ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಹತ್ತನೇ ವರ್ಷಾಚರಣೆಯ ಪ್ರಯುಕ್ತ ಪಾಪ್ಯುಲರ್ ಫ್ರಂಟ್ ಫರಂಗಿಪೇಟೆ ವಲಯದ ವತಿಯಿಂದ ಮಂಗಳೂರು ಕೆ.ಎಂ.ಸಿ. ಆಸ್ಪತ್ರೆಯ ಸಹಭಾಗಿತ್ವದಲ್ಲಿ ಮಾರ್ಚ್ 5ರಂದು ಬೆಳಗ್ಗೆ 9 ಗಂಟೆಗೆ ಮಾರಿಪಳ್ಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬ್ರಹತ್ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ.
ಶಿಬಿರದಲ್ಲಿ ಪಿ.ಎಫ್.ಐ. ಫರಂಗಿಪೇಟೆ ವಲಯ ಅಧ್ಯಕ್ಷ ನಝೀರ್ ಹತ್ತನೇಮೈಲುಗಲ್ಲು ಅಧ್ಯಕ್ಷತೆ ವಹಿಸಲಿದ್ದು, ಪಿ.ಎಫ್.ಐ. ಬಂಟ್ವಾಳ ತಾಲೂಕು ಅಧ್ಯಕ್ಷ ಸಲೀಂ ಕುಂಪನಮಜಲು, ಬಿ.ಸಿ.ರೋಡ್ ಡಿವಿಶನ್ ಅಧ್ಯಕ್ಎ.ಕೆ. ಇಮ್ತಿಯಾಝ್ ತುಂಬೆ, ತುಂಬೆ ವಲಯ ಅಧ್ಯಕ್ಷ ಮುಹಮ್ಮದ್ ಇರ್ಫಾನ್, ತುಂಬೆ ಜುಮಾ ಮಸೀದಿ ಅಧ್ಯಕ್ಷ ಹಾಜಿ. ಅಬೂಬಕ್ಕರ್, ವಳವೂರು ಅರಬನ ಖಿಲ್ ರಿಯಾ ಮಸೀದಿ ಅಧ್ಯಕ್ಷ ಸಾವುಂಞಿ, ಮಾರಿಪಳ್ಳ ಜುಮಾ ಮಸೀದಿ ಉಪಾಧ್ಯಕ್ಷ ಕೆ.ಬಾವ, ಕೆ.ಎಂ.ಸಿ. ರಕ್ತ ನಿಧಿ ಅಧಿಕಾರಿ ಡಾ. ಭವಾನಿ ಶಂಕರ್, ಪುದು ಗ್ರಾಮ ಪಂಚಾಯತ್ ಸದಸ್ಯರಾದ ಸುಲೈಮಾನ್ ಉಸ್ತಾದ್, ರಮ್ಲಾನ್ ಮಾರಿಪಳ್ಳ, ತುಂಬೆ ಗ್ರಾಮ ಪಂಚಾಯತ್ ಸದಸ್ಯ ಝಹೂರ್ ಅಹ್ಮದ್, ರಿಸ್ಕ್ಯೂ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅಬ್ದುಲ್ ಜಬ್ಬಾರ್ ಮಾರಿಪಳ್ಳ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Be the first to comment on "ಮಾ. 5ರಂದು ಮಾರಿಪಳ್ಳದಲ್ಲಿ ಪಿ.ಎಫ್.ಐ.ಯಿಂದ ರಕ್ತದಾನ ಶಿಬಿರ "