ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಹತ್ತನೇ ವರ್ಷಾಚರಣೆ ಪ್ರಯುಕ್ತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪರಂಗಿಪೇಟೆ ವಲಯ ಮತ್ತು ಮಂಗಳೂರು ಕೆ.ಎಮ್ ಸಿ ಆಸ್ಪತ್ರೆ ಸಹಬಾಗಿತ್ವದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಮಾರಿಪ್ಲಳ್ಳ ಪುದುವಿನಲ್ಲಿ ರಕ್ತ ದಾನ ಶಿಬಿರ ನಡೆಯಿತು.
ಶಿಬಿರದ ಅದ್ಯಕ್ಷತೆಯನ್ನು ಪಾಪ್ಯುಲರ ಫ್ರಂಟ್ ಆಫ್ ಇಂಡಿಯಾದ ಪರಂಗಿಪೇಟೆ ವಲಯ ಅದ್ಯಕ್ಷರಾದ ನಝೀರ್ ಹತ್ತನೇಮೈಲ್ ಕಲ್ಲು ವಹಿಸಿದ್ದರು
ಸಂದೇಶ ಮತನಾಡಿದ ಪಾಪ್ಯುಲರ್ ಫ್ರಂಟ ಆಫ್ ಇಂಡಿಯಾದ ಬಿಸಿರೋಡ್ ವಲಯಾದ್ಯಕ್ಷ ಇಮ್ತಿಯಾಝ್ ತುಂಬೆ ಆದುನಿಕ ಕಾಲ ಘಟ್ಟದಲ್ಲಿ ತಂತ್ರಜ್ಞಾನದಿಂದ ಹೆಚ್ಚಿನವುಗಳನ್ನು ಪಡೆಯಬಹುದು ಆದರೆ ಮನುಷ್ಯನಿಗೆ ಸಂಭಂದಿಸಿ ದೇಹದ ಅಂಗಾಂಗ ಸೇರಿದಂತೆ ರಕ್ತ ಅವಶ್ಯಕತೆ ಉಂಟಾದಲ್ಲಿ ಮನುಷ್ಯನಿಂದಲೇ ಪಡೆಯುವಂತೆ ದೇವನು ಮಾಡಿರೂದು ಮನುಷ್ಯ ಸಂಭಂದಗಳನ್ನು ಬೆಸೆಯುವ ಉದ್ದೇಶದಿಂದಾಗಿದೆ ಇದು ದೇವನು ನಮಗೆ ನೀಡಿದ ಅನುಗ್ರಹವಾಗಿದೆ ಎಂದು ಹೇಳಿದರು.
ಮಂಗಳೂರು ಕೆ.ಎಮ್ ಸಿ ಆಸ್ಪತ್ರೆ ಇದರ ರಕ್ತ ಸಂಗ್ರಹ ವಿಬಾಗದ ಅದಿಕಾರಿ ಡಾ ಪ್ರಜ್ವಲ್ ಎಮ್.ಬಿ.ಬಿ.ಎಸ್ ಶಿಬಿರದಲ್ಲಿ ರಕ್ತ ದಾನದ ಉಪಯುಕ್ತ ಮಾಹಿತಿ ನೀಡಿದರು, ಮುಖ್ಯ ಅತಿಥಿಗಳಾಗಿ ತುಂಬೆ ಮಸೀದಿ ಅದ್ಯಕ್ಷ ಅಬೂಬಕ್ಕರ್ ಹಾಜಿ, ಮಾರಿಪ್ಪಳ್ಳ ಮಸೀದಿ ಉಪಾದ್ಯಕ್ಷ ಕೆ ಬಾವ, ರಿಸ್ಕ್ಯೂ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಅದ್ಯಕ್ಷರಾದ ಜಬ್ಬಾರ್ ಮಾರಿಪ್ಪಳ್ಳ, ಪುದು ಪಂಚಾಯತ್ ಸದಸ್ಯ ಸುಲೈಮಾನ್, ತುಂಬೆ ಪಂಚಾಯತ್ ಸದಸ್ಯ ಝಹೂರ್ ಅಹ್ಮದ್, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ತುಂಬೆ ವಲಯ ಅದ್ಯಕ್ಷ ಇರ್ಫಾನ್ ತುಂಬೆ ಉಪಸ್ಥಿತರಿದ್ದರು. ಇಮ್ತಿಯಾಝ್ ಸ್ವಾಗತಿಸಿದರು ಕಾದರ್ ಅಮ್ಮೆಮಾರ್ ನಿರೂಪಿಸಿ ದನ್ಯಾವಾದಗೈದರು. ಶಿಬಿರದಲ್ಲಿ ಸುಮಾರು 85 ಯುನಿಟ್ ರಕ್ತ ಸಂಗ್ರಹ ಮಾಡಲಾಯಿತು.
Be the first to comment on "ಪಿ.ಎಫ್.ಐ ಫರಂಗಿಪೇಟೆ ವಲಯ ವತಿಯಿಂದ ರಕ್ತ ದಾನ ಶಿಬಿರ"