ಬಂಟ್ವಾಳದ ಶ್ರೀ ವೆಂಕಟರಮಣ ಸ್ವಾವಿ ಕಾಲೇಜಿನಲ್ಲಿ ಗರ್ಭಕೋಶ ಕ್ಯಾನ್ಸರ್ ಮತ್ತು ಸ್ತನ ಕ್ಯಾನ್ಸರ್ ಬಗೆಗಿನ ಅರಿವು ಕಾರ್ಯಕ್ರಮವನ್ನು ಮಂಗಳೂರಿನ ವೈದ್ಯ ಡಾ.ರೋಹನ್ ಗಟ್ಟಿ ಉದ್ಘಾಟಿಸಿದರು.
ರೋಗ ಬಾರದ ರೀತಿಯಲ್ಲಿ ಮುಂಜಾಗೃತ ಕ್ರಮ ಕೈಗೊಳ್ಳುವುದು ಇಂದಿನ ತುರ್ತು ಅವಶ್ಯಕತೆ ಎಂದರು. ಪ್ರತಿಯೊಂದು ದೇಹಕ್ಕೂ ವಿವಿಧ ರೀತಿಯ ರೋಗವು ಭಾದಿಸುತ್ತಿರುತ್ತವೆ. ಕಾಯಿಲೆ ಬಾರದ ರೀತಿಯಲ್ಲಿ ಪ್ರತಿಯೊಬ್ಬನೂ ಎಚ್ಚರವಹಿಸುವುದು ಅಗತ್ಯ. ನಮ್ಮ ಸುತ್ತಣ ಪರಿಸರ ಮತ್ತು ನಮ್ಮ ಆಹಾರ ಪದ್ಧತಿಯೂ ನಮಗೆ ಆವರಿಸುವ ಮಾರಕ ಕಾಯಿಲೆಗಳಿಗೆ ಕಾರಣ. ರೋಗ ಪರಿಹಾರಕ್ಕಿಂತ ಅದರ ತಡೆಗಟ್ಟುವಿಕೆಯ ಕಡೆ ನಾವು ಗಮನ ನೀಡಬೇಕು. ಆರೋಗ್ಯವೇ ಭಾಗ್ಯ ಎಂಬುದನ್ನು ಅರಿತು ನಾವಿಂದು ಬದುಕಬೇಕಾಗಿದೆ ಎಂದವರು ಹೇಳಿದರು.
ಸ್ತ್ರೀ ರೋಗ ತಜ್ಞೆ ಭಾಗ್ಯಶ್ರೀ ಬಾಳಿಗಾ ಗರ್ಭಕೋಶದ ಕ್ಯಾನ್ಸರ್ ಬಗ್ಗೆ ಮಾಹಿತಿ ನೀಡಿದರು. ಇಂಡಿಯನ್ ಮೆಡಿಕಲ್ ಎಸೋಸಿಯೇಶನ್ ಬಂಟ್ವಾಳ ಅಧ್ಯಕ್ಷರಾದ ಡಾ. ಅಶ್ವಿನ್ ಬಾಳಿಗಾ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ. ಪಾಂಡುರಂಗ ನಾಯಕ್ ಸ್ವಾಗತಿಸಿದರು. ಇಂಡಿಯನ್ ಮೆಡಿಕಲ್ ಎಸೋಸಿಯೇಶನ್ ಬಂಟ್ವಾಳ ಇದರ ಕಾರ್ಯದರ್ಶಿ ಡಾ. ಮಹೇಶ್ ಭಟ್ ವಂದಿಸಿದರು. ಬಂಟ್ವಾಳ ತಾಲೂಕಿನ ವಿವಿಧ ಶಾಲೆಗಳ ೪೦ ಶಿಕ್ಷಕಿಯರು, ಶ್ರೀ ವೆಂಕಟರಮಣ ಸ್ವಾವಿ ಕಾಲೇಜಿನ ಉಪನ್ಯಾಸಕಿಯರು ಮತ್ತು ವಿದ್ಯಾರ್ಥಿಗಳು ಅರಿವು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇಂಡಿಯನ್ ಮೆಡಿಕಲ್ ಎಸೋಸಿಯೇಶನ್ ಬಂಟ್ವಾಳ ಮತ್ತು ಮಂಗಳೂರು ಇನ್ಸೂಟ್ಯೂಟ್ ಆಫ್ ಅಂಕೋಲಜಿ ಹಾಗೂ ಶ್ರೀ ವೆಂಕಟರಮಣ ಸ್ವಾವಿ ಕಾಲೇಜಿನ ಲೇಡಿಸ್ ಕ್ಲಬ್ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಿತು.
Be the first to comment on "ಬಂಟ್ವಾಳ ಎಸ್.ವಿ.ಎಸ್. ಕಾಲೇಜಿನಲ್ಲಿ ಕ್ಯಾನ್ಸರ್ ಅರಿವು"