ಟ್ಯಾಲೆಂಟ್ ರಿಸರ್ಚ್ ಪೌಂಡೇಶನ್ ವತಿಯಿಂದ ಮಹತ್ತರವಾದ ಯೋಜನೆಯಾದ ” ನಂಡೆ ಪೆಞಲ್” ಅಬಿಯಾನದ ಕಾರ್ಯಕ್ರಮ ಪರಂಗಿಪೇಟೆಯ ಸಿಟಿ ಸೆಂಟರ್ ನಲ್ಲಿ ನಡೆಯಿತು .
ಜಿಲ್ಲೆಯಲ್ಲಿ ಮದುವೆಯ ವಯಸ್ಸು ಮೀರಿ ಮೂವತ್ತು ದಾಟಿದ ನಾಲ್ಕು ಗೋಡೆಗಳ ಮದ್ಯೆ ತನ್ನ ಕನಸನ್ನು ಅದುಮಿಟ್ಟು ಅತ್ಯಂತ ದಾರುಣ ಜೀವನ ನಡೆಸುತ್ತಿರುವ ಸಹೋದರಿಯರ ಕನಸನ್ನು ನನಸಾಗಿಸುವ ಯೋಜನೆ ಮುಂದಿನ ಒಂದು ವರ್ಷದ ಅಬಿಯಾನವು ಎಲ್ಲಾ ಸಂಘ ಸಂಸ್ಥೆ, ಉದಾರ ದಾನಿಗಳ, ದಾರ್ಮಿಕ ವಿದ್ವಾಂಸರ, ಮಸೀದಿ ಆಡಳಿತ ಸಮಿತಿಯ ಸಹಕಾರದೊಂದಿಗೆ ಟ್ಯಾಲೆಂಟ್ ರಿಸರ್ಚ್ ಪೌಂಡೇಶನ್ ಹಮ್ಮಿಕೊಂಡಿದೆ.
ಜಿಲ್ಲೆಯಲ್ಲಿ 30 ದಾಟಿದ ಸಹೋದರಿಯರ ನೈಜ ಸ್ಥಿತಿಯ ಬಗ್ಗೆ ಅಬಿಯಾನದ ಪ್ರಚಾರ ಉಸ್ತುವಾರಿ ವಹಿಸಿ ಮಾತನಾಡಿದ ರಫೀಕ್ ಮಾಸ್ಟರ್ ವರದಕ್ಷಿಣೆ ಬಡತನ ಸಮಾಜದ ನಡೆದುಕೊಳ್ಳುವ ರೀತಿಯ ಬಗ್ಗೆ ಸಹೋದರಿಯರು ಕಿನ್ನತೆ ಅನುಬವಿಸುತ್ತಿರುವುದನ್ನು ವಿವರಿಸಿದರು
ಈ ಸಹೋದರಿಯರ ಬಗ್ಗೆ ಕಾಳಜಿ ವಹಿಸಿ ಇದು ” ನಂಡೆ ಪೆಞಲ್” ನನ್ನ ಸಹೋದರಿ ಎಂದು ಬಾವಿಸಿ ಈ ಆಬಿಯಾನದಲ್ಲಿ ಮೊಹಲ್ಲಾ ಆಡಳಿತ ಸಮಿತಿ ಸಂಘ ಸಂಸ್ಥೆಗಳು ಶ್ರಮಿಸಬೇಕು ಎಂದು ಸಹೋದರಿಯರ ಸ್ಥಿತಿಯನ್ನು ಸೇರಿದ ಜನರ ಮುಂದೆ ಇಟ್ಟರು
ಈ ಸಂದರ್ಭದಲ್ಲಿ ನಂಡೆ ಪೆಞಲ್ ಅಬಿಯಾನದ ಸ್ವಾಗತ ಸಮಿತಿ ಅದ್ಯಕ್ಷರಾದ ನೌಷಾದ್ ಹಾಜಿ, ಸರ್ವೆ ಮುಖ್ಯಸ್ಥರಾದ ಡಿ ಅಬ್ದುಲ್ ಹಮೀದ್ ಮತನಾಡಿದರು, ಸಬೆಯಲ್ಲಿ ಮಸೀದಿ ಆಡಳಿತ ಸಮಿತಿ ಸದಸ್ಯರು, ಮತ್ತು ಸಂಘ ಸಂಸ್ಥೆಗಳ ನಾಯಕರುಗಳು, ರಾಜಕೀಯ ಮುಖಂಡರುಗಳು ಉದ್ಯಮಿಗಳು ಉಪಸ್ಥಿತರಿದ್ದರು
Be the first to comment on "ಪರಂಗಿಪೇಟೆಯಲ್ಲಿ ನಂಡೆ ಪೆಞಲ್ ಅಬಿಯಾನ ಕಾರ್ಯಕ್ರಮ"