ಬಂಟ್ವಾಳ ತಾ| ಸರಪಾಡಿ ಶ್ರೀ ಶರ‘ಶ್ವರ ದೇವಸ್ಥಾನದ ವರ್ಷಾವಽ ಜಾತ್ರೆ ಮತ್ತು ಉತ್ಸವಾದಿಗಳು ಮಾ. 9ರಿಂದ 13ರ ವರೆಗೆ ವರ್ಕಾಡಿ ದಿನೇಶ ಕೃಷ್ಣ ತಂತ್ರಿ ಅವರ ಮಾರ್ಗದರ್ಶನದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಮಾ. 8ರಂದು ಮಧ್ಯಾಹ್ನ ಧ್ವಜಾರೋಹಣ, ರಾತ್ರಿ ಬಲಿ ಉತ್ಸವ, ಬಳಿಕ ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ.ಮೋಹನ ಆಳ್ವ ಅ‘ಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ಸ‘ಯನ್ನು ಡಾ| ಎಚ್.ಶಂಕರನಾರಾಯಣ ರಾವ್ ಉದ್ಘಾಟಿಸಲಿದ್ದು, ವೇ|ಮೂ| ಪಂಜ ಭಾಸ್ಕರ ಭಟ್ ಧಾರ್ಮಿಕ ಪ್ರವಚನ ನೀಡಲಿದ್ದಾರೆ.
ಅತಿಥಿಗಳಾಗಿ ಸಚಿವ ಬಿ.ರಮಾನಾಥ ರೈ, ಸಂಸದ ನಳಿನ್‌ಕುಮಾರ್ ಕಟೀಲು, ಕ್ಷೇತ್ರದ ಆಡಳಿತ ಮೊಕ್ತೇಸರ ಎನ್.ಸುಬ್ಬಣ್ಣ ಶೆಟ್ಟಿ, ಪ್ರಗತಿಪರ ಕೃಷಿಕ ರಾಜೇಶ್ ನಾಕ್ ಉಳಿಪ್ಪಾಡಿ, ಜಿ.ಪಂ.ಸದಸ್ಯ ಪದ್ಮಶೇಖರ್ ಜೈನ್, ಧಾರ್ಮಿಕ ಚಿಂತಕ ಯೋಗೀಶ್ ಭಟ್, ಉದ್ಯಮಿ ರೋಹಿನಾಥ್ ಪಾದೆ, ದೈವಜ್ಞ ನಾರಾಯಣ ಶಾಂತಿ, ವೈದ್ಯ ಡಾ| ಶಿವಪ್ರಸಾದ್ ಶೆಟ್ಟಿ ಭಾಗವಹಿಸಲಿದ್ದಾರೆ. ಬಳಿಕ ನಿಕ್ಕ್ ಗೊತ್ತುಂಡಾ ತುಳುನಾಟಕ ಪ್ರದರ್ಶನಗೊಳ್ಳಲಿದೆ.
ಮಾ.10 ರಂದು ಮಧ್ಯಾಹ್ನ ಕಲಶಾಭಿಷೇಕ, ನಿತ್ಯ ಬಲಿ, ರಾತ್ರಿ ಸುದರ್ಶನ ವಿಜಯ ಯಕ್ಷಗಾನ ಬಯಲಾಟ, ದೈವಂಗಳ ನೇಮ, ದೇವರ ಬಲಿ, ಪಲ್ಲಕ್ಕಿ ಉತ್ಸವ ನಡೆಯಲಿದೆ.
ಮಾ. 11ರಂದು ಮಧ್ಯಾಹ್ನ ನಿತ್ಯ ಬಲಿ, ರಾತ್ರಿ ಪಂಜುರ್ಲಿ ನೇಮ, ದರ್ಶನ ಬಲಿ, ವಸಂತ ಕಟ್ಟೆಪೂಜೆ, ಚಂದ್ರಮಂಡಲೋತ್ಸವ, ಅಶ್ವತ್ಥ ಕಟ್ಟೆಪೂಜೆ ನಡೆಯಲಿದೆ. ಮಾ. 12ರಂದು ಬೆಳಗ್ಗೆ ಉತ್ಸವ, ಮಧ್ಯಾಹ್ನ ವಿಶೇಷ ಚೆಂಡೆ ವಾದನ, ಮನ್ಮಹಾರಥಾರೋಹಣ, ರಾತ್ರಿ ಗಾನ ನೃತ್ಯ ವೈವಿಧ್ಯ ಶಾಂತಿಗುಡ್ಡೆಯಲ್ಲಿ ಶ್ರೀ ರಕ್ತೇಶ್ವರಿ ನೇಮ, ವಲಸರಿ ಇಳಿಯುವುದು, ಮಹಾರಥೋತ್ಸವ ನಡೆಯಲಿದೆ.
ಮಾ. 13ರಂದು ಬೆಳಗ್ಗೆ ದೇವರ ದಿವ್ಯದರ್ಶನ, ತುಲಾಭಾರ ಸೇವೆ, ಮಧ್ಯಾಹ್ನ ಪಲ್ಲಪೂಜೆ, ಸಂಜೆ ಕೋಡಿ ಕಲ್ಲುರ್ಟಿ ಭಂಡಾರ ಬರುವುದು, ಕಲ್ಲುರ್ಟಿ ದೈವದ ನೇಮ, ಓಕುಳಿ, ದೇವರ ಬಲಿ ಉತ್ಸವ, ಅವ‘ತ ಸ್ನಾನ, ‘ಜಾವರೋಹಣ ನಡೆಯಲಿದೆ. ಪ್ರತಿ ದಿನ ಮ‘ಹ್ನ ಅನ್ನಸಂತರ್ಪಣೆ ನಡೆಯಲಿದೆ ಎಂದು ಕ್ಷೇತ್ರದ ಪ್ರಕಟನೆ ತಿಳಿಸಿದೆ.
Be the first to comment on "ಮಾ. 9-13: ಸರಪಾಡಿ ದೇವಳದ ವಾರ್ಷಿಕ ಜಾತ್ರೆ"