ಬ್ಯಾಂಕ್ ವ್ಯವಹಾರ ಸ್ಥಗಿತಗೊಳಿಸಲು ಯತ್ನ: ಆರೋಪಿ ಬಂಧನ

ಬ್ಯಾಂಕಿನ ಕಂಪ್ಯೂಟರ್ ಸೆಟ್ಟಿಂಗ್ ಬದಲಾಯಿಸಿ ವ್ಯವಹಾರ ಸ್ಥಗಿತಗೊಳಿಸಲು ಯತ್ನಿಸಿದ ಆರೋಪದಲ್ಲಿ ವಿಜೇತ್ ಐವನ್ ಡಿಸೋಜ ಎಂಬಾತನನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸಿದ್ದಾರೆ.

ಬಿ.ಸಿ.ರೋಡಿನಲ್ಲಿರುವ ಮಂಗಳೂರು ಕೆಥೋಲಿಕ್ ಕೋ ಆಪರೇಟಿವ್ ಬ್ಯಾಂಕ್ ಶಾಖೆಯಲ್ಲಿ ಕ್ಯಾಶಿಯರ್ ಆಗಿರುವ ವಿಜೇತ್ ಈ ಕೃತ್ಯ ಎಸಗಿರುವುದಾಗಿ ಜನರಲ್ ಮೆನೇಜರ್ ಸುನಿಲ್ ಐವನ್ ಮೆನೇಜಸ್ ನೀಡಿದ ದೂರಿನನ್ವಯ ಎಸ್ಪಿ ಭೂಷಣ್ ಬೊರಸೆ ಮತ್ತು ಡಿವೈಎಸ್ಪಿ ರವೀಶ್ ಸಿ.ಆರ್. ನಿರ್ದೇಶನದಲ್ಲಿ ಸಿಪಿಐ ಮಂಜಯ್ಯ ಆರೋಪಿಯನ್ನು ಬಂಧಿಸಿದ್ದಾರೆ.

ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ