ನೇರಳಕಟ್ಟೆ ಮಿಲಾದ್ ಕಮಿಟಿಯ 24 ನೇ ವಾರ್ಷಿಕೋತ್ಸವ

ಸಮಾಜದ ಶಾಂತಿ-ಸೌಹಾರ್ದಕ್ಕೆ ಪೂರಕವಾದ ಧಾರ್ಮಿಕ ಸಂದೇಶಗಳು ಹಬ್ಬ-ಹರಿದಿನಗಳ ಸಂದರ್ಭ ಕೇವಲ ಬ್ಯಾನರ್, ಫ್ಲೆಕ್ಸ್‌ಗಳಿಗೆ ಸೀಮಿತವಾಗದೆ ಅದು ನಮ್ಮ ನಿಜ ಜೀವನದಲ್ಲಿ ಅಳಕೆಯಾಗಬೇಕು ಎಂದು ಸಜಿಪನಡು ಕೇಂದ್ರ ಜುಮಾ ಮಸೀದಿ ಖತೀಬ್ ಅಶ್ಫಾಕ್ ಫೈಝಿ ನಂದಾವರ ಹೇಳಿದರು.

ನೇರಳಕಟ್ಟೆ ಮಿಲಾದ್ ಕಮಿಟಿಯ 24 ನೇ ವಾರ್ಷಿಕೋತ್ಸವ ದ ಪ್ರಯುಕ್ತ ನೇರಳಕಟ್ಟೆ ಬದ್ರಿಯಾ ಮಸೀದಿ ವಠಾರದಲ್ಲಿ ನಡೆದ ಧಾರ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಮುಖ್ಯಭಾಷಣಗೈದ ಅವರು ಯುವ ಸಮುದಾಯ ಸುಸಂಸ್ಕೃತ ಜೀವನ ನಡೆಸುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕಾಗಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಸಯ್ಯಿದ್ ಇಬ್ರಾಹಿಂ ಅಲ್-ಹಾದಿ ತಂಙಳ್ ಪಾಟ್ರಕೋಡಿ ದುವಾಶಿರ್ವಚನಗೈದರು. ಕೊಡಾಜೆ ಬದ್ರಿಯಾ ಜುಮಾ ಖತೀಬ್ ಹಾಜಿ ಪಿ.ಕೆ. ಆದಂ ದಾರಿಮಿ ಅಧ್ಯಕ್ಷತೆ ವಹಿಸಿದ್ದರು. ಕೊಡಾಜೆ ಬದ್ರಿಯಾ ಜುಮಾ ಮಸೀದಿ ಇಮಾಂ ಮುಹಮ್ಮದ್ ಅಲಿ ಫೈಝಿ ಇರ್ಫಾನಿ, ಕೊಡಾಜೆ ತರ್ಬಿಯತುಲ್ ಇಸ್ಲಾಂ ಮದ್ರಸ ಮುಖ್ಯ ಶಿಕ್ಷಕ ಆದಂ ಫೈಝಿ ಇರ್ಫಾನಿ, ಸಹ ಶಿಕ್ಷಕ ಅಶ್ರಫ್ ಅಝ್‌ಹರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಮಿಲಾದ್ ಕಮಿಟಿ ಅಧ್ಯಕ್ಷ ನವಾಝ್ ಭಗವಂತಕೋಡಿ, ಕಾರ್ಯದರ್ಶಿ ಇಲ್ಯಾಸ್ ನೇರಳಕಟ್ಟೆ, ಪದಾಧಿಕಾರಿಗಳಾದ ಅಥಾವುಲ್ಲಾ ನೇರಳಕಟ್ಟೆ, ಉಮ್ಮರ್ ಫಾರೂಕ್ ಇಂಜಿನಿಯರ್, ಶಾಹುಲ್ ಹಮೀದ್, ಹಂಝ ಎನ್.ಕೆ., ಮ್ಯಾರೇಜ್ ಫಂಡ್ ಸಲಹಾ ಸಮಿತಿ ಸದಸ್ಯ ಅಬ್ಬಾಸ್ ನೇರಳಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.

ಇದೇ ವೇಳೆ ಕೊಡಾಜೆ ತರ್ಬಿಯತುಲ್ ಇಸ್ಲಾಂ ಮದ್ರಸದ ಇಶ್ಕೇ ರಸೂಲ್ ಬುರ್‌ದಾ ಸಂಘದಿಂದ ಬುರ್‌ದಾ ಮಜ್ಲಿಸ್ ಕಾರ್ಯಕ್ರಮ ನಡೆಯಿತು.