- ಬಿ.ತಮ್ಮಯ್ಯ
- ಅಂಕಣ: ನಮ್ಮ ಭಾಷೆ
- www.bantwalnews.com
ಅಶೋಕ ಚಕ್ರವರ್ತಿಯ ಶಿಲಾಶಾಸನ ಕುಂದಾಪುರದ ಸಿದ್ದಾಪುರದಲ್ಲಿ ದೊರೆತಿದೆ. ಅದು ಕ್ರಿ.ಪೂ. 263ರಲ್ಲಿ ಬರೆದದ್ದು. ತುಳುನಾಡನ್ನು ಸತ್ಯಪುತ್ರರ ನಾಡು ಎಂದು ಬರೆಯಲಾಗಿದೆ. ಪ್ರಾಚೀನ ಆಳುಪರು ಕ್ರಿ.ಶ.650ರಿಂದ 990ವರೆಗೆ ಆಳಿದ ಬಗ್ಗೆ ದಾಖಲಾಗಿದೆ. ಮಧ್ಯಯುಗೀಯ ಆಳುಪರು ಕುಂದವರ್ಮರಿಂದ ವೀರಪಾಂಡ್ಯದೇವ ಕ್ರಿ.ಶ.1399ರವರೆಗೆ ಆಳಿದರು. ಬನವಾಸಿ ಕದಂಬರು ಕ್ರಿ.ಪೂ. 1500ರಲ್ಲಿ ಆಳಿದರು. ಇವರು ಆರ್ಯ ವಂಶದವರಾಗಿದ್ದು ಇದೇ ಶಾಖೆಯ ಒಂದು ಕುಟುಂಬ ಕೊಡಗಿಗೆ ಹೋಗಿ ಕೊಡವವಂಶವಾಯಿತು ಎಂದು ಚರಿತ್ರೆಯಲ್ಲಿ ಕಾಣುತ್ತದೆ. ಆಗ ತುಳು ಕನನ್ನಡ ಕೊಡವ ಭಾಷೆಗಳು ವ್ಯವಹಾರದಲ್ಲಿದ್ದವು. ಇವರ ಮನೆ ಮುಂದೆ ಕದಂಬ ವೃಕ್ಷ ಇದ್ದುದರಿಂದ ಇವರನ್ನು ಕದಂಬರೆಂದು ಕರೆಯುತ್ತಿದ್ದರು. ಕದಂಬ ನಂತರ ಚಾಲುಕ್ಯರ ಪ್ರವೇಶ ಆಯಿತು. ನಂತರ ರಾಷ್ಟ್ರಕೂಟರು ಕ್ರಿ.ಶ. 1336ರಲ್ಲಿ ವಿಜಯನಗರ ರಾಜರ ಕೈಕೆಳಗೆ ಇದ್ದರು.
12ನೇ ಶತಮಾನದಲ್ಲಿ ಮಹಮ್ಮದೀಯರರು ಬಂದ ಮೇಲೆ ಜೈನಮತವು ಹೀನಾಯ ಸ್ಥಿತಿಗೆ ಬಂತು. ಕ್ರಿ.ಪೂ. 3ನೇ ಶತಮಾನದಲ್ಲಿ ಜೈನರು ಮತಪ್ರಚಾರಕ್ಕೆ ತುಳುನಾಡಿಗೆ ಬಂದರು. ಇಲ್ಲಿಯ ಅನೇಕ ಜನ ಜೈನರಾಗಿ ಮತಾಂತರಗೊಂಡರು. ಜೈನರು ತುಂಡರಸರು ಕದಂಬರು, ಚಾಲುಕ್ಯರರು, ರಾಷ್ಟ್ರಕೂಟರ, ಹೊಯ್ಸಳ ಬಲ್ಲಾಳರು ಮತ್ತು ವಿಜಯನಗರರದ ಅರಸರ ಕಾಲದಲ್ಲಿ ತುಂಡರಸರಾಗಿ ತುಳುನಾಡನ್ನು ಆಳಿದರು. ಕ್ರಿ.ಶ.1560ರಿಂದ 1763ರವರೆಗೆ ಇಕ್ಕೇರಿ ಅಳಸರು ತುಳುನಾಡನ್ನು ಆಳಿದರು. ಆಗ ರಾಮರಾಜ ಕ್ಷತ್ರಿಯರನ್ನು ಕೋಟೆ ಕಾಯಲು ಇಕ್ಕೇರಿಯಿಂದ ಕರೆತಂದರು. ಕ್ರಿ.ಶ.968ರಿಂದ ನಾಥಪಂಥ ಕದಿರೆ, ವಿಟ್ಲದಲ್ಲಿ ಸ್ಥಾಪನೆಗೊಂಡಿತು. ಶಂಕರ, ಮಧ್ವರೂ ತುಳುನಾಡಿನಲ್ಲಿ ಪ್ರಭಾವ ಬೀರಿದ್ದಾರೆ. ಕ್ರಿ.ಶ.7ನೇ ಶತಮಾನದಿಂದ ಮುಸ್ಲಿಮರು ವ್ಯಾಪಾರಕ್ಕೆಂದು ತುಳುನಾಡಿಗೆ ಬಂದರು. ಕ್ರಿ.ಶ.1524ರಿಂದ ವಾಸ್ಕೋಡಿಗಾಮ ತುಳುನಾಡಿನ ಸಂಪರ್ಕಕ್ಕೆ ಬಂದ. ಕ್ರಿ.ಶ.1698ರಿಂದ ಧರ್ಮಪ್ರಚಾರಕ್ಕೆ ಪ್ರೊಟೆಸ್ಟೆಂಟರು ಬಂದರು. ಹೈದರಾಲಿ, ಟಿಪ್ಪು, ಫ್ರೆಂಚರು ಇಂಗ್ಲೀಷರು ತುಳುನಾಡಿನ ಆಡಳಿತವನ್ನು ಕೈಗೆತ್ತಿಕೊಂಡರು ತುಂಡರಸರಾದ ಕಾರ್ಕಳ ಭೈರವರಸು, ಮೂಡುಬಿದಿರೆಯ ಚೌಟರು, ವೇಣೂರು ಅರುವದ ಅಜಿಲರು, ಬಂಗಾಡಿಯ ಬಂಗರಸರು, ಬೈಲಂಗಗಡಿಯ ಮೂಲರು ತುಂಡರಸರಾಗಿ ತುಳುನಾಡನ್ನು ಆಳಿದರು.
ಲೇಖಕರ ದೂರವಾಣಿ ಸಂಖ್ಯೆ: 9481917204
Be the first to comment on "ತುಳುನಾಡನ್ನು ಆಳಿದವರು"