ಗುಂಡ್ಯ ಸಮೀಪದ ಶಿರಿಬಾಗಿಲು ಎಡಕುಮೇರಿ ರೈಲ್ವೇ ಟ್ರಾಕ್ ಗೆ ತೆರಳುವ ರಸ್ತೆ ಸಮೀಪ ಸುರಂಗ ಮಾರ್ಗದ ಕೆಲಸ ಮಾಡುವ ಜನರನ್ನು ಹೊತ್ತು ಸಾಗುತ್ತಿದ್ದ ಪಿಕಪ್ ಆಕ್ಸಿಲ್ ತುಂಡಾಗಿ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಇಬ್ಬರು ಮೃತಪಟ್ಟಿದ್ದಾರೆ.
ಪಿಕಪ್ ನಲ್ಲಿದ್ದ ಪಶ್ಚಿಮ ಬಂಗಾಳ ಮೂಲದ ವಿಕಾಸ್ ( 26), ಆಶಿಕ್ (25) ಎಂಬವರು ಸ್ಥಳದಲ್ಲೇ ಸಾವನ್ನಪ್ಪಿದವರು. ಬಿಜೇಂದ್ರ ಹತ್ವಾಲ್ (42), ಶಂಭು (28), ರಾಜನ್ ( 25), ಬಿಜಯ್ (25 ) ತೀವ್ರ ಗಾಯಗೊಂಡವರು.
Be the first to comment on "ಪಿಕಪ್ ಕಂದಕಕ್ಕೆ ಉರುಳಿ ಇಬ್ಬರ ಸಾವು"