ಜನೆತೆಗೆ ಅಭೂತಪೂರ್ವ ಕೊಡುಗೆ: ಸಚಿವ ರೈ

ಬಂಟ್ವಾಳನ್ಯೂಸ್ ವರದಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಸಾಮಾಜಿಕ ನ್ಯಾಯ, ಪ್ರಾದೇಶಿಕ ಸಮತೋಲನ, ಕೃಷಿ, ಕೈಗಾರಿಕೆ ಹಾಗೂ ಪ್ರವಾಸ್ಯೋದ್ಯಮ, ರೈತರು, ಕಾರ್ಮಿಕರು, ಯುವಜನತೆ, ಮಹಿಳೆಯರು ಮತ್ತು ಸಮಾಜದ ಇತರ ಎಲ್ಲಾ ವರ್ಗದ ಜನರಿಗೆ ಆದ್ಯತೆ ನೀಡಿ ಕರ್ನಾಟಕ ರಾಜ್ಯದ ಜನತೆಗೆ 2017-18ನೇ ಸಾಲಿನ ಬಜೆಟ್ ಮಂಡಿಸುವ ಮೂಲಕ ಅಭೂತಪೂರ್ವ ಕೊಡುಗೆಯನ್ನು ನೀಡಿದ್ದಾರೆ ಎಂದು ಅರಣ್ಯ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಸಂತಸ ವ್ಯಕ್ತಪಡಿಸಿದ್ದಾರೆ.  

ಕೃಷಿ ಯಂತ್ರಗಳ ಬಳಕೆಯನ್ನು ಪ್ರೋತ್ಸಾಹಿಸಲು ಪ್ರತಿ ತಾಲ್ಲೂಕು ಕೇಂದ್ರದಲ್ಲಿ ಒಂದರಂತೆ 174 ಗ್ರಾಮೀಣ ಕೃಷಿ ಯಂತ್ರೋಪಕರಣ/ಸೇವಾ ಕೇಂದ್ರಗಳನ್ನು  ಸ್ಥಾಪಿಸ ಲಾಗುವುದು .ಕೊಲ್ಲಿ ರಾಷ್ಟ್ರಗಳಲ್ಲಿ ಕೆಲಸ ಮಾಡಿ ಹಿಂತಿರುಗಿರುವ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಹೊಂದಲು ಕೇರಳ ಮಾದರಿಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಒಳನಾಡು ಮೀನುಗಾರಿಕೆಗೆ ಬಗ್ಗೆ ಸ್ವಂತ ಜಮೀನಿನಲ್ಲಿ ಕೊಳ ನಿರ್ಮಿಸಿ ಮೀನು ಕೃಷಿ ಕೈಗೊಳ್ಳಲು ಗರಿಷ್ಠ 4.25 ಲಕ್ಷ ರೂಗಳಿಗೆ ಒಳಪಟ್ಟು ಶೇಕಡ 50 ರಷ್ಟು ಸಹಾಯಧನ. 2018ರ ಸಾಲಿನಲ್ಲಿ ಸೇರ್ಪಡೆಯಾಗುವ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‍ಟ್ಯಾಪ್ ವಿತರಣೆ
ಅಂಗನವಾಡಿ ಶಾಲಾ ವಿದ್ಯಾರ್ಥಿಗಳಿಗೆ ವಾರದಲ್ಲಿ 2 ದಿನ ಮೊಟ್ಟೆ ಮತ್ತು 5 ದಿನ ಹಾಲು . ಆಶಾ ಕಾರ್ಯಕರ್ತರಿಗೆ ಹೆಚ್ಚುವರಿಯಾಗಿ 1000 ರೂಗಳ ಗೌರವ ಧನ.  ಪೌಷ್ಠಿಕಾಂಶದ ಕೊರತೆಯನ್ನು ನಿವಾರಿಸಲು ರಾಜ್ಯದ ಎಲ್ಲಾ 30 ಜಿಲ್ಲೆಗಳಗೂ ಗರ್ಭಿಣಿ ಮತ್ತು ಬಾಣಂತಿ ಸ್ತ್ರೀಯರಿಗೆ ‘ಮಾತೃಪೂರ್ಣ’ ಯೋಜನೆಗೆ 302 ಕೋಟಿ  ಅಂಗನವಾಡಿ ಕಾರ್ಯಕರ್ತರ ಗೌರವಧನ ಹೆಚ್ಚಳದಿಂದ ಜಿಲ್ಲೆಯ ಜನತೆಗೂ ಲಾಭವಾಗಲಿದೆ ಎಂದು ಅವರು ಹೇಳಿದ್ದಾರೆ.
ಸವಿರುಚಿ ಕ್ಯಾಂಟೀನ್
ಜಿಲ್ಲಾ ಸ್ತೀ ಶಕ್ತಿ ಒಕ್ಕೂಟಗಳ ಮೂಲಕ ಎಲ್ಲಾ 30 ಜಿಲ್ಲೆಗಳಲ್ಲಿ ‘ಸವಿರುಚಿ ಸಂಚಾರಿ ಕ್ಯಾಂಟೀನ್’ ಯೋಜನೆ, ಬೆಂಗಳೂರು ನಗರದಲ್ಲಿ ರಿಯಾಯಿತಿ ದರದಲ್ಲಿ ‘ನಮ್ಮ ಕ್ಯಾಂಟೀನ್’ ಯೋಜನೆ , ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲಿ ಪ್ರಾಥಮಿಕ ಕೃಷಿ ಸಹಕಾರ ಸಂಘಗಳನ್ನು ಸ್ಥಾಪಿಸುವುದು, ಮಹಿಳಾ ಸ್ವ ಸಹಾಯ ಗುಂಪುಗಳಿಗೆ ಸಾಲವನ್ನು ಶೂನ್ಯ ಬಡ್ಡಿ ದರದಲ್ಲಿ ಸಹಕಾರ ಸಂಘಗಳ ಮೂಲಕ ವಿತರಣೆ,  ಅನ್ನಭಾಗ್ಯ ಯೋಜನೆಯಲ್ಲಿ ವಿತರಿಸುತ್ತಿರುವ  5 ಕೆಜಿ ಅಕ್ಕಿಯನ್ನು 7 ಕೆಜಿಗೆ ಹೆಚ್ಚಳ, ಕ್ಷೀರ ಭಾಗ್ಯ ಯೋಜನೆಯಡಿ ಜುಲೈ ತಿಂಗಳಿನಿಂದ ಹಾಲು ವಿತರಣೆ  ವಾರದಲ್ಲಿ  5 ದಿನಕ್ಕೆ ಹೆಚ್ಚಳ, ಅರಣ್ಯ ಮತ್ತು ಅರಣ್ಯದಂಚಿನಲ್ಲಿ ವಾಸಿಸುತ್ತಿರುವ ಆದಿವಾಸಿ ಸಮುದಾಯದವರನ್ನು ಅರಣ್ಯ ಇಲಾಖೆಯ ಗಾರ್ಡ್ ಮತ್ತು ವಾಚರ್ ಇತ್ಯಾದಿ ಹುದ್ದೆಗಳಿಗೆ ವಿಶೇಷ ನೇಮಕಾತಿಗೆ ಕ್ರಮವಹಿಸುವುದು, 2 ಲಕ್ಷ ಬಿಪಿಎಲ್ ಕುಟುಂಬಗಳಿಗೆ ಅಡುಗೆ ಅನಿಲ ಸಂಪರ್ಕ ಕಲ್ಪಿಸಲು 100 ಕೋಟಿ ಅನುದಾನ,  300 ಮೆಟ್ರಿಕ್ ನಂತರದ ಹಾಸ್ಟಲ್ ಗಳ ನಿರ್ಮಾಣಕ್ಕೆ 279 ಕೋಟಿಗಳ ಅನುದಾನ, ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಮತ್ತು ಗ್ರಾಮ ಪಂಚಾಯತ್ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಮತ್ತು ಸದಸ್ಯರ ಗೌರವಧನ ಹೆಚ್ಚಳ , ವಿಧವೆಯರಿಗೆ ಹೈನುಗಾರಿಕೆ ಘಟಕ ಯೋಜನೆ  28 ಕೋಟಿ, ಸಾರಾಯಿ ಮಾರಾಟ ನಿಷೇಧದಿಂದ  ಉದ್ಯೋಗ ಕಳೆದುಕೊಂಡವರಿಗೆ ಸ್ವ ಉದ್ಯೋಗಕ್ಕಾಗಿ ಆರ್ಥಿಕ ನೆರವು,  ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ´ಸಾಲು ಮರದ ತಿಮ್ಮಕ್ಕ ವೃಕ್ಷ ಉದ್ಯಾನವನ’ ಸ್ಥಾಪನೆ. ಮೊದಲ ಹಂತದಲ್ಲಿ 50 ಟ್ರೀ ಪಾರ್ಕ್‍ಗಳ ಅಭಿವೃದ್ದಿ ಬಜೆಟ್ ನಲ್ಲಿದೆ.
ನೀಲಗಿರಿ ಮರಗಳಿಗೆ ಪರ್ಯಾಯವಾಗಿ 700 ಹೆಕ್ಟೇರ್‍ಗಳ ಶ್ರೀಗಂಧ ನೆಡುತೋಪು ಅಭಿವೃದ್ದಿ, ವನಮಹೋತ್ಸವಕ್ಕಾಗಿ ಎತ್ತರದ ಹಾಗೂ ಗುಣಮಟ್ಟದ 6 ಕೋಟಿ ಸಸಿಗಳನ್ನು ಬೆಳೆಸುವುದು, ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯ ಅಡಿಯಲ್ಲಿ ಪ್ರೋತ್ಸಾಹ ಧನವನ್ನು ಪ್ರತಿ ಸಸಿಗೆ 45 ರೂಗಳಿಂದ 100 ರೂಗಳಿಗೆ ಹೆಚ್ಚಳ ಪರಿಸರ ಅಂಶಗಳ ಮೇಲೆ ಸಂಶೋಧನೆ ನಡೆಸಲು “ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಸ್ಥಾಪಿಸಲು 5 ಕೋಟಿ ರೂಗಳ ಅನುದಾನ, ನರ್ಸರಿಗಳನ್ನು ವೈಜ್ಞಾನಿಕವಾಗಿ ಅಭಿವೃದ್ದಿಪಡಿಸಲು “ನರ್ಸರಿ ಅಭಿವೃದ್ದಿ ಏಜೆನ್ಸಿ” ರಚನೆ, ವನ್ಯಮೃಗಳ ವಲಸೆ ತಡೆಗಟ್ಟಲು ದಟ್ಟ ಅರಣ್ಯಗಳಲ್ಲಿ 10 ಕೋಟಿ ರೂಗಳ ವೆಚ್ಚದಲ್ಲಿ ಸ್ವಯಂಚಾಲಿತ ಸೋಲಾರ್ ವಿದ್ಯುತ್ ಪಂಪುಗಳ ಸಹಾಯದೊಂದಿಗೆ 100 ಜಲಕಾಯಗಳನ್ನು ತುಂಬುವ ಯೋಜನೆ, ಕರಾವಳಿ ಜಿಲ್ಲೆಗಳಲ್ಲಿ ಪಶ್ಚಿಮಾಭಿಮುಖವಾಗಿ  ಹರಿಯುತ್ತಿರುವ ನದಿಗಳ   “ಪಶ್ಚಿಮ ವಾಹಿನಿ”  ಯೋಜನೆಯಡಿ ಕಿಂಡಿ ಅಣೆಕಟ್ಟುಗಳನ್ನು   ನಿರ್ಮಿಸಲು 100 ಕೋಟಿ , ಗೇರು ಅಭಿವೃದ್ದಿ ಮಂಡಳಿ ರಚನೆಗೆ 10 ಕೋಟಿ  , ಮಂಗಳೂರು ವಿಶ್ವವಿದ್ಯಾಲಯದಲ್ಲಿ ಬ್ಯಾರಿ ಅಧ್ಯಯನ ಪೀಠ ಸ್ಥಾಪನೆ, ಮಂಗಳೂರು ವೆನ್‍ಲಾಕ್ ಆಸ್ಪತ್ರೆ ಮೇಲ್ದರ್ಜೆಗೆ 10 ಕೋಟಿ , ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ ಮಾದರಿಯಲ್ಲಿ ವೆನ್‍ಲಾಕ್ ಆಸ್ಪತ್ರೆಯನ್ನು ಅಭಿವೃದ್ದಿಪಡಿಸಲು 3 ಕೋಟಿ , ಮಂಗಳೂರಿನಲ್ಲಿ ಹಜ್ ಭವನ ಸ್ಥಾಪನೆ 10 ಕೋಟಿ,  ದ.ಕ. ಮತ್ತು ಉಡುಪಿ ಜಿಲ್ಲೆಗಳಿಗೆ ಮೂಡಬಿದಿರೆ, ಕಡಬ ಬ್ರಹ್ಮಾವರ ಬೈಂದೂರು ಮತ್ತು ಕಾಪು 5  ಹೊಸ ತಾಲ್ಲೂಕುಗಳ ಕೊಡುಗೆ,
• ಮಂಗಳೂರು ಅಂತರರಾಷ್ಟೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ 2.50 ಕಿ.ಮೀ. ಉದ್ದದ ರಸ್ತೆಯ ಅಭಿವೃದ್ದಿಗೆ 50 ಕೋಟಿ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ವಿಸ್ತರಣೆಗೆ 286 ಎಕರೆ ಭೂಸ್ವಾಧೀನದೊಂದಿಗೆ ಎಲ್ಲಾ ಅಗತ್ಯ ಮೂಲಭೂತ ಸೌಲಭ್ಯ ಒದಗಿಸಲು ರಾಜ್ಯ ಸರ್ಕಾರದಿಂದ ತೀರ್ಮಾನ  , ಪ್ರವಾಸೋದ್ಯಮ ಪ್ರೋತ್ಸಾಹಕ್ಕಾಗಿ ಸನಿಹಿತ್ಲು ಬೀಚ್‍ನಲ್ಲಿ ‘ರಾಷ್ಟ್ರೀಯ ಸರ್ಫಿಂಗ್ ಉತ್ಸವ’ ಈ ವರ್ಷದಿಂದ ನಡೆಸಲಾಗುವುದು, ಬಂಟ್ವಾಳದಲ್ಲಿ ನೂತನ ಪ್ರಾದೇಶಿಕ ಸಾರಿಗೆ ಕಛೇರಿ ಸ್ಥಾಪನೆ, ಮಂಗಳೂರಿನ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ 35.69 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ತಾರಾಲಯವನ್ನು ಡಿಸೆಂಬರ್ 2017 ರೊಳಗೆ ಪ್ರಾರಂಭಿಸಲಾಗುವುದು, ಮಂಗಳೂರು ಜಿಲ್ಲಾ ನ್ಯಾಯಾಲಯದ ಸಂಕೀರ್ಣಕ್ಕೆ ಗ್ರಿಡ್ ಸಂಪರ್ಕವಿರುವ ಸೌರ ಛಾವಣೆಯನ್ನು ಅಳವಡಿಸುವುದು, ಕರಾವಳಿ ಅಭಿವೃದ್ದಿ ಪ್ರಾಧಿಕಾರಕ್ಕೆ 20 ಕೋಟಿ ಅನುದಾನ, ಕೃಷಿ ಭಾಗ್ಯ ಯೋಜನೆ ಕರಾವಳಿ ಮತ್ತು ಮಲೆನಾಡಿಗೆ ವಿಸ್ತರಣೆ
ಈ ಎಲ್ಲಾ ಯೋಜನೆಗಳನ್ನು ನೀಡಿದ ಮುಖ್ಯಮಂತ್ರಿಯವರನ್ನು ದ.ಕ. ಜಿಲ್ಲೆಯ ಜನತೆಯ ಪರವಾಗಿ ಅಭಿನಂದಿಸುವುದಾಗಿ ಸಚಿವ ರಮಾನಾಥ ರೈ ಅವರು ತಿಳಿಸಿದ್ದಾರೆ.

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಜನೆತೆಗೆ ಅಭೂತಪೂರ್ವ ಕೊಡುಗೆ: ಸಚಿವ ರೈ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*