be the first to comment on "ಮಂಚಿಯಲ್ಲಿ ಮಕ್ಕಳ ಬೇಸಗೆ ಶಿಬಿರ"