ಕಳೆದ ವರ್ಷ ಜುಲೈಯಲ್ಲಿ ಸೇವೆಯಲ್ಲಿದ್ದಾಗ ಮೃತಪಟಟ್ ವಾಯುಸೇನೆಯ ಯೋಧ, ಬೆಳ್ತಂಗಡಿ ತಾಲೂಕಿನ ಏಕನಾಥ ಅವರ ಕುಟುಂಬಕ್ಕೆ ಆರ್ಥಿಕ ನೆರವನ್ನು ಮಂಜೂರು ಮಾಡುವಂತೆ ಅರಣ್ಯ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
ಚೆನ್ನೈ ತಾಂಬರಂ ವಾಯುನೆಲೆಯಿಂದ ಅಂಡಮಾನ್‍ಗೆ ವಾಯಸೇನೆಯ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ವಿಮಾನವು ಕಳೆದ ವರ್ಷ ಜುಲೈ 22ರಂದು ನಿಗೂಡವಾಗಿ ಕಾಣೆಯಾಗಿ, ಬಳಿಕ ಯೋಧರು ಬದುಕುಳಿಯುವ ಸಾಧ್ಯತೆ ಇಲ್ಲದ್ದರಿಂದ ವಾಯುಸೇನೆಯು ಏಕನಾಥ್ ಹಾಗೂ ಇತರ ಯೋಧರ ಮರಣ ಪ್ರಮಾಣಪತ್ರ ನೀಡಿದೆ. ಯೋಧನ ಕುಟುಂಬವು ಆರ್ಥಿಕವಾಗಿ ಹಿಂದುಳಿದಿದ್ದು, ಮಕ್ಕಳ ಶೈಕ್ಷಣಿಕ ಹಾಗೂ ಕುಟುಂಬ ನಿರ್ವಹಣೆಯ ನೆಲೆಯಲ್ಲಿ ಏಕನಾಥ ಅವರ ಪತ್ನಿ ಜಯಂತಿ ಅವರಿಗೆ ನೆರವು ನೀಡುವಂತೆ ಉಸ್ತುವಾರಿ ಸಚಿವರು ಏಕನಾಥ ಅವರ ಕುಟುಂಬದ ಸದಸ್ಯರೊಂದಿಗೆ ಮಂಗಳವಾರ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಮನವಿ ಮಾಡಿದರು.
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಮೃತ ಯೋಧ ಕುಟುಂಬಕ್ಕೆಆರ್ಥಿಕ ನೆರವು: ಮುಖ್ಯಮಂತ್ರಿಗೆ ಉಸ್ತುವಾರಿ ಸಚಿವರ ಮನವಿ"