ಪಕ್ಕದಲ್ಲೇ ಇದ್ದ ಎಟಿಎಂನಿಂದ ಡ್ರಾ ಮಾಡಿದ ನೋಟನ್ನು ಚಿಲ್ಲರೆ ಮಾಡಲೆಂದು ಬ್ಯಾಂಕಿಗೆ ಹೋದಾಗ ಆ ನೋಟಿನ ಮೇಲೆ ಅನುಮಾನಪಟ್ಟ ಬ್ಯಾಂಕಿ ಸಿಬ್ಬಂದಿ ಚಿಲ್ಲರೆ ನೀಡಲು ನಿರಾಕರಿಸಿದ ಘಟನೆ ಬಿ.ಸಿ.ರೋಡಿನಲ್ಲಿ ಸೋಮವಾರ ಗೊಂದಲಕ್ಕೆ ಕಾರಣವಾಯಿತು.
ಬೆಳಗ್ಗೆ ಶಿಕ್ಷಕಿಯೊಬ್ಬರು ಎಟಿಎಂನಿಂದ ಸುಮಾರು ಮೂವತ್ತು ಸಾವಿರ ರೂಪಾಯಿ ನೋಟು ತೆಗೆದಿದ್ದರು. ಇದರಲ್ಲಿ ಎರಡು ಎರಡು ಸಾವಿರ ರೂಪಾಯಿಗಳ ನೋಟನ್ನು ಚಿಲ್ಲರೆ ಮಾಡಿಸಲೆಂದು ಕೂಡಲೇ ಪಕ್ಕದಲ್ಲಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಕ್ಕೆ ತೆರಳಿದರು. ಆದರೆ ಅಲ್ಲಿನ ಸಿಬ್ಬಂದಿ, ನೋಟು ನಕಲಿ ಎಂದು ಶಂಕೆ ವ್ಯಕ್ತಪಡಿಸಿ, ಚಿಲ್ಲರೆ ನೀಡಲು ನಿರಾಕರಿಸಿದರು.
ಇದು ಗೊಂದಲಕ್ಕೆ ಕಾರಣವಾಯಿತು. ಕೂಡಲೇ ಶಿಕ್ಷಕಿ ನಿಮ್ಮದೇ ಎಟಿಎಂನಲ್ಲಿ ಪಡೆದ ನೋಟಲ್ಲವೇ ಎಂದು ಪ್ರಶ್ನಿಸಿದಾಗ ಬ್ಯಾಂಕಿನ ಮ್ಯಾನೇಜರ್ ಸಹಿತ ಇತರರೂ ಸ್ಪಷ್ಟ ಸಮಾಧಾನ ಒದಗಿಸಲು ವಿಫಲರಾದರು. ಶಿಕ್ಷಕಿ ಪರವಾಗಿ ಇತರ ಗ್ರಾಹಕರು ನಿಂತಾಗ ಸ್ಥಳದಲ್ಲಿ ಮತ್ತಷ್ಟು ಗೊಂದಲ ಸೃಷ್ಟಿಯಾಯಿತು. ಸುದ್ದಿ ತಿಳಿದ ಬಂಟ್ವಾಳ ನಗರ ಪೊಲೀಸರು ಸ್ಥಳಕ್ಕಾಗಮಿಸಿದರು. ವಾದ, ವಿವಾದಗಳು ಜಾಸ್ತಿಯಾಗುತ್ತಿದ್ದಂತೆ ಬಳಿಕ ಪೊಲೀಸರ ಮಧ್ಯಸ್ಥಿಕೆಯಿಂದ ಶಿಕ್ಷಕಿ ನೀಡಿದ ಅದೇ ನೋಟುಗಳಿಗೆ ಬ್ಯಾಂಕಿನಲ್ಲಿ ಚಿಲ್ಲರೆ ಹಣ ದೊರೆಯಿತು.
Be the first to comment on "ನೋಟಿನ ಮೇಲೆ ಅನುಮಾನ, ಬ್ಯಾಂಕಿನಲ್ಲಿ ಗೊಂದಲ"