ಮಂಗ್ಲಿಮಾರ್ ದೈವಸ್ಥಾನ ಬ್ರಹ್ಮಕಲಶೋತ್ಸವಕ್ಕೆ ಹೊರೆ ಕಾಣಿಕೆ ಮೆರವಣಿಗೆ

ಅಮ್ಟಾಡಿ ಗ್ರಾಮದ ಮಂಗ್ಲಿಮಾರ್ ಶ್ರೀ ಅಣ್ಣಪ್ಪ ಪಂಜುರ್ಲಿ ಧೂಮಾವತಿ ಬಂಟ ಹಾಗೂ ಪರಿವಾರ ದೈವಗಳ ನೂತನವಾಗಿ ನಿರ್ಮಾಣಗೊಂಡ ದೈವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪ್ರಯುಕ್ತ ಹೊರೆ ಕಾಣಿಕೆ ಮೆರವಣಿಗೆಯು ಗುರುವಾರ ವೈಭವಪೂರ್ಣವಾಗಿ ಬಿ.ಸಿ.ರೋಡಿನಲ್ಲಿ ಸಾಗಿತು.

ಬಿ.ಸಿ.ರೋಡ್ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದ ಬಳಿ ಹೊರೆ ಕಾಣಿಕೆ ಮೆರವಣಿಗೆಗೆ ಚಾಲನೆ ನೀಡಲಾಯಿತು. ಇಲ್ಲಿಂದ ಹೊರಟ ಮೆರವಣಿಗೆಯು ಕೈಕಂಬ-ಪೊಳಲಿ ದ್ವಾರದ ಮೂಲಕ ಮಂಗ್ಲಿಮಾರ್ ದೈವಸ್ಥಾನದಲ್ಲಿ ಸಂಪನ್ನಗೊಂಡಿತ್ತು. ಗೊಂಬೆ ಕುಣಿತ, ವಿವಿಧ ವಾಧ್ಯಗೋಷ್ಠಿ, ನಾಸಿಕ್ ಬ್ಯಾಂಡ್, ಚೆಂಡೆ ಮೆರವಣಿಗೆಗೆ ವಿಶೇಷ ಮೆರಗು ನೀಡಿತು.

ದೈವಸ್ಥಾನದ ಆಡಳಿತ ಮೊಕ್ತೇಶ್ವರ ಬಡಾಜೆ ಎ.ರವಿಶಂಕರ್ ಶೆಟ್ಟಿ, ವಿವಿಧ ಸಮಿತಿ ಪದಾಧಿಕಾರಿಗಳಾದ ಭುವನೇಶ್ ಪಚ್ಚಿನಡ್ಕ, ತಾರನಾಥ ಕೆ., ಬಸಂತ ಕುಮಾರ್, ಪುಷ್ಪರಾಜ ಶೆಟ್ಟಿ, ಪುರುಷ ಎನ್. ಸಾಲ್ಯಾನ್, ಸತೀಶ್ ಬಂಡಾರಿ, ಬೇಬಿ ಕುಂದರ್, ರಮೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ