ಗ್ರಾಮಸ್ಥರ ವಿಶ್ವಾಸಕ್ಕೆ ತೆಗೆದುಕೊಂಡರಷ್ಟೇ ಘನತ್ಯಾಜ್ಯ ಸಂಸ್ಕರಣೆ

ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಸ್ಥಳಾಂತರ ಪ್ರಕ್ರಿಯೆಗಳನ್ನು ಸೂಕ್ತವಾಗಿ ನಡೆಸಿ, ವೈಜ್ಞಾನಿಕ ರೀತಿಯಲ್ಲಿ ಘನತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಿಸಿದರೆ ನಮ್ಮದೇನೂ ಆಕ್ಷೇಪವಿಲ್ಲ.

www.bantwalnews.com report

ಜಾಹೀರಾತು

ಹೀಗೆಂದು ಸಜೀಪನಡು ಗ್ರಾಮಸ್ಥರು ಗುರುವಾರ ಪಂಚಾಯಿತಿ ಕಚೇರಿಯಲ್ಲಿ ಸಹಾಯಕ ಕಮೀಷನರ್ ರೇಣುಕಾ ಪ್ರಸಾದ್ ಅವರಲ್ಲಿ ಪುರಸಭೆಯ ಘನತ್ಯಾಜ್ಯ ಘಟಕ ಕುರಿತಂತೆ ತಮ್ಮ ನಿಲುವನ್ನು ಸ್ಪಷ್ಟವಾಗಿ ತಿಳಿಸಿದರು.

ಸಹಾಯಕ ಕಮೀಷನರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಗ್ರಾಪಂ ಅಧ್ಯಕ್ಷ ಮುಹಮ್ಮದ್ ನಾಸೀರ್, ಘನತ್ಯಾಜ್ಯ ನಿರ್ಮಿಸುವ ಯೋಜನೆಯನ್ನು ಆರಂಭದಿಂದಲೇ ಗ್ರಾಮ ಪಂಚಾಯಿತಿಯನ್ನು ಕತ್ತಲಲ್ಲಿಟ್ಟು ಮಾಡಲಾಗಿತ್ತು. ಯಾವುದೇ ಮಾಹಿತಿಯನ್ನು ಗ್ರಾಪಂಗೆ ನೀಡಲಾಗಿಲ್ಲ. ನಮ್ಮನ್ನು ದ್ವಂದ್ವದಲ್ಲಿಡುವುದು ಯಾಕೆ, ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ನಡೆಸಿ, ಎಲ್ಲ ಯೋಜನೆಗಳಿಗೆ ನಾವು ಜಾಗವನ್ನು ಕೊಟ್ಟರೆ, ನಮಗೆ ಜಾಗ ಎಲ್ಲಿದೆ, ಹೀಗಾಗಿ ಯೋಜನೆಯನ್ನು ಅಂತಿಮಗೊಳಿಸುವ ಸಂದರ್ಭ ನಮ್ಮ ಬೇಡಿಕೆಗಳನ್ನು ಈಡೇರಿಸಿ ಎಂದು ಬೇಡಿಕೆಗಳ ಪಟ್ಟಿ ಮುಂದಿರಿಸಿದರು.

ಜಾಹೀರಾತು

ಕಂಚಿನಡ್ಕಪದವಿನಲ್ಲಿ ಪುರಸಭೆ ನಿರ್ಮಿಸುತ್ತಿರುವ ತ್ಯಾಜ್ಯ ಸಂಸ್ಕರಣ ಘಟಕದ ವಿವಾದದ ಹಿನ್ನೆಲೆಯಲ್ಲಿ ಬಂಟ್ವಾಳ ಪುರಸಭೆ ಮತ್ತು ಸಜಿಪನಡು ಗ್ರಾಮ ಪಂಚಾಯತ್‌ನ ಜಂಟಿ ಸಭೆಯನ್ನು ಆಯೋಜಿಸಲಾಗಿತ್ತು.

ಸುದೀರ್ಘ ೧೨ ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಈ ವಿವಾದವನ್ನು ಪರಿಹರಿಸುವ ನಿಟ್ಟಿನಲ್ಲಿ ಬಂಟ್ವಾಳ ಪುರಸಭೆ ಹಾಗೂ ಸಜಿಪನಡು ಪಂಚಾಯತ್ ಜಂಟಿ ಸಭೆಯನ್ನು ನಡೆಸಿದೆ.

ಜಾಹೀರಾತು

ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು, ಮುಖ್ಯಾಕಾರಿ ಸುಧಾಕರ್, ಆರೋಗ್ಯಾಕಾರಿ ರತ್ನಪ್ರಸಾದ್, ಎಂಜಿನಿಯರ್ ಡೊಮೆನಿಕ್ ಡಿಮೆಲ್ಲೋ ಹಾಗೂ ಗ್ರಾಪಂನ ಉಪಾಧ್ಯಕ್ಷೆ ಸುನಿತ ಶಾಂತಿ ಮೋರಸ್, ಸದಸ್ಯರಾದ ಇಕ್ಬಾಲ್, ಅಬ್ದುಲ್ ರಹಿಮಾನ್, ರಶೀದ್, ಸುರೇಶ್ ಬಂಗೇರ ಹಾಗೂ ಮಾಜಿ ಜಿಪಂ ಸದಸ್ಯ ಎಸ್.ಅಬ್ಬಾಸ್, ಮಾಜಿ ತಾಪಂ ಅಧ್ಯಕ್ಷ ಯಶವಂತ ದೇರಾಜೆ ಸಭೆಯಲ್ಲಿ ಭಾಗವಹಿಸಿದರು.

ಆರಂಭದಲ್ಲಿ ಮುಖ್ಯಾಕಾರಿ ಸುಧಾಕರ್ ಘಟಕದ ಕುರಿತು ಮಾಹಿತಿ ನೀಡಿ, ೨೦೦೫ ರಲ್ಲಿ ಘಟಕದ ಕಾಮಗಾರಿಯನ್ನು ಆರಂಭಿಸಲಾಗಿದೆ. ಇಲ್ಲಿನ ೮ ಎಕರೆ ಜಮೀನು ಪುರಸಭೆಗೆ ಹಸ್ತಾಂತರವಾಗಿದೆ. ಸಂಪೂರ್ಣ ವೈಜ್ಞಾನಿಕ ರೀತಿಯಲ್ಲೇ ಈ ಘಟಕ ನಿರ್ಮಿಸುವ ಉದ್ದೇಶ ಹೊಂದಲಾಗಿದೆ. ಘಟಕದಲ್ಲಿ ತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸಿ ಅದನ್ನು ಕೃಷಿಗೆ ಸದುಪಯೋಗ ಪಡಿಸಲಾಗುವುದು. ಘಟಕದ ಬಗ್ಗೆ ಅನುಮಾನಗಳಿದ್ದಲ್ಲಿ ನುರಿತ ವಿಜ್ಞಾನಿ ಡಾ. ಹರೀಶ್ ಜೋಷಿ ಅವರಿಂದ ಪ್ರಾತ್ಯಕ್ಷಿಗೆ ಕೊಡಿಸಲಾಗುವುದು ಎಂದರು.

ಜಾಹೀರಾತು

ಈ ಸಂದರ್ಭ ಜಿಪಂ ಮಾಜಿ ಸದಸ್ಯ ಎಸ್.ಅಬ್ಬಾಸ್ ಪ್ರತಿಕ್ರಿಯಿಸಿ ಈ ಘಟಕದ ಬಗ್ಗೆ ವಿರೋಧ ವ್ಯಕ್ತಪಡಿಸಿ ಈಗಾಗಲೇ ಪಂಚಾಯತ್, ತಾಪಂ, ಜಿಪಂ ಸಭೆಯಲ್ಲಿ ನಿರ್ಣಯ ಕೈಗೊಂಡಿದೆ. ಗ್ರಾಮಸ್ಥರು ಕೂಡಾ ಗ್ರಾಮ ಸಭೆಯನ್ನು ಬಹಿಷ್ಕರಿಸಿದ್ದಾರೆ. ಈ ವಿಚಾರದಲ್ಲಿ ಜಿಲ್ಲಾಕಾರಿ, ಸಚಿವರು ಸೇರಿದಂತೆ ಪತ್ರವ್ಯವಹಾರವನ್ನು ದಾಖಲೆಗಳ ಮೂಲಕ ನಡೆಸಲಾಗಿದೆ. ಪಂಚಾಯತ್ ಅನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಪುರಸಭೆ ಘಟಕವನ್ನು ನಿರ್ಮಿಸಿದೆ. ಪಂಚಾಯತ್‌ನಿಂದ ಎನ್‌ಒಸಿಯನ್ನು ಕೂಡಾ ಪಡೆದಿಲ್ಲ ಎಂದು ವಾದಿಸಿದರು.

ಮಧ್ಯೆ ಪ್ರವೇಶಿಸಿದ ಅಧ್ಯಕ್ಷ ನಾಸೀರ್, ಘಟಕ ನಿರ್ಮಾಣವಾಗಿರುವ ಸ್ಥಳ ಈ ಹಿಂದೆ ಬಡವರಿಗೆ ನಿವೇಶನಕ್ಕಾಗಿ ಕಾಯ್ದಿರಿಸಲಾಗಿತ್ತು. ನಿವೇಶನಕ್ಕಾಗಿ ಗ್ರಾಮಸ್ಥರಿಂದ ಪಂಚಾಯತ್‌ಗೆ ನೂರಾರು ಅರ್ಜಿಗಳು ಬಂದಿದ್ದು ನಿವೇಶನ ನೀಡಲು ಗ್ರಾಮದಲ್ಲಿ ಸರಕಾರಿ ಜಮೀನು ಇಲ್ಲ. ಜೊತೆಗೆ ಇಷ್ಟನ್ನು ಸರಕಾರಿ ಜಮೀನನ್ನು ಕೂಡಾ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಬಳಸಲಾಗಿದೆ ಎಂದು ಗಮನ ಸೆಳೆದರು

ಸಂಸ್ಕರಣಾ ಘಟಕ ನಿರ್ಮಾಣಕ್ಕೆ ನಮ್ಮದೇನು ಅಭ್ಯಂತರವಿಲ್ಲ. ಪರಿಸರದಲ್ಲಿರುವ ಮನೆ, ಶಾಲೆ, ಅಂಗನವಾಡಿ, ಸಮುದಾಯ ಭವನ, ಮದರಸ ಇವುಗಳಿಗೆ ಪರ್ಯಾಯ ವ್ಯವಸ್ಥೆ ಮೊದಲು ಕಲ್ಪಿಸಬೇಕು ಮತ್ತು ಘಟಕದ ಮುಂದಿನ ನಿರ್ವಹಣೆಗೆ ಯಾರು ಜವಾಬ್ದಾರರು ಎಂದು ಒತ್ತಾಯಿಸಿದರು.

ಜಾಹೀರಾತು

ಸದಸ್ಯರಾದ ಇಕ್ಬಾಲ್ ಮತ್ತು ಅಬ್ದುಲ್ ರಹ್ಮಾನ್ ಅವರು ಮಾತನಾಡಿ, ಮಂಗಳೂರು ಮಹಾನಗರ ಪಾಲಿಕೆಯ ಪಚ್ಚನಾಡಿಯಲ್ಲಿ ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಣ ಘಟಕ ನಿರ್ಮಿಸಿದ ನಂತರ ಆಗುತ್ತಿರುವ ಸಮಸ್ಯೆಯೂ ಇಲ್ಲಿ ಕೂಡಾ ನಿರ್ಮಾಣವಾಗುವ ಆತಂಕವನ್ನು ವ್ಯಕ್ತಪಡಿಸಿದರಲ್ಲದೆ, ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಯೋಜನೆಗಳಿಗೆ ಸಜಿಪನಡು ಗ್ರಾಮದ ಸರಕಾರಿ ಭೂಮಿಯನ್ನು ಬಳಸಿಕೊಳ್ಳಲಾಗುತ್ತಿದೆ. ಆದರೆ ನಮ್ಮ ಗ್ರಾಮಸ್ಥರಿಗೆ ಇದರಿಂದ ನೀರೂ ಇಲ್ಲ, ಭೂಮಿಯೂ ಇಲ್ಲದಂತ ಪರಿಸ್ಥಿತಿ ಎದುರಾಗಿದೆ. ಆದ್ದರಿಂದ ಒಂದಾ ಘಟಕವನ್ನು ಸ್ಥಳಾಂತರಿಸಿ, ಇಲ್ಲದಿದ್ದರೆ ನಮ್ಮ ಬೇಡಿಕೆಯನ್ನು ಈಡೇರಿಸಿ ಮತ್ತೆ ಘಟಕ ಆರಂಭಿಸಿ. ಆದುವರೆಗೆ ಕಾಮಗಾರಿ ಆರಂಭಕ್ಕೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.

ಸಹಾಯಕ ಆಯುಕ್ತ ರೇಣುಕಾ ಪ್ರಸಾದ್ ಅವರು ಪ್ರತಿಕ್ರಿಯಿಸಿ, ನಿರ್ವಹಣೆಗೆ ಸಂಬಂಸಿದಂತೆ ಪುರಸಭೆಯನ್ನೇ ಹೊಣೆಯನ್ನಾಗಿಸಿ ಜಿಲ್ಲಾಕಾರಿ ಹಾಗೂ ಸರಕಾರಿ ಮಟ್ಟದಿಂದಲೇ ಆದೇಶವೊಂದನ್ನು ಹೊರಡಿಸಲು ಕ್ರಮ ಕೈಗೊಳ್ಳಬಹುದು ಎಂದು ಸಲಹೆ ನೀಡಿದರು. ತ್ಯಾಜ್ಯ ಸಂಸ್ಕರಣಾ ಘಟಕದ ಅನಿವಾರ್ಯತೆ ಇದ್ದು ಈ ದಿಸೆಯಲ್ಲಿ ಪರಸ್ಪರ ವಿಶ್ವಾಸವನ್ನು ಪಡೆದುಕೊಂಡು ಹಾಗೂ ಗ್ರಾಮಸ್ಥರ ಸಹಕಾರವನ್ನು ಯಾಚಿಸಿ ಮುಂದಡಿ ಇಡಬೇಕು ಎಂದು ಹೇಳಿದರು. ಪಂಚಾಯತ್ ಪಿಡಿಒ ವೀರಪ್ಪ ಗೌಡ ಸ್ವಾಗತಿಸಿದರು.

ಎಸಿಯಿಂದ ಸ್ಥಳ ಪರಿಶೀಲನೆ:  ಸಭೆಯ ಬಳಿಕ ಸಹಾಯಕ ಆಯುಕ್ತ ರೇಣುಕಾಪ್ರಸಾದ್ ಘಟಕ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುಖ್ಯಾಕಾರಿ ಸುಧಾಕರ್ ಅವರಿಂದ ಘಟಕದಲ್ಲಿ ಕಸ ವಿಲೇವಾರಿಯ ಕುರಿತಂತೆ ಮಾಹಿತಿ ಪಡೆದುಕೊಂಡರು.

ಜಾಹೀರಾತು

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾ ಪ್ರಸಾದ್, ಘಟಕದಿಂದಾಗಿ ಗ್ರಾಮಸ್ಥರಲ್ಲಿ ಉಂಟಾಗಿರುವ ಭೀತಿಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ನುರಿತ ವಿಜ್ಞಾನಿ ಡಾ. ಹರೀಶ್ ಜೋಷಿ ಅವರಿಂದ ಸ್ಥಳದಲ್ಲಿ ಪ್ರಾತ್ಯಕ್ಷಿಕೆ ನೀಡಲಾಗುವುದು. ಕಾರ್ಕಳ ಮತ್ತು ಮೂಡಬಿದರೆ ಪುರಸಭೆ ಈಗಾಗಲೇ ನಿರ್ಮಿಸಿರುವ ಘಟಕದ ಮಾದರಿಯಲ್ಲೇ ವೈಜ್ಞಾನಿಕವಾಗಿ ಸಂಸ್ಕರಣಾ ಘಟಕ ನಿರ್ಮಿಸುವ ನಿಟ್ಟಿನಲ್ಲಿ ಸ್ಥಳೀಯರ ಸಹಕಾರ ಕೋರಲಾಗುವುದು. ಗ್ರಾಮ ಪಂಚಾಯತ್ ಮುಂದಿಟ್ಟಿರುವ ಬೇಡಿಕೆ ಪರಿಹರಿಸಲು ಜಿಲ್ಲಾಕಾರಿ ಗಮನಕ್ಕೆ ತರಲಾಗುವುದು ಎಂದರು.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಗ್ರಾಮಸ್ಥರ ವಿಶ್ವಾಸಕ್ಕೆ ತೆಗೆದುಕೊಂಡರಷ್ಟೇ ಘನತ್ಯಾಜ್ಯ ಸಂಸ್ಕರಣೆ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*