ಬೆಂಗಳೂರು ಬಸವೇಶ್ವರ ನಗರದಲ್ಲಿ ಇತ್ತೀಚೆಗೆ ನಡೆದ ಟೇಕ್ವಾಂಡೋ ಓಪನ್ ಚಾಂಪಿಯನ್‌ಶಿಪ್ ಪಂದ್ಯಾವಳಿಯ ವಿವಿಧ ವಿಭಾಗಗಳಲ್ಲಿ ತೌಹೀದ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಒಟ್ಟು ೫ ಚಿನ್ನದ ಪದಕಗಳನ್ನು, ಹತ್ತು ಬೆಳ್ಳಿಪದಕಗಳನ್ನು ಹಾಗೂ ಹತ್ತು ಕಂಚಿನ ಪದಕಗಳನ್ನು ಜಯಿಸಿದ್ದಾರೆ.
ಚಿನ್ನ ವಿಜೇತರು: ಕೆಡೆಟ್ ಬಾಲಕರ ೪೧ ಕೆ.ಜಿ.ಯೊಳಗಿನ ವಿಭಾಗದಲ್ಲಿ ಮುಹಮ್ಮದ್ ರಾಝಿಕ್ ಕೈಕಂಬ,ಕೆಡೆಟ್ ಬಾಲಕರ ೩೦ಕೆ.ಜಿ ಯೊಳಗಿನ ವಿಭಾಗದಲ್ಲಿ ವಿಲಾಯತ್ ರಾಫಿ ಗೂಡಿನಬಳಿ,೩೫ಕೆ.ಜಿಯೊಳಗಿನ ವಿಭಾಗದಲ್ಲಿ ಇಶಾತ್ ಪರ್ಲ್ಯ, ೨೮ ಕೆ.ಜಿಯೊಳಗಿನ ವಿಭಾಗದಲ್ಲಿ ಮುಹಮ್ಮದ್ ಮುಹ್ಸಿನ್ ಪರ್ಲ್ಯ,ಜೂನಿಯರ್ ೨೫ ಕೆ.ಜಿ ಯೊಳಗಿನ ವಿಭಾಗದಲ್ಲಿ ಮುಹಮ್ಮದ್ ರೈಫಾನ್ ಶಾಂತಿಯಂಗಡಿ.
ಬೆಳ್ಳಿ ಪದಕ ಪಡೆದವರು: ಮುಹಮ್ಮದ್ ಆಕಿಬ್ ಗುಡ್ಡೆಅಂಗಡಿ, ಮುಹಮ್ಮದ್ ಫಹೀಮ್ ಇಸ್ಮಾಯಿಲ್ ಗೂಡಿನಬಳಿ,ಮುಹಮ್ಮದ್ ಝಮ್‌ರಾದ್ ಪರ್ಲ್ಯ,ಮುಹಮ್ಮದ್ ಅಝಾಲಾಮ್ ಬಿ.ಸಿ.ರೋಡ್,ಮುಹಮ್ಮದ್ ಮುನವ್ವರ್ ಹುಸೈನ್ ಪರ್ಲ್ಯ,ಮುಹಮ್ಮದ್ ಫಹೀಂ ಕೈಕಂಬ,ಮುಹಮ್ಮದ್ ಆತೀಸ್ ಗೂಡಿನಬಳಿ, ಬಿ.ಅಹ್ಮದ್ ಶಾಝಿನ್ ಬಂಟ್ವಾಳ, ಅಬ್ದುಲ್ ರಾಝಿಕ್, ಮೊಹಮ್ಮದ್ ಆದಿಲ್.
ಉಳಿದಂತೆ ಹನ್ನೊಂದು ವಿದ್ಯಾರ್ಥಿಗಳು ಹಾಗೂ ಒಂದು ವಿದ್ಯಾರ್ಥಿನಿ ಸೇರಿ ಕಂಚಿನ ಪದಕ ಜಯಿಸಿದ್ದಾರೆ. ವಿವಿಧ ವಿಭಾಗಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 600 ವಿದ್ಯಾರ್ಥಿಗಳು ಭಾಗವಹಿಸಿದ್ದರು. ರಾಜ್ಯ ಟೇಕ್ವಾಂಡೋ ಅಸೋಶಿಯೇಷನ್‌ನ ದ.ಕ ಜಿಲ್ಲಾ ಸಮಿತಿಯ ಇಬ್ರಾಹೀಂ ನಂದಾವರ ಹಾಗೂ ಇಸ್ಹಾಖ್ ನಂದಾವರ ತರಬೇತಿ ನೀಡಿದ್ದರು. ವಿಜೇತ ವಿದ್ಯಾರ್ಥಿಗಳನ್ನು ಶಾಲೆಯಲ್ಲಿ ಸನ್ಮಾನಿಸಲಾಯಿತು. ಸನ್ಮಾನ ಸಮಾರಂಭದಲ್ಲಿ ಶಾಲಾ ಕಾರ್ಯದರ್ಶಿಯಾದ ಹಾಜಿ ಬಿ.ಎ ಮುಹಮ್ಮದ್, ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮುಖ್ಯೋಪಾದ್ಯಾಯಿನಿಯಾದ ಮೆಟಿಲ್ಡಾ ಡಿ*ಕೋಸ್ತಾ ಮತ್ತು ಕೆ.ಜಿ. ವಿಭಾಗದ ಮುಖ್ಯ ಶಿಕ್ಷಕಿ ಮಮತ ಸುವರ್ಣ ಹಾಜರಿದ್ದರು.
Be the first to comment on "ಬಂಟ್ವಾಳ ತೌಹೀದ್ ಆಂಗ್ಲ ಮಾಧ್ಯಮ ಶಾಲೆಗೆ ಪದಕ"