ಬಾಂಗ್ಲಾ ದೇಶದಿಂದ ಯಾವುದೇ ರಹದಾರಿ ಹೊಂದದೆ, ಯಾವುದೋ ರೀತಿಯಲ್ಲಿ ನುಸುಳಿ ಭಾರತಕ್ಕೆ ಬಂದು ಅನಧಿಕೃತವಾಗಿ ಭಾರತ ದೇಶದಲ್ಲಿದ್ದು ಬೆಳ್ತಂಗಡಿ ತಾಲೂಕು, ಕಾಶಿಪಟ್ನ ಗ್ರಾಮದಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸದಲ್ಲಿ ತೊಡಗಿದ್ದ 14 ಮಂದಿ ಬಾಂಗ್ಲಾ ದೇಶದವರನ್ನು ಖಚಿತ ಮಾಹಿತಿ ಮೇರೆಗೆ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಬಂಟ್ವಾಳ ಡಿವೈ ಎಸ್ ರವೀಶ್ ರವರ ನೇತೃತ್ವದಲ್ಲಿ, ಸಿಪಿಐ ಬೆಳ್ತಂಗಡಿ ,ವೇಣೂರು ಪೊಲೀಸ್ ಠಾಣಾ ಸಹಾಯಕ ಪೊಲೀಸ್ ಉಪನಿರೀಕ್ಷಕ ಎಸ್. ಶೀನಪ್ಪ ಗೌಡ ರವರು ಸಿಬ್ಬಂದಿಗಳಾದ ಎಎಸ್‌ಐ ಓಡಿಯಪ್ಪ ಗೌಡ, ಹೆಚ್‌ಸಿ ಅಶೋಕ ಸಪಲ್ಯ, ಹೆಚ್‌ಸಿ ಶಿವರಾಮ, ಹೆಚ್‌ಸಿ ಹರೀಶ್ ನಾಯ್ಕ್, ಹೆಚ್‌ಸಿ ರೋಹಿನಾಥ್ ರವರೊಂದಿಗೆ ಸ್ಥಳಕ್ಕೆ ತೆರಳಿ ಯಾವುದೇ ರಹದಾರಿಯಿಲ್ಲದೆ ಭಾರತ ದೇಶಕ್ಕೆ ಅಕ್ರಮವಾಗಿ ವಲಸೆ ಬಂದು ಕೆಲಸ ಮಾಡಿಕೊಂಡಿದ್ದ 14 ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಯಿತು.
ಆರೋಪಿಗಳೆಲ್ಲರೂ ಬಾಂಗ್ಲಾ ದೇಶದ ಡಾಕಾ ರಾಜ್ಯದ ರಾಜಸೈ ಎಂಬಲ್ಲಿಯವರಾದ ಮಹಮ್ಮದ್ ಜಹಾಂಗೀರ್ (26), ಅಬ್ದುಲ್ ಹಾಕಿಂ (25), ಮಹಮ್ಮದ್ ಆಲಂಗೀರ್ (27), ಅಬ್ದುಲ್ ಹಾಲಿಂ (19), ಎಮ್.ಡಿ ಮಹಮ್ಮದ್ ಅಜೀಜಲ್ಲ್ (19), ಎಮ್ ಡಿ ಬಾಬು (20), ಜೋಹರುಲ್ಲ್ ಇಸ್ಲಾಂ (24), ಮಹಮ್ಮದ್ ಸೊಹಿದುಲ್ ಇಸ್ಲಾಂ (30) ಮಹಮ್ಮದ್ ಇಕ್ಬಾಲ್ ಆಲಿ(19), ಮಹಮ್ಮದ್ ಸೋಹೆಲ್ ರಾಣಾ (19), ಜೋಹರುಲ್ಲಾ ಇಸ್ಲಾಂ (35), ಮಹಮ್ಮದ್ ಸುಮನ್ ಆಲಿ (24), ಮಹಮ್ಮದ್ ಮೋಮಿನ್ (20), ಮಹಮ್ಮದ್ ಪುಲ್ಲಾಲ್ (19), ಹಾಗೂ ಇವರಿಗೆ ಆಶ್ರಯ ನೀಡಿ ಕೆಲಸ ಮಾಡಿಸುತ್ತಿದ್ದ ಸ್ಥಳೀಯ ನಿಸಾರ್ ಅಹಮ್ಮದ್, ಮೂಡಬಿದ್ರೆ ಎಂಬಾತನನ್ನು ವಶಕ್ಕೆ ಪಡೆದು ಎಲ್ಲರನ್ನು ದಸ್ತಗಿರಿ ಮಾಡಲಾಗಿದೆ.
ಇವರ ಮೇಲೆ ಕಲಂ: 370 (ಎ) (2) ಭಾ.ದಂ.ಸಂ ಮತ್ತು ಕಲಂ: 14 ವಿದೇಶಿಯರ ಅಧಿನಿಯಮ 1946 ರನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಲ್ಲದೆ ಜಿಲ್ಲೆಯಲ್ಲಿ ಇಂತಹ ಅಕ್ರಮ ವಲಸಿಗರ ಪತ್ತೆಗಾಗಿ ಒಂದು ವಿಶೇಷ ತಂಡವನ್ನು ರಚಿಸಿ ಮುಂಬರುವ ದಿನಗಳಲ್ಲಿ ವಿದೇಶಿ ಅಕ್ರಮ ವಲಸಿಗರ ವಿರುದ್ದ ಸೂಕ್ತ ಕಾನೂನು ಸಮರ ಕೈಗೊಳ್ಳಲಾಗುವುದು. ಜೊತೆಗೆ ಅಂತಹ ಅಕ್ರಮ ವಲಸಿಗರಿಗೆ ಆಶ್ರಯ ನೀಡಿದವರ ವಿರುದ್ದವೂ ಕಾನೂನು ಕ್ರಮ ಜರುಗಿಸುವುದಾಗಿದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ಭೂಷಣ್. ಜಿ. ಬೊರಸೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಕಟ್ಟಡ ಕೆಲಸದಲ್ಲಿ ತೊಡಗಿದ್ದ 14 ಬಾಂಗ್ಲಾ ದೇಶೀಯರ ಬಂಧನ"