ಬಂಟ್ವಾಳ ತಾಲೂಕಿನ ಸಜಿಪಮುನ್ನೂರು ಗ್ರಾಮದ ಮಡಿವಾಳಪದವು ಎಂಬಲ್ಲಿ ಅಕ್ರಮವಾಗಿ ನೇತ್ರಾವತಿ ನದಿಯಿಂದ ಮರಳು ತೆಗೆಯುತ್ತಿದ್ದ ಆರೋಪದಲ್ಲಿ ಬಂಟ್ವಾಳ ನಗರ ಎಸ್.ಐ ರಕ್ಷಿತ್ ಗ್ರಾಮಾಂತರ ಎಸ್ ಐ ಡಿ.ಎಲ್. ನಾಗೇಶ್ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದಾರೆ. ಈ ಸಂದರ್ಭ ಅಕ್ರಮ ಮರಳು ಧಂಧೆಗೆ ಒಳಗೊಂಡಿದ್ದ ೪ ಟಿಪ್ಪರ್ ಗಳು, ಒಂದು ಕ್ರೇನ್, ಹಾಗೂ ಇತರೆ ಪರಿಕರಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡು ರಶೀದ್ ಎಂಬ ಆರೋಪಿಯನ್ನು ಬಂಸಲಾಗಿದೆ.
Be the first to comment on "ಬಂಟ್ವಾಳ ಪೊಲೀಸರಿಂದ ಅಕ್ರಮ ಮರಳು ಅಡ್ಡೆಗೆ ಧಾಳಿ"