ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಿ ಸನ್ನಿಯಲ್ಲಿ ವರ್ಷಾವ ಉತ್ಸವ ಮಾರ್ಚ್ 16 ರಿಂದ 18 ವರೆಗೆ ನಡೆಯಲಿದೆ ಎಂದು ಶ್ರೀ ರಕ್ತೇಶ್ವರಿ ದೇವಿ ಸೇವಾ ಸಮಿತಿ ಅಧ್ಯಕ್ಷ ಬಿ..ಸೋಮನಾಥ ನಾಯ್ಡು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭ ಪ್ರತಿದಿನ ಸಂಜೆ 6.30 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ರಾತ್ರಿ 8.30 ರಿಂದ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಸಂತರ್ಪಣೆ ನಡೆಯಲಿದೆ.
16ರಂದು ಸಂಜೆ ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ ಪೊಳಲಿ ಇವರಿಂದ ಭಜನೆ, 17ರಂದು ಬಂಟ್ವಾಳ ಶ್ರೀ ರಾಮಮಂದಿರ ರಾಮನಗರ ತಂಡದಿಂದ ಭಜನೆ, 18 ರಂದು ಸಂಜೆ ಅಲೆತ್ತೂರು ಹವ್ಯಾಸಿ ಕಲಾ ಸಂಘದಿಂದ ವೀರ ಸುಂದೋಪಸುಂದ ಯಕ್ಷಗಾನ ನಡೆಯಲಿದೆ. ಅಂದು ಸಂಜೆ ವಿಶೇಷವಾಗಿ ಸಪ್ತಶತಿ ಪಾರಾಯಣ ಸಹಿತ ದುರ್ಗಾನಮಸ್ಕಾರ ಪೂಜೆ ನಡೆಯುವುದು ಎಂದು ಪ್ರಕಟಣೆ ತಿಳಿಸಿದೆ.
Be the first to comment on "ರಕ್ತೇಶ್ವರಿ ಸನ್ನಿಯಲ್ಲಿ ವರ್ಷಾವಧಿ ಉತ್ಸವ"