March 2017

ಕಲ್ಲಡ್ಕದಲ್ಲಿ ಮನೆಗಳಿಗೆ ನುಗ್ಗಿದ ಕಳ್ಳರು, ಚಿನ್ನಾಭರಣ ಕಳವು

ಕಲ್ಲಡ್ಕದಲ್ಲಿ ಎರಡು ಮನೆಗಳಿಗೆ ಮಂಗಳವಾರ ರಾತ್ರಿ ಕಳ್ಳರ ತಂಡ ನುಗ್ಗಿದೆ. ಕಲ್ಲಡ್ಕ ನಿವಾಸಿ ಕೆ.ಸಿ.ನಿಝಾರ್ ಎಂಬವರ ಮನೆಯ ಕಿಟಕಿ ಸರಳು ಮುರಿದು ಪ್ರವೇಶಿಸಿ, ಕಪಾಟಿನಲ್ಲಿಟ್ಟಿದ್ದ ಲಕ್ಷಾಂತರ ರೂ. ಚಿನ್ನಾಭರಣ ಕಳವು ಮಾಡಲಾಗಿದೆ. ಕಲ್ಲಡ್ಕ ಪೇಟೆಯಲ್ಲಿ ನಿಝಾರ್ ಅವರ…


ಬಿ.ಸಿ.ರೋಡಿನಲ್ಲಿ ಬೀದಿನಾಟಕ

ಮಾದಕ ವಸ್ತು ಸೇವಿಸಿ ವಾಹನ ಚಲಾಯಿಸುವ ದುಷ್ಪರಿಣಾಮವನ್ನು ಬಿಂಬಿಸುವ ಬೀದಿ ನಾಟಕ ಬಿ.ಸಿ.ರೋಡ್ ಮೇಲ್ಸೇತುವೆ ಅಡಿಯಲ್ಲಿ ಮಂಗಳೂರು ಅಲೋಸಿಯಸ್ ಕಾಲೇಜಿನ ವಿದ್ಯಾರ್ಥಿಗಳಿಂದ ನಡೆಯಿತು. ಈ ಸಂದರ್ಭ ಬಂಟ್ವಾಳ ನಗರ ಠಾಣೆಯ ಎಸ್ಸೈ ನಂದಕುಮಾರ್, ಟ್ರಾಫಿಕ್ ಎಸ್ಸೈ ಚಂದ್ರಶೇಖರಯ್ಯ…


ಬಿ.ಸಿ.ರೋಡ್ ನಲ್ಲಿ ಕಸದ ರಾಶಿಗೆ ಬೆಂಕಿ

ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣಗುರು ವೃತ್ತದ ಬಳಿ ಪುರಸಭೆಯಿಂದ ಹಾಕಿರುವ ಕಸದ ರಾಶಿಗೆ ಯಾರೋ ಬೆಂಕಿ ಹಚ್ಚಿದ್ದಾರೆ. ಇದರಿಂದ ಸುತ್ತಮುತ್ತ ಬೆಂಕಿ ವ್ಯಾಪಿಸಿದ್ದು, ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ನಂದಿಸಬೇಕಾಯತು. ಕೆಲ ಸಮಯದ ಹಿಂದೆ ಇದೇ ರೀತಿ…


ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಡಾ. ಪುಂಡಿಕಾಯಿ ಗಣಪಯ್ಯ ಭಟ್

ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ಸಮ್ಮೇಳನ ಸ್ವಾಗತ ಸಮಿತಿ ಸಹಯೋಗದೊಂದಿಗೆ ಸಿದ್ಧಕಟ್ಟೆ ಸರಕಾರಿ ಪದವಿಪೂರ್ವ ಕಾಲೇಜಿನ ಫ್ರೌಡಶಾಲಾ ವಿಭಾಗದಲ್ಲಿ ಮಾ.25 ರಂದು ನಡೆಯಲಿರುವ ಬಂಟ್ವಾಳ ತಾಲೂಕು 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಡಾ….


ಶ್ರೀಕ್ಷೇತ್ರ ನಂದಾವರ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎ.ಸಿ.ಭಂಡಾರಿ

ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಹಿರಿಯ ಸಾಮಾಜಿಕ ನೇತಾರ, ಜಿ.ಪಂ.ಮಾಜಿ ಸದಸ್ಯ ಎ.ಸಿ. ಭಂಡಾರಿ ಆಯ್ಕೆಯಾಗಿದ್ದಾರೆ. ಶ್ರೀಕ್ಷೇತ್ರದಲ್ಲಿ ಮಾ. ೭ರಂದು ನಡೆದ ಸಮಿತಿ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆಯನ್ನು ಮಾಡಲಾಗಿದೆ….


ರಮಾನಾಥ ರೈ ಪ್ರವಾಸ

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ೯ರಂದು ಬೆಳಗ್ಗೆ ೧೦ಕ್ಕೆ ಸಿದ್ದಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯುವ ಪ್ರತಿಭಾ ಪುರಸ್ಕಾರದಲ್ಲಿ ಭಾಗವಹಿಸುವರು. ಬಳಿಕ ಸ್ಥಳೀಯ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಅದಾದ ಬಳಿಕ ಸಂಜೆ…


ಪ.ಜಾತಿ, ಪಂಗಡದವರಿಗೆ ಆರ್.ಸಿ.ಸಿ, ಮನೆ ನಿರ್ಮಿಸಿ

ಬಂಟ್ವಾಳ ಪುರಸಭೆಯಲ್ಲಿ ವಾಸಿಸುವ ಎಲ್ಲ ಪರಿಶಿಷ್ಟ ಜಾತಿ, ಪಂಗಡದವರಿಗೆ ಆರ್.ಸಿ.ಸಿ. ಮನೆ ನಿರ್ಮಿಸಿ, ಹಂಚುರಹಿತ ಮನೆ ನಿರ್ಮಿಸಲು ಕ್ರಮ ಕೈಗೊಳ್ಳಿ. ಸರಕಾರದಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ ಬಿಡುಗಡೆಯಾಗಿರುವ ವಿಶೇಷ ಅನುದಾನಕ್ಕೆ ಕ್ರಿಯಾ ಯೋಜನೆ…


ಪುಂಚೋಡಿ: 40 ನೇ ವರ್ಷದ ಯಕ್ಷಗಾನ ಬಯಲಾಟ

ಪಂಜಿಕಲ್ಲು ಗ್ರಾಮದ ಪುಂಚೋಡಿ ನಾಗಬನದಲ್ಲಿ ಸ್ಥಳೀಯ ಬುಡೋಳಿ ಮತ್ತು ಪಿಲಿಮೊಗರು ಗ್ರಾಮ ಒಳಗೊಂಡಂತೆ ಇದೇ ೧೦ ರಂದು ಬೆಳಿಗ್ಗೆ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ನಾಗಶಿಲಾ ಪ್ರತಿಷ್ಠೆ ಸಹಿತ ಆಶ್ಲೇಷ ಬಲಿ ಹಾಗೂ ಮಧ್ಯಾಹ್ನ ಸಾರ್ವಜನಿಕ…


ಕೃಷಿ ಪ್ರಾಂಗಣ, ಗ್ರಾಮೀಣ ರಸ್ತೆಗೆ ಆಗ್ರಹ

ಎಪಿಎಂಸಿಯ ನೂತನ ಸಮಿತಿಯ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಾದ ಮೇಲೆ ಪ್ರಥಮ ಸಭೆ ಇಲ್ಲಿನ ಎಪಿಎಂಸಿ ಸಭಾಂಗಣದಲ್ಲಿ ನಡೆಯಿತು. ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ವತಿಯಿಂದ ತಾಲೂಕಿನ ವಿವಿಧೆಡೆ ರೈತರಿಗೆ ಅನುಕೂಲವಾಗುವಂತೆ ಸರ್ಕಾರಿ ಜಮೀನು ದೊರೆತಲ್ಲಿ…


ಪಂಬತ್ತಜೆ-ಪನೆಯಡ್ಕದಲ್ಲಿ ಆಕಸ್ಮಿಕ ಬೆಂಕಿ

ಕರೋಪಾಡಿ ಗ್ರಾಮದ ಪಂಬತ್ತಜೆ – ಪನೆಯಡ್ಕ ಎಂಬಲ್ಲಿ ಆಕಸ್ಮಿಕವಾಗಿ ಕಾಡಿಗೆ ಬೆಂಕಿ ಬಿದ್ದು ಅಪಾರ ಪ್ರಮಾಣದ ಮರಗಳು ಆಹುತಿಯಾಗಿವೆ. ಮಧ್ಯಾಹ್ನ ವೇಳೆ ಕಾಡಿನೊಳಗೆ ಬೆಂಕಿ ಕಾಣಿಸಿಕೊಂಡಿದ್ದು, ಈ ಬಗ್ಗೆ ಸ್ಥಳೀಯರು ಬಂಟ್ವಾಳ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ….