ಗಡಿ ಭಾಗದಲ್ಲಿ ಸರಕಾರಿ ಬಸ್ ಸೇವೆ ಬೇಕು, ಗ್ರಾಪಂಗೆ ಕನಿಷ್ಠ 1 ಸಾವಿರವಾದರೂ ಆರ್ ಟಿಸಿ ಪೇಪರ್ ಒದಗಿಸಬೇಕು. ಹೀಗೆ ಹಲವು ಆಗ್ರಹಗಳು ವಿಟ್ಲ ಸಮೀಪ ಅಳಿಕೆಯಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಕೇಳಿಬಂದವು.
ಪುತ್ತೂರು – ಅಡ್ಕಸ್ಥಳ ಗಡಿ ಬಸ್ ರಾತ್ರಿ 8.30 ಕ್ಕೆ ಹೊರಡುವ ಮೂಲಕ ದೂರದಿಂದ ಆಗಮಿಸುವ ಪ್ರಯಾಣಿಕರಿಗೆ ಬಹಳಷ್ಟು ಪ್ರಯೋಜನವಾಗುತ್ತಿತ್ತು. ಆದರೆ ಯಾವುದೇ ಸೂಚನೆ ಇಲ್ಲದೇ ಬಸ್ ಸ್ಥಗಿತವಾಗಿ ಪ್ರಯಾಣಿಕರು ಸಂಕಷ್ಟ ಪಡುವಂತಾಗಿದೆ. ಅಳಿಕೆ ಭಾಗಕ್ಕೆ ರಾತ್ರಿ ಆಗಮಿಸುತ್ತಿದ್ದ ಬಸ್ ಕೂಡ ಸ್ಥಗಿತ ಮಾಡಲಾಗಿದೆ. ತಕ್ಷಣ ಈ ಬಸ್ ಸೇವೆ ಆರಂಭಿಸಬೇಕು ಎಂದು ಆಗ್ರಹಿಸಿದರು.
ವಿಟ್ಲ ಪೇಟೆಯ ವಿದ್ಯುತ್ ಕಂಬ ಸ್ಥಳಾಂತರದ ಬಗ್ಗೆ ಎರಡು ವರ್ಷಗಳಿಂದ ಬೇಡಿಕೆ ಇಡಲಾಗುತ್ತಿದ್ದರೂ ಸ್ವಲ್ಪವೂ ಕಾರ್ಯ ರೂಪಕ್ಕೆ ಬರಲಿಲ್ಲ. ಇದರಿಂದ ನಿತ್ಯ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಇಲಾಖೆ ಈ ಬಗ್ಗೆ ಎಚ್ಚೆತ್ತುಕೊಳ್ಳದಿಂದ್ದರೆ ಸಮಸ್ಯೆ ಮುಂದುವರಿಯುತ್ತದೆ ಎಂದು ನಾಗರೀಕರು ಹೇಳಿದರು.
ಪುತ್ತೂರು ಶಾಸಕಿ ಶಕುಂತಳಾ ಟಿ. ಶೆಟ್ಟಿ ಮಾತನಾಡಿ ಯೋಜನೆಗಳನ್ನು ಜನರಿಗೆ ಅಕಾರಿಗಳು ಪ್ರಾಮಾಣಿಕವಾಗಿ ಒದಗಿಸುವ ಕಾರ್ಯವಾಗಬೇಕು. ವಿಟ್ಲದಲ್ಲಿ ಸರಕಾರಿ ಬಸ್‌ಗಳನ್ನು ನಿಲ್ಲಿಸಲು ಬಿಡದಿರುವ ಬಗ್ಗೆ ಸಾರ್ವಜನಿಕ ದೂರುಗಳು ಬಂದಿವೆ. ಖಾಸಗೀ ಬಸ್‌ಗಳು ಎಲ್ಲೆಂದರಲ್ಲಿ ನಿಲ್ಲುವುದು ಸರಿಯಲ್ಲ. ಪೊಲೀಸ್ ಹಾಗೂ ಸಾರಿಗೆ ಇಲಾಖೆ ಅಕಾರಿಗಳು ಸರಿಯಾಗಿ ಕಾನೂನು ಜಾರಿಗೆ ತರಬೇಕೆಂದು ತಿಳಿಸಿದರು.
ಸರಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಹಕ್ಕು ಪತ್ರ ಹಾಗೂ ಚೆಕ್ ವಿತರಣೆ ಮಾಡಲಾಯಿತು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಜಯಶ್ರೀ ಕೋಡಂದೂರು, ತಾಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೆರಾ, ಉಪಾಧ್ಯಕ್ಷ ಅಬ್ಬಾಸ್ ಆಲಿ, ಸದಸ್ಯ ಪದ್ಮನಾಭ ನಾಯ್ಕ ಅಳಿಕೆ, ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್ ಅಧ್ಯಕ್ಷ ಯು. ಗಂಗಾಧರ ಭಟ್, ಸಾಲೆತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು, ಕೇಪು ಗ್ರಾಮ ಪಂಚಾಯಿತಿ ಅಧ್ಯಕ್ಷ ತಾರಾನಾಥ ಆಳ್ವ, ಮಾಣಿಲ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ್ ಕುಮಾರ್ ಬಾಳೆಕಲ್ಲು, ವಿಟ್ಲಮುಡ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಲತಾ ಉಪಸ್ಥಿತರಿದ್ದರು.
ಬಂಟ್ವಾಳ ತಹಸೀಲ್ದಾರ ಪುರಂದರ ಹೆಗ್ಡೆ ಸ್ವಾಗತಿಸಿ, ಪ್ರಸ್ತಾವನೆಗೈದರು. ಅಳಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು ವಂದಿಸಿದರು. ಅಳಿಕೆ ಸತ್ಯ ಸಾಯಿ ಲೋಕ ಸೇವಾ ವಿದ್ಯಾ ಸಂಸ್ಥೆಯ ಉಪನ್ಯಾಸಕ ಯಾದವ ಎನ್. ಅಳಿಕೆ ಕಾರ್ಯಕ್ರಮ ನಿರೂಪಿಸಿದರು.
Be the first to comment on "ಗಡಿ ಭಾಗದಲ್ಲಿ ಬೇಕು ಸರಕಾರಿ ಬಸ್ ಸೇವೆ"