ಕಳೆದ 23 ವರ್ಷಗಳಿಂದ ವಿವಿಧ ಸಾಮಾಜಿಕ, ಆರೋಗ್ಯ, ಸಾಂಸ್ಕೃತಿಕ, ಕ್ರೀಡಾ ಕ್ಷೇತ್ರಗಳಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಸಮಾಜ ಸೇವೆಗೈಯುತ್ತಿರುವ ಪುಂಜಾಲಕಟ್ಟೆಯ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‌ನ 33ನೇ ಸಂಭ್ರಮಾಚರಣೆಯ ಪ್ರಯುಕ್ತ ೯ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ ಮಾ.೫ರಂದು ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ಜರಗಲಿದೆ ಎಂದು ಕ್ಲಬ್‌ನ ಸ್ಥಾಪಕಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಅವರು ತಿಳಿಸಿದ್ದಾರೆ.
ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‌ನಲ್ಲಿ ಬುಧವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬೆಳಗ್ಗೆ 9.30 ಕ್ಕೆ ಬಸವನಗುಡಿ ಬಸವೇಶ್ವರ ದೇವಾಲಯದ ವಠಾರದಿಂದ ವಧು-ವರರ ದಿಬ್ಬಣ ಮೆರವಣಿಗೆ ವಿವಿಧ ಸ್ತಬ್ಧ ಚಿತ್ರ ಹಾಗೂ ಜಿಲ್ಲೆಯ ಪ್ರಸಿದ್ಧ ಕಲಾತಂಡಗಳೊಂದಿಗೆ ಕೇರಳ ಚೆಂಡೆಗಳ ವೈಭವಪೂರ್ವಕವಾಗಿ ಮದುವೆ ಮಂಟಪದವರೆಗೆ ಸಾಗಿ ಬರಲಿದೆ. ಬಿಜೆಪಿ ನಗರ ಯುವ ಮೋರ್ಛಾದ ಕಾರ್ಯದರ್ಶಿ ನಂದನ್ ಮಲ್ಯ,ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವದಾಸ ಶೆಟ್ಟಿ,ಜಿಲ್ಲಾ ದಲಿತ ನಾಗರಿಕ ಹಿತರಕ್ಷಣಾ ಯುವ ವೇದಿಕೆಯ ಸತೀಶ್ ಅರಳ,ಪಿಲಾತಬೆಟ್ಟು ಪಂಚಾಯತ್ ಮಾಜಿ ಅಧ್ಯಕ್ಷ ನಾರಾಯಣ ಶೆಟ್ಟಿ,ಗ್ರಾ.ಪಂ.ಮಾಜಿ ಅಧ್ಯಕ್ಷ ಸಂಜೀವ ಪೂಜಾರಿ ಅವರು ವಿವಿಧ ಗಣ್ಯರ ಉಪಸ್ಥಿತಿಯಲ್ಲಿ ದಿಬ್ಬಣಕ್ಕೆ ಚಾಲನೆ ನೀಡಲಿರುವರು.
ಗುರುವಾಯನಕೆರೆ ಕೃಷ್ಣಭಟ್ ಅವರ ಪೌರೋಹಿತ್ಯದಲ್ಲಿ , ಮಧ್ಯಾಹ್ನ 12.18 ಶುಭ ಮುಹೂರ್ತದಲ್ಲಿ 14 ಜೋಡಿ ವಧು-ವರರು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಹಸೆಮಣೆ ಏರಲಿದ್ದಾರೆ. ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಐವರಿಗೆ ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ ಮತ್ತು ಐವರಿಗೆ ಸ್ವಸ್ತಿಕ್ ಸಂಭ್ರಮ ಪುರಸ್ಕಾರ ಮಾಡಲಾಗುವುದು. ಹಾಗೆಯೇ ಕುಕ್ಕೇಡಿ ಶಿರೀ ಶಾರದಾಂಭ ಭಜನ ಮಂಡಳಿಯ ಸಮಾಜ ಸೇವೆಯನ್ನು ಗುರುತಿಸಿ ಅತ್ಯುತ್ತಮ ಯುವ ಸಂಘಟನೆಯ ಪ್ರಶಸ್ತಿಗೆ ಅಯ್ಕೆ ಮಾಡಲಾಗಿದೆ. ಕುತ್ಯಾಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ,ಚಲನಚಿತ್ರ ನಟ ವಿನೋದ್ ಆಳ್ವ ಸಭಾ ಕಾರ್ಯಕ್ರಮ ಉದ್ಘಾಟಿಸಲಿರುವರು. ಪ್ರಗತಿಪರ ಕೃಷಿಕ ರಾಜೇಶ್ ನಾಕ್ ಉಳಿಪಾಡಿಗುತ್ತು ಅವರು ಅಧ್ಯಕ್ಷತೆ ವಹಿಸಲಿರುವರು. ಸಂಸದ ನಳಿನ್ ಕುಮಾರ್ ಕಟೀಲು, ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ಪ್ರಾದೇಶಿಕ ನಿರ್ದೇಶಕ ಮಹಾವೀರ್ ಅಜ್ರಿ ಅವರು ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಿರುವರು. ವಿಧಾನಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ನಾಗರಾಜ್ ಶೆಟ್ಟಿ, ಜೆಸಿಐ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ಜೆಎಫ್‌ಎಂ ಪುರಂದರ ರೈ ಅವರು ಶುಭಾಶಂಸನೆ ನೀಡಲಿರುವರು. ಪಾದೆಗುತ್ತು ಸ್ವರ್ಣಲತಾ ಮತ್ತು ವಸಂತ ಹೆಗ್ಡೆ ಅವರು ತಾಳಿ ವಿತರಿಸುವರು ಮತ್ತಿತರರ ಗಣ್ಯ ವ್ಯಕ್ತಿಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ವಿಶೇಷ ಆಕರ್ಷಣೆಯಾಗಿ ಚಲನಚಿತ್ರ ತಾರೆಯರಾದ ಜಗ್ಗೇಶ್,ತಾರಾ ಮತ್ತಿತರರು ಭಾಗವಹಿಸಲಿರುವರು. ಸಂಜೆ ಸಾಂಸ್ಕೃತಿಕ ಅಂಗವಾಗಿ ತುಳು ನಾಟಕ ಪ್ರದರ್ಶನವಿದ್ದು ಇದೇ ವೇಳೆ ತುಳು ನಾಟಕ ಸ್ಪರ್ಧೆಯ ವಿಜೇತಕರಿಗೆ ಬಹುಮಾನವನ್ನು ವಿತರಿಸಲಾಗುವುದು ಎಂದು ತಿಳಿಸಿದ ಅವರು ಮುಂದಿನ ವರ್ಷ ಸಾಮೂಹಿಕ ವಿವಾಹದ ದಶಮಾನೋತ್ಸವ ಅಚರಿಸಲಿರುವ ಹಿನ್ನಲೆಯಲ್ಲಿ ನೂರು ಜೋಡಿಗಳಿಗೆ ವಿವಾಹ ಮಾಡಲು ಸಂಕಲ್ಪ ಮಾಡಲಾಗಿದೆ ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕ್ಲಬ್ ಅಧ್ಯಕ್ಷ ಪ್ರಶಾಂತ್‌ಪುಂಜಾಲಕಟ್ಟೆ,ಗೌರವಾಧ್ಯಕ್ಷ ಅಬ್ದುಲ್ಲಾ ಪಿ.,ಮಾಜಿ ಅಧ್ಯಕ್ಷರುಗಳಾದ ಮಾಧವ ಬಂಗೇರ,ಪಿ.ಎಂ.ಪ್ರಭಾಕರ,ಕಾರ್ಯದರ್ಶಿ ಜಯರಾಜ ಅತ್ತಾಜೆ,ಪ್ರಮುಖರಾದ ಚಂದ್ರಶೇಖರ ಶೆಟ್ಟಿ,ರಾಜೇಶ್ ಪಿ.,ಪ್ರಕಾಶ್ ಅನಿಲಡೆ,ವಿಶ್ವನಾಥ ಪೂಜಾರಿ ಉಪಸ್ಥಿತರಿದ್ದರು.
ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ : ಡಾ|ರಾಜಶೇಖರ್ ಕೋಟ್ಯಾನ್-(ಚಲನಚಿತ್ರ ರಂಗ),ಸಂಜಯ್ ಕುಮಾರ್ ಶೆಟ್ಟಿ ಗೋಣಿಬೀಡು-(ಯಕ್ಷಗಾನ ಕ್ಷೇತ್ರ), ವಿನಾಯಕ ರಾವ್-(ಸಮಾಜ ಸೇವೆ ), ರಮೇಶ್ ಬಾಯಾರು-(ಶಿಕ್ಷಣ ಕ್ಷೇತ್ರ),ರಮೇಶ್ ಕಲ್ಲಡ್ಕ-(ಕಲಾ ಕ್ಷೇತ್ರ) ಅವರು ಆಯ್ಕೆಯಾಗಿದ್ದಾರೆ.
ಸ್ವಸ್ತಿಕ್ ಸಂಭ್ರಮ ಪುರಸ್ಕಾರ ಪ್ರಶಸ್ತಿ : ಕಿಶೋರ್ ಪೆರಾಜೆ-(ಪತ್ರಿಕೋದ್ಯಮ),ಸಂಜೀವ ಶೆಟ್ಟಿ ಮುಗೆರೋಡಿ-(ಕ್ರೀಡಾ ಕ್ಷೇತ್ರ),ಶೇಖರ ನಾರಾವಿ-(ಸಮಾಜಸೇವೆ),ಕೆ.ಧರ್ಮಪಾಲ-(ಸರಕಾರಿ ಸೇವೆ),ಕು|ಶೃತಿ ದಾಸ್-(ಬಹುಮುಖ ಪ್ರತಿಭೆ) ಹಾಗೂ ಅತ್ಯುತ್ತಮ ಯುವ ಸಂಘಟನೆ ಸಮಾಜ ಸೇವೆಗಾಗಿ ಶ್ರೀ ಶಾರದಾಂಭ ಭಜನಾ ಮಂಡಳಿ ಕುಕ್ಕೇಡಿ,ಬುಳೆಕ್ಕರ ಅವರು ಆಯ್ಕೆಯಾಗಿದ್ದಾರೆ.
Be the first to comment on "ಮಾ.5: ಪುಂಜಾಲಕಟ್ಟೆಯಲ್ಲಿ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ವತಿಯಿಂದ ಉಚಿತ ವಿವಾಹ"